ರಾಜಕುಮಾರ್ ಅವರ ಚಿತ್ರಸರಣಿಯಲ್ಲಿ ವಿಭಿನ್ನ ಚಿತ್ರವಾಗಿ ಮೂಡಿ ಬಂದಿದೆ.. ಅನುಪಮಾ ಮೂವೀಸ್ ಲಾಂಛನದಲ್ಲಿ ಜಿ ಬಾಲಸುಬ್ರಮಣ್ಯಂ ಅವರ ಕತೆಯನ್ನು ಆಧರಿಸಿ ಚಿತ್ರಕತೆ, ನಿರ್ಮಾಣ, ನಿರ್ದೇಶನ ಮಾಡಿರುವುದು ನಿರ್ದೇಶಕ ಜೋಡಿ ದೊರೈ ಭಗವಾನ್
ಅವರ ಆಪ್ತ ಗೆಳೆಯ ಚಿ ಉದಯಶಂಕರ್ ಅವರ ಸಂಭಾಷಣೆ ಗೀತೆಗಳು.. ಪಿ ಬಿ ಶ್ರೀನಿವಾಸ್ , ಎಸ್ ಜಾನಕೀ ಅವರ ಗಾಯನ.. ಜಿ ಕೆ ವೆಂಕಟೇಶ್ ಅವರ ಸಂಗೀತ, ಬಿ ದೊರೈರಾಜ್ ಮತ್ತು ಆರ್ ಚಿಟ್ಟಿಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈ ಚಿತ್ರ ರಾಜಕುಮಾರ್ ಅವರ ಚಿತ್ರ ಸರಣಿಯಲ್ಲಿ ವಿಶೇಷ ಅಂದೇ ಅಲ್ವೇ. ಹೌದು ಅದಕ್ಕೆ ಕಾರಣ.. ತೆರೆಯ ಮೇಲೆ ತೆರೆಯ ಹಿಂದೆ ಯಾವುದೇ ವಿಧವಾದ ದುರಭ್ಯಾಸಗಳನ್ನು ಪೋಷಿಸದ ರಾಜಕುಮಾರ್ ಇಲ್ಲಿ ಪಾತ್ರಕ್ಕೆ ಬೇಕಾಗಿದೆ ಅನ್ನುವ ದೃಷ್ಟಿಯಿಂದ ಕೌಬಾಯ್ ವೇಷಧಾರಿಯಾಗಿ ಅದಕ್ಕೆ ನ್ಯಾಯ ಒದಗಿಸಬೇಕು ಎನ್ನುವ ದೃಷ್ಟಿಯಿಂದ ಸಿಗಾರ್ ಸೇದುವ ದೃಶ್ಯಗಳಿವೆ.. ಆದರೆ ಇಲ್ಲಿ ಗಮನಿಸಬೇಕಾದ್ದು.. ಅವರು ಹಾಗೆ ಹೊಗೆ ಬಿಡುತ್ತಾರೆ ಅಂದರೆ.. ಅದು ಶ್ವಾಸಕೋಶಕ್ಕೆ ಇಳಿಯದಂತೆ. ಬರಿ ಗಂಟಲಿನಿಂದ ಮತ್ತೆ ಬಾಯಿಯಿಂದ ಹೊರಗೆ ಬರುವಂತೆ ನೋಡಿಕೊಂಡಿದ್ದಾರೆ..
ಅಷ್ಟಲ್ಲದೇ ಅವರು ಇಷ್ಟು ಸುಧೀರ್ಘ ಕಾಲ ಭರವಸೆಯ ನಾಯಕನಾಗೋಕೆ ಸಾಧ್ಯವೇ..
ಒಂದು ದೃಶ್ಯದಲ್ಲಿ ಕೌಬಾಯ್ ರೂಪ.. ಇನ್ನೊಂದು ದೃಶ್ಯದಲ್ಲಿ ಮಮತಾಮಯಿ ತಮ್ಮ, ಇನ್ನೊಂದು ದೃಶ್ಯದಲ್ಲಿ ಪ್ರೇಮಿ.. ಇನ್ನೊಂದು ದೃಶ್ಯದಲ್ಲಿ ಮಮತಾಮಯಿ ಮಗ.. ಇನ್ನೊಂದು ದೃಶ್ಯದಲ್ಲಿ ಕಟ್ಟುನಿಟ್ಟಾದ ಪೊಲೀಸ್ ಅಧಿಕಾರಿ.. ಹೀಗೆ ಬದಲಾಗುತ್ತಲೇ ಇರುವ ವೇಷಭೂಷಣಗಳು, ಅದಕ್ಕೆ ಬೇಕಾದ ಅಭಿನಯ, ಧ್ವನಿಯ ಏರಿಳಿತ.. ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ್ದಾರೆ..
ಮರೆಯದಿರು ಸ್ನೇಹ - ಪಿಬಿ ಶ್ರೀನಿವಾಸ್ ಧ್ವನಿಯಲ್ಲಿ ಕುದುರೆ ಮೇಲೆ ಸಿಗಾರ್ ಜೊತೆಯಲ್ಲಿ ಕೌಬಾಯ್ ರೂಪದಲ್ಲಿ ಬರುವ ದೃಶ್ಯ ಖಂಡಿತ ಸೀಟಿಗಿಟ್ಟಿಸುತ್ತದೆ..
ಏಕೋ ಏನೋ ಹಾಡುವ ಆಸೆ - ಪಿ ಬಿ ಶ್ರೀನಿವಾಸ್ - ಪ್ರೇಮಿಯಾಗಿ ಹಾಡುವ ಹಾಡು
ಸರಿ ನಾ ಹೋಗಿ ಬರುವೆ - ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ - ಹಿಂದಿಯ ಹಾಡಿನ ಅನುಕರಣೆಯಾದರೂ ಇಷ್ಟವಾಗುತ್ತದೆ .,, ಪ್ರೇಮಿಗಳ ಸಂಭಾಷಣೆಯ ರೂಪದಲ್ಲಿದೆ ಈ ಹಾಡು
ಬೇಕಾಗಿದೆ ಸಾಕಾಗಿದೆ - ಎಸ್ ಜಾನಕೀ - ಸೊಗಸಾದ ಹಾಡಾಗಿದೆ
ಹೊಡೆದಾಟಗಳು ಹೇರಳವಾಗಿರಬಹುದು ಎಂದು ಅನಿಸಿದರೂ.. ಕತೆಗೆ ಪೂರ್ಣ ಒಟ್ಟು ಕೊಟ್ಟು, ಹಿತಮಿತವಾಗಿ ಸಾಹಸ ದೃಶ್ಯಗಳನ್ನು ಅಳವಡಿಸಿರುವ ಈ ಚಿತ್ರ ಕುತೂಹಲಕಾರಿಯಾಗಿದೆ.. ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ಈ ಚಿತ್ರದ ವಿಶೇಷತೆ..
ನೆಡದದ್ದು ಮತ್ತೆ ಮಾರ್ದನಿಯಾಗಿ ಬರುತ್ತದೆ ಎನ್ನುವ ನೀತಿಯುಳ್ಳ ಈ ಕತೆ.. ದಿನೇಶ್ ಅವರ ಖಳನಾಯಕತ್ವದಲ್ಲಿ ಮುಂದುವರೆಯುತ್ತದೆ.. ತನ್ನ ಸಮಾಜಘಾತುಕತನದ ಕೆಲಸ ನೋಡಿದ್ದ ಡ್ರೈವರ್ ವಂಶವನ್ನು ನಿರ್ನಾಮ ಮಾಡಿದ್ದೀನಿ ಅಂದು ಕೊಂಡರೂ, ಡ್ರೈವರ್ ಮಕ್ಕಳು ತಪ್ಪಿಸಿಕೊಂಡು ಈ ಕೊಲೆಗಾರರನ್ನು ಮಟ್ಟ ಹಾಕಲು ಭಿನ್ನವಾದ ಹಾದಿ ತುಳಿಯುತ್ತಾರೆ.. ಒಬ್ಬ ಕಳ್ಳನಾದರೆ. ಇನ್ನೊಬ್ಬ ಪೊಲೀಸ್ ಅಧಿಕಾರಿಯಾಗುತ್ತಾನೆ.. ಇಬ್ಬರ ಲಕ್ಷ್ಯವೂ ಒಂದೇ.. ಆದರೆ ದಾರಿ ವಿಭಿನ್ನ..
ರಾಜೇಶ್ ಅಣ್ಣನ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಿಲ್ಲುತ್ತಾರೆ.. ಅವರ ಮತ್ತು ರಾಜಕುಮಾರ್ ನಡುವಿನ ಸಂಭಾಷಣೆಗಳ ಜುಗಲ್ಬಂದಿ ಚೆನ್ನಾಗಿದೆ..
ಆರತಿ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ, ಚಿತ್ರಕಥೆಗೆ ಅವರ ಪಾತ್ರ ಒಂದು ಕೊಂಡಿಯನ್ನು ಕೊಡುತ್ತದೆ.. ಕಾರಣ ಆಕೆಯ ತಂದೆ ಈ ಖಳನಾಯಕ..
ಪಂಡರಿಬಾಯಿ ದಯನೀಯವಾದ ತಾಯಿಯ ಪಾತ್ರ. ಇತ್ತ ಗಂಡನ ಆಟಾಟೋಪ, ಇತ್ತ ಮಗಳ ಯೋಗಕ್ಷೇಮ ಎರಡರ ನಡುವೆ ತೊಳಲಾಟದ ಅಭಿನಯ ಅವರದ್ದು
ದಿನೇಶ್.. ಇಲ್ಲಿ ಮತ್ತೆ ಖಳನ ಪಾತ್ರ.. ಕಿರುಚಾಡದೆ ತಣ್ಣಗೆ ಮಾಡುವ ಅವರ ಕ್ರೌರ್ಯ.. ಮತ್ತೆ ತಪ್ಪನ್ನು ಸಮರ್ಥಿಸಿಕೊಳ್ಳುವ ಅವರ ಪಾತ್ರದ ಶೈಲಿ..
ಭಟ್ಟಿ ಮಹದೇವಪ್ಪ, ಇಂದಿರಾ ಜಾರ್ಜ್, ನರಸಿಂಹರಾಜು, ಬಾಲಕೃಷ್ಣ, ತಿಮ್ಮಯ್ಯ, ಶ್ಯಾಮ್, ರಾಮ, ಇಂದ್ರಾಣಿ, ಜ್ಯೋತಿ ಲಕ್ಷ್ಮಿ, ಶನಿಮಹಾದೇವಪ್ಪ, ಮತ್ತು ರಮಾ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ.
No comments:
Post a Comment