ಹೌದು ಮೊದಲೇ ಹೇಳಿದ್ದೆ ಈ ಚಿತ್ರ ಅನೇಕ ಪ್ರಥಮಗಳ ಚಿತ್ರ ಅಂತ.. ನಿಜ ಸಂಗೀತ ನಿರ್ದೇಶಕರಾಗಿ ಉಪೇಂದ್ರಕುಮಾರ ಪಾದಾರ್ಪಣೆ ಮಾಡಿದರು..
ಆ ಕಾಲದ ಮೋಹಕ ನಟಿ ಎನಿಸಿದ್ದ ಉದಯಚಂದ್ರಿಕ ಅವರ ಮೊದಲ ಚಿತ್ರವಿದು..
ಖಳನಾಯಕನಾಗಿ ಮುಂದೆ ಹೆಸರು ಮಾಡಿದ ನಾಗಪ್ಪ ಈ ಚಿತ್ರಜೀವನ ಆರಂಭಿಸಿದ್ದು ಈ ಚಿತ್ರದಿಂದ!
ರಾಜಕುಮಾರ್ ಅವರ ಪಾತ್ರ ಒಂದು ಸಾಮ್ರಾಜ್ಯವನ್ನು ಕಾಪಾಡುವ ರಾಜಭಕ್ತಿಯಿಂದ ಕೂಡಿದ ವಂಶದ ಕುಡಿ.. ತನ್ನ ಅಪ್ಪನನ್ನು ರಾಜದ್ರೋಹಿ ಎಂದು ಪರಿಗಣಿಸಿದ ಒಂದು ದುಷ್ಟ ಸೇನಾಧಿಪತಿಯನ್ನು ಎದುರಿಸಿ ಅವನಿಂದ ಶೋಷಣೆಗೊಳಗಾದವರನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸುವ ಪಾತ್ರ,
ಆ ಜಾನಪದ ಕಥಾವಸ್ತುವಿನ ನಾಯಕನ ವೇಷಭೂಷಣಗಳು ಒಪ್ಪವಾಗಿ ರಾಜಕುಮಾರ್ ಅವರು ಬಹಳ ಸುಂದರವಾಗಿ ಕಾಣುತ್ತಾರೆ. ಹೊಡೆದಾಟದ ದೃಶ್ಯಗಳಲ್ಲಿ, ಭಾವನಾತ್ಮಕವಾದ ಸನ್ನಿವೇಶಗಳು, ರಾಜಭಕ್ತಿಯನ್ನು ಪ್ರದರ್ಶಿಸುವಲ್ಲಿ.. ಹಾಗೆಯೇ ಹಾಸ್ಯದ ಸನ್ನಿವೇಶಗಳಲ್ಲಿ.. ಹಾಗೆಯೇ ವೇಷಮರೆಸಿಕೊಂಡು ಬಂದಿದ್ದ ನಾಯಕಿಯನ್ನು ಗುರುತಿಸಲಾಗದೆ ಆಕೆಯ ಜೊತೆಯಲ್ಲಿ ಮಾತಾಡುವ ದೃಶ್ಯಗಳು.. ನಂತರ ಅವಳೇ ತಾನು ಇಷ್ಟಪಡುವ ನಾಯಕಿ ಎಂದು ಅರಿವಾದಾಗ ತೋರುವ ಭಾವ.. ಚಿತ್ರಕ್ಕೆ ಒಪ್ಪವಾಗಿ ಮೂಡಿಬಂದಿದೆ. ಈ ರೀತಿಯ ಪಾತ್ರಗಳು ಅವರಿಗೆ ಒಂದು ರೀತಿಯ ಅಂಗೈನ ಗೆರೆಗಳಾಗಿ ಬಿಟ್ಟಿವೆ ಅನಿಸುತ್ತೆ. ಹಿಂದಿನ ಅನೇಕ ಚಿತ್ರಗಳಲ್ಲಿ ಈ ರೀತಿಯ ಪಾತ್ರಗಳು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಅವರ ಅಭಿನಯ ಮೂಡಿ ಬಂದಿರುವುದು ನಾವು ಕಾಣಬಹುದು.
ಆದರೆ ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿ ಮೂಡಿಬರಲು ಕಾರಣ.. ಮತ್ತೆ ಆ ಪಾತ್ರದ ಅಭಿನಯ ಈ ಪಾತ್ರದ ಮೇಲೆ ಪರಿಣಾಮ ಬೀರೋದು.. ಅಥವ ಅರೆ ಇದೆ ಅಭಿನಯ ಆ ಚಿತ್ರದಲ್ಲಿ ಅನ್ನುವ ಹಾಗೆಯೇ ಇಲ್ಲ.. ಪ್ರತಿಯೊಂದು ಚಿತ್ರದ ಪಾತ್ರವೂ ವಿಭಿನ್ನ.. ಅದು ಹೇಗೆ ಅಂದರೆ ಒಬ್ಬನೇ ಸೂರ್ಯ ಉದಯವಾಗೋದು.. ಅಸ್ತವಾಗೋದು.. ಆದರೆ ಪ್ರತಿಯೊಂದು ದಿನವೂ ವಿಭಿನ್ನವಾಗಿ ಕಾಣೋದು.. ರಾಜಕುಮಾರ್ ಅವರ ಅಭಿನಯದ ಹರವು ಕೂಡ ಹಾಗೆಯೇ!
ಖಳನಾಯಕ ಎಂದರೆ ಜೋರಾಗಿ ಅಬ್ಬರಿಸೋದು. ವಿಚಿತ್ರ ವೇಷಭೂಷಣ ಅನ್ನುವ ಹಾಗಿಲ್ಲದೆ.. ತಮ್ಮ ಅಭಿನಯದಿಂದಲೇ ಅಬ್ಬಬ್ಬಾ ಎಷ್ಟು ಕ್ರೂರಿ ಈತ ಅನಿಸುವಷ್ಟು ಪರಿಣಾಮಕಾರಿ ಅಭಿನಯ ನೀಡಿರೋದು ಉದಯಕುಮಾರ್.. ಗಂಭೀರವಾದ ಸಂಭಾಷಣೆ, ಅದಕ್ಕೆ ಬೇಕಾದ ನಾಟಕೀಯ ಸ್ಪರ್ಶ.. ಆ ಗತ್ತು ಎಲ್ಲವೂ ಸೂಪರ್..
ಹಾಸ್ಯದೃಶ್ಯಗಳು ಬಾಲಕೃಷ್ಣ ಮತ್ತು ನರಸಿಂಹರಾಜು ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಚುರುಕಾದ ಸಂಭಾಷಣೆಗಳು ಖುಷಿಕೊಡುತ್ತವೆ.
ಉದಯಚಂದ್ರಿಕಾ ಆ ಕಪ್ಪು ಬಿಳುಪು ವರ್ಣಗಳಲ್ಲಿ ಅವರ ಸೌಂದರ್ಯ ಅದ್ಭುತವಾಗಿ ಕಾಣುತ್ತದೆ. ಕತ್ತಿಕಾಳಗದಲ್ಲಿ ಅವರು ತೋರುವ ಲವಲವಿಕೆ . ಭಾವನಾತ್ಮಕವಾದ ದೃಶ್ಯಗಳಲ್ಲಿ ಸೊಗಸಾದ ಅಭಿನಯ.. ಸೊಗಸು.
ಉಳಿದಂತೆ ಪಾಪಮ್ಮ, ನಾಗಪ್ಪ ನಾ ಈಗ ಏನ್ ಮಾಡ್ಲಿ ಅಂತ ಸದಾ ಕೇಳುವ ರತ್ನಾಕರ್.. ಮುಂತಾದ ಸಹಕಲಾವಿದರ ಅಭಿನಯ ಚಿತ್ರದ ಓಘಕ್ಕೆ ಸಾಥ್ ಕೊಟ್ಟಿದೆ,
ಉಪೇಂದ್ರಕುಮಾರ್ ಅವರ ಸರಳ ಸಂಗೀತ..
ಸೋರಟ್ ಅಶ್ವಥ್ ಸಂಭಾಷಣೆ ಹಾಗೂ ಗೀತಗಳ ಜವಾಬ್ಧಾರಿ
ಆರ್ ಮಧು ಅವರ ಸೊಗಸಾದ ಛಾಯಾಗ್ರಹಣ
ಈ ಎಲ್ಲರ ಪರಿಶ್ರಮವನ್ನು ಮತ್ತು ನಿರ್ಮಾಪಕರು ಟಿ ವಾಸಣ್ಣ ಹಾಗೂ ಎಸ್ ಹೀರಾ ಅವರ ನಿರ್ಮಾಣವನ್ನು ಸದುಪಯೋಗ ಮಾಡಿಕೊಂಡಿರುವ ವೈ ವಿ ರಾವ್ ಅವರು ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದಾರೆ..
No comments:
Post a Comment