Sunday, February 9, 2020

ಆಯುಷ್ಮಾನ್ ಭವ...!

ಕೆಲವು  ಚಿತ್ರಗಳನ್ನು ನೋಡಲೇಬೇಕು ಅನಿಸುವ ವಾತಾವರಣ ಸೃಷ್ಟಿ ಮಾಡುತ್ತವೆ..

ಆಯುಷ್ಮಾನ್ ಭವ ಆ ರೀತಿಯ ಒಂದು ಚಿತ್ರ.... ಐದು ದಶಕಗಳಿಂದ  ಏಳು ಬೀಳುಗಳನ್ನು ಕಂಡು..  ಆದರೂ ಛಲ ಬಿಡದೆ ಚಿತ್ರರಂಗದಲ್ಲಿ ದುಡಿದದ್ದನ್ನು ಇಲ್ಲಿಯೇ ಸುರಿಯುವ ದ್ವಾರಕೀಶ್ ಚಿತ್ರ ಎಂದಾಗ ನೋಡಬೇಕು ಅನಿಸಿತ್ತು.. ಹಿಂದಿನ ಆಟಗಾರ, ಚೌಕ, ಅಮ್ಮ ಐ ಲವ್ ಯು.. ಅಷ್ಟಾಗಿ ಮನಕ್ಕೆ ತಾಕಿರಲಿಲ್ಲ.. ತಾರಾಗಣ ಕಾರಣವೋ ಅಥವ ನನಗೆ ತಾಕಲಿಲ್ಲವೋ ಅರಿಯದು.. 


ಇವತ್ತು ಆಯುಷ್ಮಾನ್ ಭವ ಚಿತ್ರವನ್ನು ಟಿವಿಯಲ್ಲಿ ನೋಡಿದೆ.. ಗಮನ ಸೆಳೆದಿದ್ದು.. ಅನಂತನಾಗ್ ಮತ್ತು ಶಿವರಾಜ್ ಕುಮಾರ್ .. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಅಭಿನಯಿಸಿದ್ದಾರೆ.. ಇಬ್ಬರದೂ ಹದಭರಿತ.. ನಿಯಂತ್ರಿತ ಅಭಿನಯ.. ಪಾತ್ರಗಳೇ ತಾವಾಗಿದ್ದಾರೆ.. 

ಬದುಕಿನಲ್ಲಿ ನೆಡಯುವ ಪ್ರತಿ ಘಟನೆಗಳಿಗೂ ಅದರದ್ದೇ ಒಂದು ಕಾರಣ ಇರುತ್ತದೆ.. ಅದನ್ನು ನಿಭಾಯಿಸುವ ತಾಕತ್ತು ಎಲ್ಲರಲ್ಲೂ ಇದ್ದರೂ.. ಅದನ್ನು ಸರಿಯಾಗಿ ಉಪಯೋಗಿಸದೆ ಸಮಸ್ಯೆಗಳ ಗೂಡಿನಲ್ಲಿ ಸಿಕ್ಕಿ ಒದ್ದಾಡುತ್ತೇವೆ.. ಹೊರಗಿನಿಂದ ಬರುವ ಒಬ್ಬ ವ್ಯಕ್ತಿ ಸಮಸ್ಯೆಗಳನ್ನು ಸಮಸ್ಯೆಯಾಗಿ ನೋಡದೆ ಅದಕ್ಕೆ ಪರಿಹಾರವನ್ನು ಅವರ ವ್ಯಕ್ತಿತ್ವದಲ್ಲಿಯೇ ಅಡಗಿರುವ ಗುಣ ವಿಶೇಷಣಗಳಿಂದ ಪರಿಹರಿಸಬಹುದು ಎನ್ನುವ ತತ್ವನ್ನು ಆಧರಿಸಿ ಮೂಡಿರುವ ಈ ಚಿತ್ರ ಕೊಂಚ ಭಿನ್ನವಾಗಿದೆ.. 



ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿದೆ.. ಕ್ಯಾಮೆರಾ ಕೋನಗಳು.. ಡ್ರೋನ್ ಸಹಾಯದಿಂದ ಚಿತ್ರೀಕರಣ.. ಜಲಪಾತವನ್ನು, ಕಾಡಿನ ಚಿತ್ರಣವನ್ನು ಸೊಗಸಾಗಿ ತೋರಿಸಿರುವುದು.. ಕಲರ್ ಕರೆಕ್ಷನ್ ಎಲ್ಲವೂ ಸೊಗಸಾಗಿದೆ .. ಸಂಗೀತದ ಮೂಲಕ ಚಿಕಿತ್ಸೆ ಎನ್ನುವಾಗ ಹಾಡುಗಳ ಕಡೆಗೆ ಇನ್ನಷ್ಟು ಗಮನ ಹರಿಸಿದ್ದಾರೆ ಸೊಗಸಾಗಿರುತ್ತಿತ್ತು.. ಹಿನ್ನೆಲೆ ಸಂಗೀತ.. ಸೊಗಸಾಗಿದೆ.. ಸಂಕಲನ ಕೂಡ ಚುರುಕಾಗಿದೆ.. ಹೊಡೆದಾಟದ ದೃಶ್ಯಗಳು ಭರ್ಜರಿಯಾಗಿದೆ.. 



ಶಿವರಾಜ್ ಕುಮಾರ್ ಅವರ ಅಭಿನಯ.. ತೂಕಬದ್ಧವಾಗಿದೆ.. ಅದರ ಜೊತೆಯಲ್ಲಿ ಮಿಕ್ಕ ಸಹಕಲಾವಿದರೂ ಕೂಡ.. ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.. 

ನಿರ್ದೇಶಕ -- ಪಿ ವಾಸು 

ಪಿ ವಾಸು .. ಮಾನಸಿಕವಾಗಿ ಕಾಡುವ ಕತೆಗಳ ರಾಜ ಎನ್ನಬಹುದು ..ಸೊಗಸಾದ ನಿರೂಪಣೆ ಮತ್ತು.. ತಾರ್ಕಿಕವಾಗಿ ಕತೆಯನ್ನು ಕಟ್ಟಿಕೊಟ್ಟಿರುವುದು ಅವರ ಒಳಗಿರುವ  ನಿರ್ದೇಶಕ ಕೆಲಸ ಮಾಡಿದ್ದಾನೆ.. ಇಡೀ ಚಿತ್ರದ  ಕೊನೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ತಲೆದೂಗುವಂಥಹ ಉತ್ತರ ನೀಡಿರುವುದು ಇಷ್ಟವಾಗುತ್ತದೆ 


ರಚಿತಾರಾಮ್ ಮುದ್ದಾಗಿ ಕಾಣುತ್ತಾರೆ.. ಸುಂದರ ಹಾಗೂ ವೀಣಾ ಸುಂದರ್ , ಲಕ್ಷ್ಮಿ ಸಿದ್ದಯ್ಯ, ರಾಜೇಶ್ ನಟರಂಗ ಮತ್ತು ಇತರ ಕಲಾವಿದರ ಅಭಿನಯ ಚಿತ್ರಕ್ಕೆ ಬೇಕಾದಷ್ಟು ಇದೆ.. ರಮೇಶ್ ಭಟ್, ಬಾಬು ಹಿರಣ್ಣಯ್ಯ, ಅನಂತವೇಲು ಚಿತ್ರದಲ್ಲಿ ಅಭಿನಯ ನೀಡಿದ್ದಾರೆ.. ಪುಟ್ಟ ಪಾತ್ರಗಳಲ್ಲಿ ಬರುವ ಪ್ರಭು ಮತ್ತು ಸುಹಾಸಿನಿ ಅವರ ಪಾತ್ರವನ್ನು ನಿಭಾಯಿಸಿದ್ದಾರೆ.. 

ಚಿತ್ರದಲ್ಲಿ ಕಾಡುವುದು ಅವಿನಾಶ್, ಅನಂತ್ ನಾಗ್ ಮತ್ತು ಶಿವರಾಜ್ ಕುಮಾರ್.. ಮೂವರು ಪಾತ್ರಗಳು ಇಷ್ಟವಾಗುತ್ತವೆ.. 

ಮುದ್ದಾಗಿ ಕಾಣುವ ರಚಿತಾ ರಾಮ್ ಅವರ ಅಭಿಮಾನಿ ಆದೆನಾ ಇಲ್ಲವ ಗೊತ್ತಿಲ್ಲ.. ಆದರೆ ಈ ಚಿತ್ರದಲ್ಲಿ ಲವಲವಿಕೆಯಿಂದ ನಟಿಸಿದ್ದಾರೆ.. 


ಬೇಡದ ಅಂಶಗಳು ಅಂದರೆ..  ಹುಲಿಯ ಚಿತ್ರಣ.. ಮತ್ತು ಅದ್ಭುತ ನಟ ರಂಗಾಯಣ ರಘುವನ್ನು ಸರಿಯಾಗಿ ಉಪಯೋಗಿಸದೆ ಇರುವುದು.. ಮತ್ತು ಜ್ಯೋತಿಷಿ ಅಥವಾ ಪುರೋಹಿತರ ಕೆಲಸವನ್ನು ಅಪಹಾಸ್ಯ ಮಾಡಿರುವುದು.. ಸಾಧುಕೋಕಿಲ ಪಾತ್ರವನ್ನು ಕತೆಗೆ ಪೂರಕವಾಗಿ ಬೆಳಸಬಹುದಿತ್ತು.. ಅವರನ್ನು ಬಫೂನ್ ತರಹ ಮಾಡಿಬಿಟ್ಟಿದ್ದಾರೆ.. 

ಆದರೆ ಅದ್ಭುತ ತಂತ್ರಜ್ಞಾನ ಮತ್ತು ನೆರಳು ಬೆಳಕಿನ ಸಂಯೋಜನೆಯಲ್ಲಿ ಎಲ್ಲಾ ನಟ ನಟಿಯರು ಮುದ್ದಾಗಿ ಕಾಣುವುದು ಈ ಚಿತ್ರದ ವಿಶೇಷ.. 

ಈ ಸಿನಿಮಾ ಗೆಲ್ಲಬೇಕಿತ್ತು ..ಗೆದ್ದಿತೋ ಅಥವ ದುಡ್ಡು ಮಾಡಿತೋ ಅಷ್ಟುಅರಿವಿಲ್ಲ .. ಆದರೆ ಚಿತ್ರ ಸೊಗಸಾಗಿದೆ.. ಸರಳ ಚಿತ್ರ..!!!