Wednesday, July 18, 2012

Rajesh Khanna - The Phenomena (2012)

जिन्दगी बादी होनी चाहिहे लम्बी नही।..!!!


His famous dialogue from the evergreen movie "Anand"


He wrote a new chapter in the movie..irrespective of the language barrier.  He created his own path..where few dreaded to tread along.


His style, the looks, the tweaky smile, nodding head..all these made him a first of its kind in the movie world. He was simple man's lover boy.  


The scene where Rajesh says to Amitabh..."am seeing my death in your eyes..." my all time favorite dialogue. The beauty of friendship echoes in those words!!!!


The greatest movies I admire him was in Anand,  Namak Haram & Bawarchi. These are the perfect university for how lead the life.  


I admire him on most of his movies...but the best pick are :


1. Anand : How to lead the life when you know you are at the end of the tunnel.  His body language, dialogues, songs..his jugal bandhi with Amitabh, Johny Walker are still fresh in my memory.


2. Namak Haram : Always look at the situation from close quarters...be with them..then you realise the pain.  How neatly explains this basic principle in the movie..tailor made for Rajesh & Amitabh.


3. Baawarchi: Always we tend to miss the small small things which blows us out of the proportion..and ultimately we live in the mess...just take the small threads & neatly tie it..it becomes a perfect fabric.  just iron out the small small differences..you will get wrinkle free life..how beautifully essayed in this movie.


Ironically all the above three movies were from the table of Hrishikesh Mukherjee..and no doubt all these are few master pebbles from his table.


Long live Rajesh Khanna..you will be there with us forever... dialogue from your own movie...



आनंद मरा नही...आनंद मरेते नही।.. 


राजेश खन्न मरा नही राजेश खन्न मरते नही।..

ರಾಜೇಶ್ ಖನ್ನ...ಒಂದು ಸುಂದರ ಹೊಂಗನಸು (2012)

जिन्दगी बादी होनी चाहिहे लम्बी नही।..


ಅದ್ಧುತವಾದ ಸಂಭಾಷಣೆ.ಆನಂದ್ ಚಿತ್ರದಿಂದ.


ತನ್ನ ನಗು ಮುಖ, ರಾಗವಾಗಿ ಸಂಭಾಷಣೆ ಹೇಳುವ ಪರಿ, ಸುಂದರ ನಡಿಗೆ..ಆಗಿನ, ಈಗಿನ ಯುವಕ, ಯುವತಿಯರೆಲ್ಲರ ಮನವನ್ನು ಕದ್ದ ನಾಯಕ..


ಸಿನಿಮಾ ನಾಯಕನಾಗಲು ಕಟ್ಟು ಮಸ್ತಾದ ದೇಹವಿರಲೇ ಬೇಕು ಎನ್ನುವ ಅಲಿಖಿತ ನಿಯಮವನ್ನು ಕಿತ್ತು ಹಾಕಿದ ಅನೇಕ ನಾಯಕರಲ್ಲಿ ಮೊದಲಿಗೆ ನಿಲ್ಲುವಾತ ಈತ...ಆಗಿನ ಎಲ್ಲ ನಾಯಕರು ಒಂದಲ್ಲ ಒಂದು ಸ್ಟೈಲ್ ಗೆ ಹೆಸರಾಗಿದ್ದರು.  ರಾಜ್ ಕಪೂರ್ ದೇವಾನಂದ್, ದಿಲೀಪ್ ಕುಮಾರ್, ಶಮ್ಮಿ ಕಪೂರ್, ಮನೋಜ್ ಕುಮಾರ್, ಜಾಯ್ ಮುಖರ್ಜೀ,ಸುನಿಲ್ ದತ್, ಹೀಗೆ...ಅವರ ಮಧ್ಯೆ ತನ್ನ ತನವನ್ನು ಕಾಪಾಡಿಕೊಂಡು ಹಾಗೆಯೇ ಹೊಸದೊಂದು ಶಖೆಯನ್ನು  ಹುಟ್ಟು ಹಾಕಿದ ಕಲಾವಿದ...


ಶಕ್ತಿ ಸಾಮಂತ ನೀಡಿದ ಅದ್ಭುತ ಚಿತ್ರ ಆರಾಧನಾ..ಇಲ್ಲಿಂದ ಶುರುವಾಯಿತು ಕಿಶೋರ್-ರಾಜೇಶ್ ಜುಗಲ್ ಬಂಧಿ...
ಸುಲಲಿತ ಸಂಭಾಷಣೆ, ಹಾಡುಗಳು..ನಾಯಕಿಯರ ಜೊತೆ ಪ್ರೀತಿ, ಪ್ರೇಮ ಎಲ್ಲದರಲ್ಲೂ ಒಂದು ತರಹ ಹೊಸತನ ತಂದ ನಟ..


ನನಗೆ ಅತ್ಯಂತ ಪ್ರೀತಿಯ ಚಿತ್ರ ಆನಂದ್ ಹಾಗು ನಮಕ್ ಹರಾಮ್...ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಅಭಿನಯಿಸಿದ ಅತ್ಯುತ್ತಮ ಚಿತ್ರಗಳು.


ಆನಂದ್ ಸಿನಿಮಾದಲ್ಲಿ ರಾಜೇಶ್ ಬಿಟ್ಟರೆ ಬೇರೆ ಇನ್ಯಾರು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎನ್ನುವ ಸಂದೇಹ ಇವತ್ತಿಗೂ ನನ್ನ ಕಾಡುತ್ತದೆ..


ಆನಂದ್, ನಮಕ್ ಹರಾಮ್, ಬಾವರ್ಚಿ, ಕಟಿ ಪತಂಗ್, ಅನುರೋದ್, ಆಪ್ ಕಿ ಕಸಂ ನನ್ನ ಮೆಚ್ಚಿನ ಚಿತ್ರಗಳು..


ಆನಂದ್ ಸಿನಿಮಾದ ಕಡೆ ಸಂಭಾಷಣೆ...


आनंद मरा नही...आनंद मरेते नही।.. 


राजेश खन्न मरा नही...... राजेश खन्न मरते नही।..
ಯಾವಾಗಲೂ  ಹಸಿರಾಗಿ, ಉಸಿರಾಗಿ ತಮ್ಮ ಚಿತ್ರಗಳ ಮೂಲಕ ನಮ್ಮ ಮನದಲ್ಲಿ ಸದಾ ಇರುತ್ತಾರೆ ರಾಜೇಶ್ ಖನ್ನ...

Tuesday, July 10, 2012

ಕಲಿಯುಗ - ಭಾವನಾ ಲೋಕದ ಚಿತ್ರ (1984)


ಸಾವಿತ್ರಿ..ತನ್ನ ಗಂಡನ್ನ ಉಳಿಸಿಕೊಳ್ಳಲು ಯಮರಾಜನ ಜೊತೆ ವಾಗ್ವಾದ ನಡೆಸಿ ಗೆದ್ದಳು..ಇದಕ್ಕೆ ಸ್ವಲ್ಪ ಅಪವಾದ ಎನ್ನುವಂತೆ ತಾಯಿ ಹೃದಯ ಮಕ್ಕಳಿಗೋಸ್ಕರ ಮಿಡಿಯುತ್ತೆ ಅನ್ನುವ ವಿಷಯವನ್ನು ಹಿಡಿದು ಮಾಡಿದ ಚಿತ್ರ "ಕಲಿಯುಗ"

ನನ್ನ ಅಮ್ಮ ನನ್ನನ್ನು  ಹನುಮಂತನಗರದ ರಾಜಲಕ್ಷ್ಮಿ ಎನ್ನುವ ಟಾಕಿಸ್ಗೆ(ಟೆಂಟ್) ಕರೆದು ಕೊಂಡು ಹೋದ ಏಕೈಕ ಚಿತ್ರ...

ಒಂದು ಸುಂದರ ಜಗತನ್ನು ನನಗೆ ಪರಿಚಯ ಕೊಟ್ಟರು..ನಾನು ಭಾವನಾ    ಲೋಕದಲ್ಲಿ ತೇಲಲು ಶುರು ಮಾಡಿದ್ದೂ ಬಹುಶಃ ಇಲ್ಲಿಂದಲೇ..

ನನ್ನ ಮೆಚ್ಚಿನ ನಟ ರಾಜೇಶ್ ಅಭಿನಯಿಸಿದ ನನಗೆ ಇಷ್ಟವಾದ ಕೆಲವು ಚಿತ್ರಗಳಲ್ಲಿ ಕಲಿಯುಗ ಮತ್ತು  ದೇವರ ದುಡ್ಡು ಒಂದು... 
http://moved-movies.blogspot.in/2012_01_01_archive.html
ದೇವರ ದುಡ್ಡು ಚಿತ್ರದ ಬಗ್ಗೆ ಬರೆದಿದ್ದೆ..

ಈಗ ಕಲಿಯುಗ ಚಿತ್ರದ ಬಗ್ಗೆ ಬರೆಯೋಣ ಅನ್ನಿಸಿತು.

ರಾಜೇಶ್  - ಕನ್ನಡ ನಟ 
ಇದು ರಿಮೇಕ್ ಚಿತ್ರವಾದರೂ, ಅಮೋಘ ಅಭಿನಯ ನೀಡಿದ ಚಿತ್ರ..ನನ್ನ ನೆಚ್ಚಿನ ಆರತಿ ಕೂಡ ಅದ್ಭುತ ಎನ್ನುವ ರೀತಿಯಲ್ಲಿ ಪೈಪೋಟಿ ಕೊಟ್ಟು ಅಭಿನಯಿಸಿದ ಚಿತ್ರ ಇದು.
ಆರತಿ.ಆಗಿನ ಎಲ್ಲ ಹೆಸರಾಂತ ನಾಯಕರ ಜೊತೆ  ಅಭಿನಯ 
ಕಥೆ ಮಾಮೂಲಿ..ತಂದೆ ತಾಯಿ ಮಕ್ಕಳಿಗೋಸ್ಕರ ಜೀವ ತೇಯ್ದು ಸಾಕುತ್ತಾರೆ..
ರೆಕ್ಕೆ ಬಲಿತ ಹಕ್ಕಿಗಳು ಗೂಡು ಬಿಟ್ಟು ಹೋಗುವಂತೆ ಹಾರಿ ಹೋಗುತ್ತಾರೆ..
ಒಂದು ಚೂರು ರೊಟ್ಟಿ ಕೊಟ್ಟರೆ ಜೀವನವಿಡಿ ಹಿಂದೆ ಬರುವ ಶ್ವಾನದಂತೆ ರಕ್ತ ಸಂಬಂಧವಿಲ್ಲದಿದ್ದರು ನೆರಳಾಗಿ ಸಾಕುವ ಸಾಕು ಮಗ...

ಕಡೆಗೆ ಮಕ್ಕಳಿಗೆ ತಾವು ಜೀವನದಲ್ಲಿ ಎಡವಿ ಬಿದ್ದು..ಮತ್ತೆ ಶರಣು ಅಂತ ಬಂದಾಗ ಅಪ್ಪ ಮಕ್ಕಳಿಗೆ ಶಿಕ್ಷೆ ಕೊಡಬೇಕು ಅಂತ ಬಯಸುತ್ತಾನೆ.

ಆದ್ರೆ ತಾಯಿ ಹೃದಯ ತಾನು ಗಂಡನ ಕಷ್ಟದಲ್ಲಿ ನೆರಳಾಗಿ ಜೊತೆಯಿದ್ದು..ಹೆಗಲಿಗೆ ಹೆಗಲು ಕೊಟ್ಟು ನಿಂತರು..ಕಡೆಗೆ ಬಯಸುವುದು ಮಕ್ಕಳ ಸಾನಿಧ್ಯ

ಕಡೆಗೆ ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಂಡಿದ್ದರು ಕೂಡ, ಮಕ್ಕಳ ಮೇಲಿನ ಕೋಪಕ್ಕೆ ದೂರ ನಿಲ್ಲಲು ನಿರ್ಧಾರ ಮಾಡಿ..ಹೆಂಡತಿಯ ದುಡುಕು ಮಾತುಗಳಿಂದ ನೊಂದು ಹೃದಯಾಘಾತವಾಗಿ ಮಡಿಯುತ್ತಾನೆ..ಮತ್ತು ಉಯಿಲು ಪತ್ರದಲ್ಲಿ ತನ್ನ ಎಲ್ಲ ಆಸ್ತಿಯ ಬಹು ಭಾಗವನ್ನು ತನ್ನ ಸಾಕು ಮಗನಿಗೆ ಬಿಟ್ಟು, ಮಡದಿಯ ಪುತ್ರ ಮೋಹಕ್ಕೆ ಕೆಲವು ಲಕ್ಷ ರುಪಾಯಿಗಳನ್ನು ಕೊಡುವುದು ಎಂದು ಬರೆದಿರುತ್ತಾನೆ

ಮಕ್ಕಳಿಗೆ ತಮ್ಮ ತಪ್ಪು ಅರಿವಾಗುವಷ್ಟರಲ್ಲಿ ಪಿತನ ಕಳೆದುಕೊಂಡು ಅನಾಥವಾಗುತ್ತಾರೆ..

ರಾಜೇಶ್ ಜೀವಮಾನದ ಶ್ರೇಷ್ಠ ನಟನೆ..ಪ್ರತಿಯೊಂದು ಸನ್ನಿವೇಶವನ್ನು ಅನುಭವಿಸಿ ಅಭಿನಯಿಸಿದ್ದಾರೆ..ಅವರು ಹೇಳುವ ಸಂಭಾಷಣೆ.."ಸಾವು ತಾನಾಗೆ ಬರುವವರೆಗೆ ಸಾಯಲು ಇಷ್ಟ ಪಡುವುದಿಲ್ಲ..ಸತ್ತ ಮೇಲೂ ಬದುಕಲು ಇಷ್ಟ ಪಡುತ್ತೇನೆ.." ಅದ್ಭುತ ಸಾಲುಗಳು..ರಾಜೇಶ್ ಪ್ರತಿಯೊಂದು ಸಂಭಾಷಣೆಯು ಕರತಲಾಮಲಕ ಎನ್ನುವಷ್ಟು ಸಲೀಸಾಗಿ ಹೇಳಿದ್ದಾರೆ..

ಆರತಿ ಕಣ್ಣಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುತ್ತಾ..ತನ್ನ ಮಕ್ಕಳೆಲ್ಲ ಮೋಸ ಮಾಡಿ ಬಿಟ್ಟು ಹೋದಾಗ ತನ್ನ ಸಾಕು ಮಗನನ್ನು ಕರೆದು "ನಂದೀಶ ಯಾಕೋ ನನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲ?" ಎಂದು ಹೇಳುವ ದೃಶ್ಯ ನಿಜಕ್ಕೂ ಕಣ್ಣೇರು ತರಿಸುತ್ತೆ ...

ಆರತಿಯಾ ಅಭಿನಯ ಮೆಚ್ಚಿದ ಕೆಲವು ಚಿತ್ರಗಳ ದೃಶ್ಯಗಳಲ್ಲಿ  ಇದು ಒಂದು.. ಕಡೆಗೆ ಮಕ್ಕಳ ಮೇಲಿನ ಪ್ರೀತಿಯಿಂದ ಗಂಡನಿಗೆ "ನಿಮ್ಮ ಹೃದಯ ಕಲ್ಲು..ಕಲ್ಲು" ಎಂದು ಹೇಳುವ ದೃಶ್ಯ..ತಾಯಿ ಪ್ರೇಮವನ್ನು ಸಾರಿ ಸಾರಿ ಹೇಳುತ್ತದೆ...ಅಮೋಘ ಅಭಿನಯ..

ನನ್ನ ಅಚ್ಚು ಮೆಚ್ಚಿನ ಹಾಗು ನಾನು ಆರಾಧಿಸುವ ಬಾಲಣ್ಣ ಈ ಚಿತ್ರದಲ್ಲಿ ಹೇಳುವ ಸಂಭಾಷಣೆ "ನಾನು ಹೋಗೋಲ್ಲ..ನನ್ನ ಈ ಮನೆಯಿಂದ ಹೊರಗೆ ಹಾಕಬೇಡಿ.." ಎಂದು ಮಳೆಯಲ್ಲಿ ತೋಯುತ್ತ ಹೇಳುವ ಅಭಿನಯ..ಮಳೆಯಲ್ಲೂ ಕಣ್ಣೀರು ತರಿಸುತ್ತೆ.... 
ಅಭಿನಯದ ವಿಶ್ವ ಕೋಶ...ನಮ್ಮ ಬಾಲಣ್ಣ 
ಗಂಡನ ಮೇಲೆ ಪ್ರೀತಿ ಮಮಕಾರ ಎಷ್ಟೇ ಇದ್ದ್ದರು.. ತಾನು ಜನ್ಮ ನೀಡಿದ ಕಂದಮ್ಮಗಳು ಏನೇ ತಪ್ಪು ಮಾಡಿದರು ಅದನ್ನು ಕ್ಷಮಿಸುವ ಉದಾರ ಗುಣ ತಾಯಿಯಲ್ಲಿ ತೋರುವ ಕಥೆಯಲ್ಲಿ ಪ್ರತಿಯೊಬ್ಬರ ಅಭಿನಯ ಸ್ಮರಣೀಯ...

ಸಾವಿರ ಜನುಮ ಬರಲೇನು..ನೀನು ಇರುವಾಗ ನನಗೆ ಭಯವೇನು..
ನಿಮ್ಮ ತೊಳಲ್ಲಿ ನಾ ಸೇರೆಯಾದಾಗ ಸಾವು ಕೂಡ ಹಿತವೇನು
ಜೀವನ ನನಗೆ ಸಿಹಿಯಾಯ್ತು ..ಕಹಿ ನೀ ಬಂದು ಬಾಳಿಂದ ದೂರಾಯ್ತು.. 
ಎಂತಹ ಸೊಗಸಾದ ಸಾಲುಗಳು..ದಾಂಪತ್ಯ ಅಂದ್ರೆ ಇದೆ ಅಲ್ಲವೇ...

ತಾಯಿ ಜನ್ಮ ಕೊಡುತ್ತಾಳೆ
ತಂದೆ ಬಾಳು ಕೊಡುತ್ತಾನೆ..
ತಾಯಿ ಕ್ಷಮಿಸುತ್ತಾಳೆ
ತಂದೆ ಶಿಕ್ಷಿಸಿ ದಾರಿ ತೋರುತ್ತಾನೆ..
ಆದರೆ ಪ್ರೀತಿಸಿ, ಶಿಕ್ಷಿಸಿ, ಕ್ಷಮಿಸುವ ಉದಾರಿಗಳು 
ಅವರು ಯಾರು ಎಂದರೆ...
ತಂದೆ ತಾಯಿ ಮಾತ್ರ..
ಅದು ಸಾರ್ವಕಾಲಿಕ ಸತ್ಯ..