Monday, January 5, 2026

ತಾಯಿ ಹೃದಯದ ಭವ್ಯತೆ ... ಅಮ್ಮ 1968 (ಅಣ್ಣಾವ್ರ ಚಿತ್ರ ೧೦೨/೨೦೭)

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆಯ ತಳಹದಿಯ ಮೇಲೆ ಈ ಚಿತ್ರಕತೆ ರೂಪಿತವಾಗಿದೆ. ರಾಜಕುಮಾರ್ ಚಿತ್ರಗಳಲ್ಲಿ ತಾಯಿ ಪಾತ್ರಕ್ಕೆ ಹೆಚ್ಚಿನ ಮಹತ್ವ.. ಅವರ ಪಾತ್ರಗಳಲ್ಲಿಯೂ ಅದೇ ಸಿದ್ಧಾಂತ.. 


ಇಲ್ಲಿಯೂ ಕೂಡ ಅದಕ್ಕೆ ಹೊರತಿಲ್ಲ.. ತಾಯಿ ಎಂದರೆ ಅಪಾರ ಗೌರವ, ಪ್ರೀತಿ.. ಅದೇ ಮುನ್ನುಡಿಯಲ್ಲಿ ರಾಜಕುಮಾರ್ ಅವರ ಪಾತ್ರ ರೂಪಿತವಾಗಿದೆ. ಹಿನ್ನೆಲೆ ಅರಿಯದೆ ತಾಯಿ ತಂದೆಯ ಮೇಲೆ ವಿನಾಕಾರಣ ಕೋಪಗೊಳ್ಳುವ, ಕೂಗಾಡುವ ಪಾತ್ರದಲ್ಲಿ ರಾಜಕುಮಾರ್ ಪರಕಾಯ ಪ್ರವೇಶ ಮಾಡಿದ್ದಾರೆ. ಅಯ್ಯೋ ರಾಜಕುಮಾರ್ ಅವರು  ಹೀಗೆ ಮಾಡ್ತಾ ಇದ್ದಾರೆ ಅನ್ನಿಸುವಷ್ಟು ಅವರ ಅಭಿನಯ ಚಂದವಿದೆ. 

ಈ ರೀತಿಯ ಕಥಾವಸ್ತುವನ್ನು ರಾಜಕುಮಾರ್ ಆಯ್ಕೆ ಮಾಡಿಕೊಂಡಿರುವುದು ನಿಜವಾಗಿಯೂ ಸವಾಲೇ ಹೌದು. ಕಾರಣ ಅವರ ಚಿತ್ರಗಳು ಸದಾ ಅಪ್ಪ ಅಮ್ಮನನ್ನು ಗೌರವಿಸುವ ಪಾತ್ರ.. ಇದರಲ್ಲಿ ಅದಕ್ಕೆ ತದ್ವಿರುದ್ದ. ನಿಜ ಪರಿಸ್ಥಿತಿ ಅರಿಯುವ ತನಕ ಅವರ ಆರ್ಭಟ.. ನಂತರ ತೊಳಲಾಟ ಎರಡೂ ಕಡೆ ಅವರ ಅಭಿನಯ ಸೊಗಸೇ ಸೊಗಸು. ಯಶಸ್ವೀ ನಾಯಕ ಈ ರೀತಿಯ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಪ್ರೇಕ್ಷಕ ಒಂದು ಕ್ಷಣ ಛೇ ಯಾಕೆ ಈ ರೀತಿಯ ಪಾತ್ರ ಮಾಡಿದ್ದಾರೆ ಅನಿಸುವಷ್ಟು ಪ್ರಭಾವಶಾಲಿಯಾಗಿದೆ. 

ಭಾರತಿ ನಾಯಕಿಯಾಗಿ ಗಮನ ಸೆಳೆಯುತ್ತಾರೆ. 

ನರಸಿಂಹರಾಜು ಮೈನಾವತಿ ಕೆಲವು ದೃಶ್ಯಗಳಲ್ಲಿ ಮೂಡಿ ಬಂದರು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ 

ಪಂಡರಿಬಾಯಿ ಮಾತೃಹೃದಯಿ ಪಾತ್ರದಲ್ಲಿ ಮನದಾಳಕ್ಕೆ ಇಳಿಯುತ್ತಾರೆ. ಮಗನ ಆರ್ಭಟವಾದ ಮಾತುಗಳನ್ನು ಕೇಳುತ್ತಾ ಕಣ್ಣಲ್ಲಿ ನೀರು ಬರುತ್ತಿದ್ದರೂ ಮಗನ ಮಾತುಗಳನ್ನು ಕೇಳಿ ಸಂತಸ  ಪಡುವ ದೃಶ್ಯ ಇಷ್ಟವಾಗುತ್ತಾರೆ. 

ಎಂ ವಿ ರಾಜಮ್ಮ ಮೊದಲಾರ್ಧದಲ್ಲಿ ಸಂಯಮದ ಪಾತ್ರವಾದರೆ, ಎರಡನೆಯ ಅರ್ಧದಲ್ಲಿ ಪತಿರಾಯನ ಪರವಾಗಿ ಮಾತಾಡುತ್ತಾ, ಸಾಕಿದ ಮಗನನ್ನು ದೂರ ಮಾಡಿಕೊಳ್ಳುವಂಥ ಮಾತಾಡುವ ಅಭಿನಯ ಸೊಗಸು. 

ಅಶ್ವಥ್ ಅಭಿನಯ ಸೊಗಸಾಗಿ ಸಾಗುತ್ತದೆ. 

ಪಾಪಮ್ಮ ಮತ್ತೆ ತಮ್ಮ ಹಳೆಯ ರೀತಿಯ ಪಾತ್ರದಲ್ಲಿ ಮಿಂಚುತ್ತಾರೆ. ಮಾತು ಮಾತಿಗೂ ಭಜ ಗೋವಿಂದಂ ಭಜ ಗೋವಿಂದಂ ಭಜಗೋವಿಂದಂ ಮೂಡಮಾತೆ ಎನ್ನುವ ಪಾಪಮ್ಮ ಅವರ ಅಭಿನಯ ನಗೆತರಿಸುತ್ತದೆ . 

ಅದರಲ್ಲೂ ನರಸಿಂಹರಾಜು, ಭಾರತಿ, ಅಶ್ವಥ್ ಅವರು ಭಜ ಗೋವಿಂದಂ ಭಜ ಗೋವಿಂದಂ ಅಂತ ಕುಣಿಯುವ ದೃಶ್ಯ ಸೂಪರ್. 

ಮುಖ್ಯ ಅತಿ ಮುಖ್ಯ ಪಾತ್ರದಲ್ಲಿ ಬಿ ಆರ್ ಪಂತುಲು ಅಭಿನಯ ಸಿನೆಮಾದುದ್ದಕ್ಕೂ ಸೂಪರ್ ಸೂಪರ್ ಅನಿಸುತ್ತದೆ. ಅಭಿನಯ, ನಿರ್ದೇಶನ ಎರಡೂ ವಿಭಾಗದಲ್ಲಿ ಅಂಕಗಳಿಸುತ್ತಾರೆ. ಆ ಸಂಯಮದ ನಟನೆ, ಭಾವ ಉಕ್ಕಿಸುವ ಪರಿ ಸೂಪರ್..

ಮತ್ತೊಮ್ಮೆ ಖಳಪಾತ್ರದಲ್ಲಿ ದಿನೇಶ್ ಗಮನಸೆಳೆಯುತ್ತಾರೆ. 
















ಹಾಡುಗಳು ಸೂಪರ್ ಆಗಿವೆ. 

ಪಿ ಬಿ ಶ್ರೀನಿವಾಸ್, ಎಂ ಬಾಲಮುರಳಿ ಕೃಷ್ಣ, ಎಲ್ ಆರ್ ಈಶ್ವರಿ, ಎಸ್ ಜಾನಕೀ, ಪಿ ನಾಗೇಶ್ವರ ರಾವ್, ಬೆಂಗಳೂರು ಲತಾ ಗಾಯನವಿದೆ

ಜಿ ಬಾಲಸುಬ್ರಮಣ್ಯಂ ಅವರ ಕಥೆಯನ್ನು ಪದ್ಮಿನಿ ಪಿಕ್ಚರ್ಸ್ ಕಥಾವಿಭಾಗ ವಿಸ್ತರಿಸಿದೆ. ಜಿ ವಿ ಅಯ್ಯರ್ ಅವರ ಸಂಭಾಷಣೆ, ಟಿ ಜಿ ಲಿಂಗಪ್ಪ ಅವರ ಸಂಗೀತ, ಎ ಷಣ್ಮುಗಂ ಅವರ ಛಾಯಾಗ್ರಹಣವಿದೆ. 

ನಿರ್ಮಾಣ ನಿರ್ದೇಶನ ತಮ್ಮದೇ ಚಿತ್ರ ಸಂಸ್ಥೆಯ ಲಾಂಛನದಲ್ಲಿ ಬಿ ಆರ್ ಪಂತುಲು ಅವರದ್ದು. 

ರೋಮಿಯೋ ಜೂಲಿಯೆಟ್, ಬಭೃವಾಹನ ನಾಟಕಗಳು ಸೊಗಸಾಗಿ ಅಳವಡಿಸಿದ್ದಾರೆ. ಎರಡೂ ನಾಟಕಗಳಲ್ಲಿ ರಾಜಕುಮಾರ್ ಅವರ ಅಭಿನಯ ಸೊಗಸಾಗಿದೆ. 


No comments:

Post a Comment