ಇದೊಂದು ಚಿತ್ರವೋ ಅಥವ ಕಾದಂಬರಿಯನ್ನು ದೃಶ್ಯ ಕಾವ್ಯದಲ್ಲಿ ಮೂಡಿಸಿದ್ದೋ ಅದೇ ಅಚ್ಚರಿಯ ಮಾತಾಗುತ್ತದೆ.
ನಿಜ ಕಥೆಗಾರರೇ ಅದಕ್ಕೆ ಚಿತ್ರಕಥೆ ಬರೆದು, ಸಂಭಾಷಣೆಯನ್ನು ತಮ್ಮ ಕಾದಂಬರಿಯ ಪುಟಗಳಿಂದ ತೆಗೆದು ಅದಕ್ಕೆ ಇನ್ನಷ್ಟು ಹೊಳಪು ನೀಡಿ ನಿರ್ದೇಶನ ಮಾಡಿದರೆ ತಮ್ಮ ಮಗುವನ್ನು ತಾವೇ ಸಿಂಗರಿಸಿದಂತೆ.
ಸಾಹಿತಿ ಚದುರಂಗ ಅವರು ತಮ್ಮದೇ ಕಾದಂಬರಿ ಸರ್ವಮಂಗಳ ಅದೇ ಹೆಸರಿನ ಚಿತ್ರವನ್ನಾಗಿಸಿದ್ದಾರೆ.
ಈಕೆ ಹಳ್ಳಿಯಲ್ಲಿ ಬೆಳೆದ ಮಗಳು.. ಅಪ್ಪನ ದುಡ್ಡಿನ ದುರಾಸೆ.. ಆದರೆ ಸೋದರಮಾವನ ಒಡನಾಟ.. ಅದಕ್ಕೆ ತನ್ನ ತಾಯಿಯ ಒತ್ತಾಸೆ.. ಆದರೆ ವಿಧಿ ಅವರಿಬ್ಬರನ್ನು ಬೇರೆ ಬೇರೆ ಮಾಡಿ ಎರಡು ಕುಟುಂಬಗಳಾಗುತ್ತವೆ.
ಆದರೆ ಆ ಹೆಣ್ಣು ಮಗಳು ಮತ್ತು ಸೋದರಮಾವ ತಮ್ಮ ಪೂರ್ವ ಸ್ನೇಹವನ್ನು ಮರೆಯಲಾರದೆ ತೊಳಲಾಡುತ್ತಾ.. ವಿಧಿಯ ಅಟ್ಟಹಾಸದಿಂದ ಅರ್ಧ ಬದುಕಿನಲ್ಲಿಯೇ ಅಸು ನೀಗುತ್ತಾರೆ.
ಇದರ ಮಧ್ಯೆ ಅವರ ಬಂಧು ಬಾಂಧವರು ಕೊಡುವ ಕಾಟ, ಕುಹಕಗಳು, ಬಿರು ನುಡಿಗಳು, ಮನ ನೋಯಿಸುವ ಘಟನೆಗಳು ಚಿತ್ರದ ಓಟಕ್ಕೆ ಸಾಥ್ ನೀಡುತ್ತವೆ.
ಯಾರೂ ಏನೂ ಮಾಡದ ಪರಿಸ್ಥಿತಿ ಆದರೆ ಎಲ್ಲರಿಗೂ ಅದನ್ನು ಮೆಟ್ಟಿ ನಿಲ್ಲುವ ಅವಕಾಶವಿದ್ದರೂ ವಿಧಿಯ ಆಟ ಸಂಸಾರದ ಚಿತ್ರಣವನ್ನೇ ಬದಲಿಸುತ್ತದೆ..
ರಾಜಕುಮಾರ್ ಬಳಲುವ ಪ್ರೇಮಿಯಾಗಿ, ಪರಿತಪಿಸುವ ಪತಿಯಾಗಿ, ಸ್ವತಂತ್ರ ಹೋರಾಟಗಾರನಾಗಿ ಎಲ್ಲಾ ವಿಭಾಗಗಳಲ್ಲೂ ಗೆಲ್ಲುತ್ತಾರೆ. ನರಸಿಂಹಸ್ವಾಮಿ ಅವರ ನನ್ನವಳು ನನ್ನೆದೆಯ ಹೊನ್ನಾಡ ನಾಳುವಳು ಈ ಗೀತೆಯಲ್ಲಿ ಅಭಿನಯ ಸೊಗಸಾಗಿದೆ.
ಕಲ್ಪನಾ ಹೆಜ್ಜೆ ಹೆಜ್ಜೆಗೂ ತ್ಯಾಗದ ಕರುಣಾಮಯಿಯಾಗಿ ಗೆಲ್ಲುತ್ತಾರೆ
ಅಶ್ವಥ್ ಭಿನ್ನ ರೂಪ.. ಜೊತೆಗೆ ಅವರ ಆರಂಭಿಕ ಹಿನ್ನೆಲೆ ಮಾತುಗಳು.. ಮತ್ತೆ ಅವರ ಅಕ್ಕನ ಮೇಲೆ ಸಿಡಿದೇಳುವ.. ದೃಶ್ಯಗಳು ಸೊಗಸಾಗಿವೆ..
ಉಳಿದಂತೆ ಧನದಾಹಿ ಪಾತ್ರದಲ್ಲಿ ಸಂಪತ್, ಮಮತಾಮಯಿ ತಾಯಿಯಾಗಿ ಜಯಶ್ರೀ, ಕುಟುಕಿ ಪಾತ್ರದಲ್ಲಿ ಪಾಪಮ್ಮ, ಎಮ್ ಎನ್ ಲಕ್ಷೀದೇವಿ, ಪಾತ್ರೋಚಿತ ಅಭಿನಯ
ಪಿ ಬಿ ಶ್ರೀನಿವಾಸ್ ಅವರ ಜೊತೆಯಲ್ಲಿ ಎಸ್ ಜಾನಕೀ, ಪಿ ಸುಶೀಲ, ಎಲ್ ಆರ್ ಈಶ್ವರಿ ಇದ್ದಾರೆ
ಸಂಗೀತ ಸತ್ಯಂ ಅವರದ್ದು
ಛಾಯಾಗ್ರಹಣ ವಿ ಮನೋಹರ್
ಉತ್ತಮ ಚಿತ್ರದಲ್ಲಿ ಎಲ್ಲರದ್ದೂ ಸಂಯಮದ ಅಭಿನಯ!

No comments:
Post a Comment