ಶ್ರೀ ಒಂದು ಸಾಮ್ರಾಜ್ಯ ಕಟ್ಟಿ ಅದು ಗಟ್ಟಿಯಾಗಿ ನಿಲ್ಲಬೇಕು ಎಂದರೆ.. ಅದಕ್ಕೆ ಅನೇಕಾನೇಕ ಶ್ರಮಜೀವಿಗಳ ಪರಿಶ್ರಮ ಇದ್ದೆ ಇರುತ್ತದೆ..
ನನ್ನ ಚಿತ್ರಜೀವನ ಎಲ್ಲೋ ಹುಟ್ಟಿ ಹೇಗೋ ಬೆಳೆದು.. ಕರುನಾಡ ಚಿತ್ರ ಸಾಗರದಲ್ಲಿ ನನ್ನ ಮುಳುಗಿಸದೆ ತೇಲಿಸಿದ್ದು ಈ ಅಭಿಮಾನಿ ದೇವರುಗಳ ಆಶೀರ್ವಾದ..
ನನ್ನಿಂದ ನಟಿಸಿಲ್ಪಟ್ಟ ಬೇಡರ ಕಣ್ಣಪ್ಪನಿಂದ ಹಿಡಿದು ನಟಿಸುವುದು ಬೇಡ ಎಂದುಕೊಂಡ ಶಬ್ಧವೇದಿಯ ತನಕ ಜೇನುನೊಣಗಳಂತೆ ಈ ರಾಜಕುಮಾರ್ ಎಂಬ ಜೇನು ಗೂಡನ್ನು ಕಟ್ಟಲು ಪರಿಶ್ರಮಿಸಿದ್ದಾರೆ..
ಇಂದು ಸ್ವರ್ಗದಲ್ಲಿ ಅವರೆಲ್ಲ ಜೊತೆ ಒಂದು ಭೇಟಿಯ ಕಾರ್ಯಕ್ರಮವನ್ನು ನಮ್ಮ ಪಾರ್ವತೀ ಮತ್ತು ತಂಡ ಸಿದ್ಧಪಡಿಸಿದೆ..
ಈಗ ನೋಡು ಒಬ್ಬೊಬ್ಬರೇ ಈ ನಿಮ್ಮ ಫ್ಯಾಷನ್ ಪ್ರಪಂಚದಲ್ಲಿ ರಾಂಪ್ ವಾಕ್ ಎನ್ನುತ್ತಾರಲ್ಲ ಹಾಗೆ ಒಬ್ಬೊಬ್ಬರೇ ಬರುತ್ತಾರೆ.. ಅವರ ಪರಿಚಯ ನಾನೇ ಮಾಡಿಕೊಡುತ್ತೇನೆ..
ಪಾರ್ವತೀ ಶುರುವಾಗಲಿ.. ಶೂಟಿಂಗ್ ಶುರು !!!
೧) ಎಚ್ ಆರ್ ರಾಮಚಂದ್ರಶಾಸ್ತ್ರಿ
೨) ಭಟ್ಟಿ ಮಹದೇವಪ್ಪ
ಇವರ ಸುಮಾರು ಚಿತ್ರಗಳು ಕಳೆದ ಮೇಲೆ ಇವರ ಪ್ರಭಾವಕ್ಕೆ ಬಂದೆ .. ಧ್ರುವತಾರೆ ಚಿತ್ರದಲ್ಲಿ ನಾ ತಂದೆಯನ್ನು ಕಳೆದುಕೊಂಡು ನಿಂತಿದ್ದಾಗ.. ಇವರ ಮನೆಗೆ ಬಂದಾಗ.. ತನ್ನ ಮಡದಿ ಪಾತ್ರಕ್ಕೆ ಏನಾದರೂ ತಿನ್ನಲು ಕೊಡು ಎನ್ನುವ ಸನ್ನೆ ಅದ್ಭುತ..ಹಲವಾರು ಚಿತ್ರಗಳಲ್ಲಿ ಇವರ ಅಭಿನಯ ದೃಶ್ಯಗಳಲ್ಲಿ ನಾ ಇರೋಕೆ ಆಗಲಿಲ್ಲ.. ಆದರೆ ಸ್ಪಷ್ಟ ಕನ್ನಡ, ಗಡುಸು ಧ್ವನಿ ನನಗೆ ಬಲು ಇಷ್ಟ
೩) ಅಶ್ವಥ್ ನಾರಾಯಣ
ಯಪ್ಪಾ ಚಂದವಳ್ಳಿಯ ತೋಟದ ಅತಿ ಪ್ರಮುಖ ಪಾತ್ರ ಇವರದ್ದು.. ಇಂದಿಗೂ ಆ ಚಿತ್ರದ ತುಣುಕು ನೋಡಿದಾಗ ಖಳನೊಬ್ಬ ಇಷ್ಟು ನಯವಾಗಿರಬಹುದೇ ಎಂದು ಅಚ್ಚರಿಗೊಳಿಸುತ್ತದೆ..ಇವರು ಕೂಡ ಪೂಜಾರಿ, ತೋಟದ ಮಾಲಿ, ಮನೆಯ ಅಡಿಗೆ ಭಟ್ಟ ಹೀಗೆ ಇವರ ಪಾತ್ರಾಭಿನಯ ನನಗೆ ಬಲು ಇಷ್ಟ
೪) ಶಾಂತಮ್ಮ
ನನ್ನ ಇನ್ನೊಬ್ಬ ತಾಯಿ ಇವರು.. ಸರಿ ಸುಮಾರು ಅರವತ್ತರ ದಶಕಗಳಿಂದ ನನ್ನ ಚಿತ್ರಜೀವನ ಅಂತ್ಯಗೊಳ್ಳುವ ತನಕ ಈಕೆಯ ಜೊತೆ ಅಭಿನಯ ಸಾಗುತ್ತಲೇ ಇತ್ತು.. ಕಾಮನಬಿಲ್ಲು ಚಿತ್ರದಲ್ಲಿ ಮನೆಯ ಜವಾಬ್ಧಾರಿ ತೆಗೆದುಕೊಳ್ಳದೆ ಊರಿನ ಬಗ್ಗೆ ಯೋಚನೆ ಮಾಡುತ್ತಿದ್ದ ನನ್ನ ಪಾತ್ರಕ್ಕೆ ದಾರಿ ತೋರಿಸುವ ಮಾತುಗಳು.... ಸಂಧ್ಯಾರಾಗದಲ್ಲಿ ಹಾಸಿಗೆಯಿಂದ ಏಳಲಿಕ್ಕೆ ಆಗದೆ ಮಲಗಿದ್ದ ತನ್ನ ಪತಿ.. ನನ್ನ ಪಾತ್ರದ ಹಾಡನ್ನು ಕೇಳಿ ಹಾಸಿಗೆಯಿಂದ ಎದ್ದಾಗ .. ನನಗೆ ಹಾಡು ನಿಲ್ಲಿಸಬೇಡ ಅಂತ ಹೇಳುವ ಆ ಅಭಿನಯ.. ಆಹಾ .. ಶ್ರುತಿಸೇರಿದಾಗ ಚಿತ್ರದಲ್ಲಿ ಇವರ ಪಾತ್ರಕ್ಕೆ ಅವಕ್ಶವೇ ಇಲ್ಲ ಅಂತ ಯೋಚಿಸುತ್ತಿದ್ದಾಗ ಕಡೆಯ ದೃಶ್ಯದಲ್ಲಿ ಬಂದಾಗ ನನಗೆ ಸಮಾಧಾನ
೬) ಶನಿಮಹಾದೇವಪ್ಪ
ಇವರ ಬಗ್ಗೆ ಏನು ಹೇಳಲಿ ಕಳೆದ ವರ್ಷ ಇವರ ಕವಿರತ್ನ ಕಾಳಿದಾಸ ಚಿತ್ರದ ಡಿಂಡಿಮನ ಡಮರುಗ ಇನ್ನೂ ಗುಯ್ ಅನ್ನುತ್ತಲೇ ಇದೆ.. ಅದ್ಭುತ ಕಲಾವಿದ.. ನನ್ನ ಚಿತ್ರಗಳಲ್ಲಿ ಇವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂತು ಎನ್ನುವುದು ನನಗೆ ಖುಷಿ.. ಧ್ರುವತಾರೆ ಚಿತ್ರದ ಶೇರ್ ಖಾನ್, ಸಮಯದ ಗೊಂಬೆ ಚಿತ್ರದ ಸಹ ವಾಹನ ಚಾಲಕ.. ಶಂಕರ್ ಗುರು ಚಿತ್ರದ ಸತೀಶ್,೭) ಸತೀಶ್
ಉತ್ತಮ ಕಲಾವಿದ.. ಕೆರಳಿದ ಸಿಂಹದಲ್ಲಿ ಖಳನ ಪಾತ್ರ, ಗುರಿ ಚಿತ್ರದ ಇನ್ಸ್ಪೆಕ್ಟರ್, ಅದೇ ಕಣ್ಣು ಚಿತ್ರದ ಬೆಕ್ಕಿನ ಕಣ್ಣಿನ ಇನ್ಸ್ಪೆಕ್ಟರ್, ಒಲವು ಗೆಲುವು ಚಿತ್ರದ ವಿದ್ಯಾರ್ಥಿ.. ಹೀಗೆ ಸುಂದರ ಹುಡುಗ ಈತ...
೮) ಕುಪ್ಪುರಾಜ್
ವಿಶಿಷ್ಟ ಧ್ವನಿ ಇವರದ್ದು.. ಅನೇಕ ಚಿತ್ರಗಲ್ಲಿ ಖಳನಾಯಕನನ್ನು ಮುಖ ತೋರಿಸದೆ ಗಾಜಿನ ಹಿಂದೆ, ಪರದೆಯ ಹಿಂದೆ ತೋರಿಸುವ ಪಾತ್ರಗಳಿಗೆ ಧ್ವನಿ ನೀಡುತ್ತಿದ್ದದ್ದು ಇವರೇ..
೯) ರಾಘವೇಂದ್ರ ರಾವ್
ಇವರ ಬಗ್ಗೆ ಏನು ಹೇಳಲಿ.. ನನ್ನ ಎರಡನೇ ಚಿತ್ರದಲ್ಲಿ ನಾಯಕನಟ ಆಗೋಕೆ ಅವಕಾಶ ಕೊಟ್ಟಿದ್ದು ಇವರೇ. ಇವರೇ ಈ ಚಿತ್ರದ ನಾಯಕನಾಗಬೇಕಿತ್ತು.. ಆದರೆ ಆ ಅವಕಾಶ ನನಗೆ ಬಂತು.. ಅನೇಕ ಚಿತ್ರಗಳಲ್ಲಿ ಅಪ್ಪನ ಪಾತ್ರ, ಗುರುವಿನ ಪಾತ್ರ, ಪೂಜಾರಿಯ ಪಾತ್ರದಲ್ಲಿ ಇದ್ದಾರೆ.. ಆದರೆ ನನಗೆ ಅತಿ ಮೆಚ್ಚಿನ ಪಾತ್ರ ಚಂದವಳ್ಳಿ ತೋಟದ ನರಹರಿಯ ಪಾತ್ರ.. ತನ್ನ ಸ್ನೇಹಿತನ ಮನೆಯನ್ನು ಉಳಿಸುವುದಕ್ಕೆ ಈತ ಪಡುವ ಪಾಡು.. ಅದ್ಭುತ ಅಭಿನಯ..
೧೦) ಗಣಪತಿ ಭಟ್
ದಪ್ಪ ಧ್ವನಿ.. ಅದರ ವಿಶೇಷತೆ ಎಂದರೆ ದಯನೀಯವಾಗಿ ಮಾತಾಡುವಾಗಲೂ, ದರ್ಪದಿಂದ ಮಾತಾಡುವಾಗಲೂ ಅವರ ವಿಶಿಷ್ಟ ಧ್ವನಿ ಅವರಿಗೆ ಜೊತೆಯಾಗುತಿತ್ತು.. ಕಣ್ಣ್ತೆರೆದು ನೋಡು ಚಿತ್ರದ ಸೇಠು, ಬಂಗಾರದ ಮನುಷ್ಯ ಚಿತ್ರದ ರೈತ.. ಹೀಗೆ ಹಲವಾರು ಚಿತ್ರಗಳಲ್ಲಿ ಇವರ ಜೊತೆ ಅಭಿನಯ ಕೊಡುವ ಅವಕಾಶ ಬಂದಿದ್ದು ನನ್ನ ಪುಣ್ಯ
೧೧)
ಓಯ್ ಶ್ರೀ ಇರಪ್ಪ.. ಇವತ್ತಿಗೆ ಹತ್ತು ಸಾಕು ಜನರಿಗೆ ಬೋರ್ ಆಗಬಹುದು.. ಇನ್ನೂ ಇದೆಯಲ್ಲ ಹನ್ನೆರಡು ದಿನ ಆದ ಮೇಲೆ ಮತ್ತೆ ಇನ್ನೊಂದು ರಾಂಪ್ ವಾಕ್ ಮಾಡೋಣ.. ಏನಂತೀಯಾ..
******
ಎರಡು ದಶಕಗಳು.. ಅಣ್ಣಾವ್ರು ಹೊರಗಿನ ಪ್ರಪಂಚದಿಂದ ಆಗಲೇ ನಮ್ಮೊಳಗೇ ಇದ್ದ ಹೃದಯ ಸಿಂಹಾಸನದಲ್ಲಿ ಅಮರವಾಗಿದ್ದು ಇದೆ ದಿನ..
ಅಣ್ಣಾವ್ರ ನೆನಪೇ ಎಲ್ಲಾ










Aparoopada paathra parichaya. Ivarennalla nenapisikondu nostalgia feel aaythu
ReplyDelete