Sunday, October 4, 2026

ತಾಯಿಗಿಂತ ದೇವರಿಲ್ಲ ಎಂದು ಸಾರುವ ತಾಯಿ ದೇವರು 1971 (ಅಣ್ಣಾವ್ರ ಚಿತ್ರ ೧೩೩/೨೦೭)

ಕೊಲ್ಲುವವ ಒಬ್ಬ ಇದ್ದರೇ 
ಕಾಯುವವ ಒಬ್ಬ ಈ ನಾಣ್ಣುಡಿಯ ಮೇಲೆ ಕಥೆ ಚಿತ್ರಕತೆ ಆಧಾರವಾಗಿದೆ.

ಆಸ್ತಿಯನ್ನು ಕಬಳಿಸುವ ನಿಟ್ಟಿನಲ್ಲಿ ಜ್ಯೋತಿಷ್ಯ, ಜಾತಕ ಎಂದು ನಂಬಿಸುವ ತಂಗಿ, ತನ್ನ ಅಣ್ಣನ ಹೆಂಡತಿಯ ಹೆರಿಗೆಯ ಸಮಯದಲ್ಲಿ ಹುಟ್ಟುವ ಮಗು, ಅದೇ ಹೊತ್ತಿಗೆ ವಕೀರರಿಂದ ಕರೆ ಬಂದು ಕೋರ್ಟಿನಲ್ಲಿ ಇದ್ದ ದಾವಾ ಆ ಕಡೆಯವರ ಪಾಲಾಗಿದೆ.. ಎಂದು ತಿಳಿದಾಗ ಇವೆಲ್ಲ ಜಾತಕದ ಪ್ರಭಾವ.. ಮಗುವನ್ನು ದೂರ ಮಾಡಿ ಎಂದು ದುರ್ಬುದ್ದಿ ಹೇಳಿ.. ಮಗುವನ್ನು ದೂರದಲ್ಲಿ ಬಿಟ್ಟು ಬರುತ್ತಾನೆ..

ಆದರೆ ಇದರ ಬಗ್ಗೆ ತಿಳಿದ ಅವರ ಡ್ರೈವರ್ ಆ ಮಗುವನ್ನು ತನ್ನ ಮನೆಗೆ ತರುತ್ತಾನೆ.. 

ಆದರೆ ವಿಧಿಯ ಆಟ.. ಆ ಮಗುವನ್ನು ಎತ್ತಿಕೊಂಡು ಸಾಕಿದ ತಾಯಿ ಆ ಮನೆಗೆ ಆಶ್ರಯಕ್ಕೆ ಬರುತ್ತಾಳೆ.. ಭಗವಂತನ ಅನುಗ್ರಹ.. ಆಸ್ತಿ ಕಬಳಿಸುವ ಹುನ್ನಾರ ಮಾಡಿದ್ದಕ್ಕೆ ಪ್ರತಿರೂಪ ಎನ್ನುವಂತೆ, ಮಾಲೀಕನಿಗೆ ಮಗುವಾಗುತ್ತದೆ.. ಹಾಗೆಯೇ, ಆತನ ತಂಗಿಗೂ ಮಕ್ಕಳಾಗುತ್ತದೆ.. 

ಹೀಗೆ ಮುಂದುವರೆಯುವ ಕತೆ.. ತಿರುವುಗಳಲ್ಲಿ ಔಟ್ ಹೌಸಿನಲ್ಲಿದ್ದ ಮಗುವೇ ತಾನು ಹೆತ್ತ ಮಗು ಎಂದು ಆ ಮಗುವಿನ ಸಾಕು ತಾಯಿಯಿಂದ ತಿಳಿದಾಗ.. ಹೆತ್ತ ತಾಯಿಗೆ ಆಗುವ ಖುಷಿ ಅಷ್ಟಿಟ್ಟಲ್ಲ.. 
 


ಇತ್ತ ಜ್ಯೋತಿಷ್ಯವನ್ನು ನಂಬುವ ಮಾಲೀಕ.. ತನ್ನ ವ್ಯವಹಾರದ ಪಾಲುದಾರನ ಜಾತಕದ ಅನುಸಾರ ಅವನು ಕೈಯಿಟ್ಟಿದ್ದೆಲ್ಲ ಮಣ್ಣು ಎಂದು ಅರಿವಾದ,.. ಆತನನ್ನು ತನ್ನ ವ್ಯವಹಾರದ ಪಾಲುದಾರಿಕೆಯಿಂದ ದೂರ ಮಾಡುತ್ತಾನೆ.. ಅದರ ಸೇಡು ತೀರಿಸಿಕೊಳ್ಳಲು ಆತ ಸಮಯಕ್ಕಾಗಿ ಕಾಯುತ್ತಿರುತ್ತಾನೆ.. 

ಸಾಕು ತಾಯಿ ಒಂದು ಕಡೆ.. ಹೆತ್ತ ತಾಯಿ ಒಂದು ಕಡೆ.. ಇವರಿಬ್ಬರ ಪ್ರೀತಿಯ ಸೆಳೆತ.. ತನ್ನನ್ನು ಪ್ರೀತಿಸುವ ನಾಯಕಿ.. ಆ ಮನೆಯವರ ತಿರಸ್ಕಾರ.. ಇತ್ತ ಕಡೆ ತನ್ನ ಅತ್ತೆಯ ಕಾಟ.. ಆದರೆ ತನ್ನ ಸೋದರ ಮಾವನ ಸಹಾಯ.. ಈ ಜಂಜಾಟದಲ್ಲಿ ಸಹಜವಾಗಿಯೇ ನಾಯಕ ಗೆಲ್ಲುತ್ತಾನೆ.. 

ಆದರೆ ಅದನ್ನು ನಿರೂಪಿಸಿರುವ ರೀತಿ ಸೊಗಸಾಗಿದೆ.. 

ತಾಯಿ ಪ್ರೀತಿ ಎಂದರೆ ರಾಜಕುಮಾರ್ ಅವರಿಗೆ ವೈಯುಕ್ತಿವಾಗಿ, ಮತ್ತೆಪಾತ್ರಗಳಲ್ಲಿಯೂ ಬಲು ಅಚ್ಚು ಮೆಚ್ಚು.. ಇಲ್ಲಿ ಇಬ್ಬರು ತಾಯಿಯರು ಎಂದ ಮೇಲೆ ಅವರ ಭಾವಾಭಿನಯಕ್ಕೆ ಎಲ್ಲೇ ಎಲ್ಲಿದೆ.. ಇತ್ತ ಕಡೆ ಸೋದರತ್ತೆ ಕೊಡುವ ಕಾಟವನ್ನು ತಮಾಷೆ ಮಾಡುತ್ತಾ ನಿಭಾಯಿಸುವ ಅವರ ಪಾತ್ರ.. ತಾಯಿ ಮಮತೆ ಎಳೆದಾಗ.. ಕೊಡುವ ಅಭಿನಯ ಸೂಪರ್.. 

ಹೆತ್ತ ತಂದೆಗೆ ತನ್ನ ಮಗ ಇವನೇ ಎಂದು ಗೊತ್ತಾಗದೆ.. ಚಾವಟಿಯ ಏಟು ಕೊಡುವಾಗ. ಹೆತ್ತ ಕರುಳು, ಸಾಕಿದ ಕರುಳು ಒದ್ದಾಡುವುದರ ನಡುವೆ ರಾಜಕುಮಾರ್ ನರಳುವುದು ಅದ್ಭುತವಾಗಿದೆ.. 

ಈ ರೀತಿಯ ಪಾತ್ರಗಳು ಅವರಿಗೆ ಲೀಲಾಜಾಲವಾದರೂ, ಪ್ರತಿಯೊಂದು ಚಿತ್ರದ ಈ ರೀತಿಯ ದೃಶ್ಯದಲ್ಲಿ ಅವರ ಅಭಿನಯ ಏಕತಾನತೆ ಅನಿಸೋದಿಲ್ಲ.. ಕಾರಣ ವಿಭಿನ್ನಾಗಿ ಅದನ್ನು ಪ್ರಚುರ ಪಡಿಸುವ ಅವರ ಅಭಿನಯದ ಪ್ರತಿಭೆ.. 

ಸಿದ್ದಲಿಂಗಯ್ಯನವರು ಮತ್ತೊಮ್ಮೆ ರಾಜಕುಮಾರ್ ಅವರ ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ... ಜೈನ ಮೂವೀಸ್ ಲಾಂಛನದಲ್ಲಿ.. ಚಂದೂಲಾಲ್ ಜೈನ ಅವರ ನಿರ್ಮಾಣದಲ್ಲಿ ತಯಾರಾದ ಚಿತ್ರಕ್ಕೆ ವಿಶ್ವಂ ಅವರ ಕಥೆ.. ಜಿ ಬಾಲಸುಬ್ರಮಣ್ಯಂ ಅವರ ಚಿತ್ರಕತೆ, ಜಿ ಕೆ ವೆಂಕಟೇಶ್ ಅವರ ಸಂಗೀತ.. ಚಿಟ್ಟಿಬಾಬು ಅವರ ಛಾಯಾಗ್ರಹಣ,, 

ಚಿ ಉದಯಶಂಕರ್ ಅವರ ಸಂಭಾಷಣೆ ಮತ್ತು ಹಾಡುಗಳು .

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಸ್ಪಿ ಬಾಲಸುಬ್ರಮಣ್ಯಂ, ಬಿಕೆ ಸುಮಿತ್ರಾ ಅವರ ಗಾಯನವಿದೆ 

ರಾಜಕುಮಾರ್ ಅವರ ಜೊತೆಯಲ್ಲಿ ಭಾರತಿ, ಅಶ್ವಥ್, ಎಂ ವಿ ರಾಜಮ್ಮ, ಬಾಲಕೃಷ್ಣ, ಪಾಪಮ್ಮ, ಇಂದಿರಾ ಜಾರ್ಜ, ರಾಘವೇಂದ್ರ ರಾವ್, ದ್ವಾರಕೀಶ್, ಶಕ್ತಿಪ್ರಸಾದ್, ಸಂಪತ್, ವಜ್ರಮುನಿ, ಬಿ ಜಯ, ಬಿ ಮಲ್ಲೇಶ್, ಅಶ್ವಥ್ ನಾರಾಯಣ, ಗುಗ್ಗು ಮೊದಲಾದವರು ಇದ್ದಾರೆ.. 

ತಾಯಿಮಮತೆಯನ್ನು ಸಾರುವುದೇ ಈ ಚಿತ್ರದ ವಿಶೇಷ
 
















No comments:

Post a Comment