ಸಾಮಾನ್ಯ ಹೊಸ ಸಿನಿಮಾಗಳು ಗಮನ ಸೆಳೆದರೆ ಮಾತ್ರ ನೋಡುವ ಅಭ್ಯಾಸ ಹವ್ಯಾಸವಾಗಿ ಹೋಗಿದೆ. ನನ್ನ ನೆಚ್ಚಿನ ಡಿವೈನ್ ಗೆಳತಿ ಶ್ರೀ ಈ ಸಿನಿಮಾ ನೋಡಿ ಒಮ್ಮೆ.. ನಿಮಗೆ ತುಂಬಾ ಇಷ್ಟವಾಗುತ್ತೆ ಅಂದಿದ್ದರು..
ಸರಿ ನೋಡೋಣ ಅಂತ ಹಾರಿಕೆಯ ಉತ್ತರ ಕೊಟ್ಟಿದ್ದೆ..ಜೊತೆಗೆ ಯಾರು ಇದ್ದಾರೆ ಈ ಚಿತ್ರದಲ್ಲಿ ಅಂತ ಅವರು ಹೇಳಿದರು.. ಆದರೆ ಚಿತ್ರದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.. ಪಾರ್ವತಿ ಇದ್ದಾಳೆ ಅಂತ ಅವರು ಹೇಳಿದಾಗ ಸಕತ್ ಖುಷಿಯಾಗಿತ್ತು.. ಕಾರಣ ಕನ್ನಡದ ಮಿಲನ, ಪೃಥ್ವಿ ಚಿತ್ರಗಳನ್ನು ನೋಡಿ ಅವಳ ದೊಡ್ಡ ಅಭಿಮಾನಿಯಾಗಿದ್ದೆ..
ಚಿತ್ರಕೃಪೆ - ಗೂಗಲೇಶ್ವರ |
ಏನೋ ಒಂದು ರೀತಿಯ ಆಕರ್ಷಣೆ ಇತ್ತು ಅವಳಲ್ಲಿ.. ಬಾಗಿದ ಹುಬ್ಬು.. ಚಿತ್ರಕ್ಕೆ ಬೇಕಾದಂತೆ ಒಮ್ಮೆ ಗುಂಗುರು ಕೂದಲು.. ಇಲ್ಲವೇ ಪರಕೆ ಕಡ್ಡಿಯಂತೆ ನೇರವಾದ ಕೂದಲು.. ಹೊಳೆಯುವ ಕಂಗಳು.. ನೀಳವಾದ ನಾಸಿಕ.. ತುಂಬಾ ಮುದ್ದಾಗಿ ಕಾಣುವ ಅವಳನ್ನು ಚಿತ್ರಪೂರ್ತಿ ನೋಡಬಹುದು ಎನಿಸಿದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು..
ಸರಿ ಅದಕ್ಕೆ ಒಂದು ಮುಹೂರ್ತ ನಿಗದಿ ಪಡಿಸಿ ಇಂದು ಎರಡೂವರೆ ಘಂಟೆಗಳ ಕಾಲ ಬಿಡುವು ಮಾಡಿಕೊಂಡು (ಬಿಡುವು.. ಹ ಹ ಹ ಒಳ್ಳೆಯ ಜೋಕ್ ಅಲ್ಲವೇ ಕೊರೊನ ಬೇಕಾದಷ್ಟು ಸಮಯ ಕೊಟ್ಟಿದೆ) ಇಂದು ನೋಡಿಯೇ ಬಿಟ್ಟೆ..
ಜಯ ಶಶಿಧರನ್ ಪಾತ್ರದಲ್ಲಿ ಅಕ್ಷರಶಃ ಪಾರ್ವತೀ ನ್ಯಾಯ ಒದಗಿಸಿದ್ದಾರೆ.. ಚಿತ್ರಪೂರ್ತಿ ಅವರನ್ನು ನೋಡುವುದೇ ಒಂದು ಹಬ್ಬ.. ಕಣ್ಣುಗಳಲ್ಲೇ ಭಾವನೆ ತೋರಿಸುವ ಆಕೆ ನಿಜಕ್ಕೂ ಜಯ ಆಗಿ ಈ ಪಾತ್ರವಾಗಿ ಬಿಟ್ಟಿದ್ದಾರೆ..
ಚಿತ್ರಕೃಪೆ - ಗೂಗಲೇಶ್ವರ |
ಪ್ರತಿ ದೃಶ್ಯದಲ್ಲಿಯೂ ಆಕೆ ಇರುವುದರಿಂದ ನನಗೆ ಅರ್ಜುನನ ಮಾತು ನೆನಪಿಗೆ ಬಂತು.. ಗುರುಗಳೇ ಹಕ್ಕಿಯ ಅಕ್ಷಿಯಲ್ಲದೆ ಬೇರೇನೂ ಕಾಣೋದಿಲ್ಲ ಅನ್ನುವ ಹಾಗೆ ಇಡೀ ಚಿತ್ರದುದ್ದಕ್ಕೂ ಆಕೆಯನ್ನು ಅನುಸರಿಸುತ್ತದೆ ನನ್ನ ಕಣ್ಣುಗಳು..
ತುಸು ಬಣ್ಣದ ನೇರವಾದ ಕೂದಲು... ಹೊಳೆಯುವ ಕಣ್ಣುಗಳು, ಬಾಗಿದ ಹುಬ್ಬಿನ ಜೊತೆ ಇನ್ನೊಂದು ವಿಶೇಷ ಅಂದರೆ ಆಕೆಯ ನೀಳವಾದ ನಾಸಿಕಕ್ಕೆ ತ್ರಿಕೋಣಾಕಾರಣದ ಹೊಳೆಯುವ ಮೂಗುತಿ.. ಅದ್ಭುತವಾಗಿ ಕಾಣುತ್ತಾರೆ..
ಆಕೆಯ ವೇಷಭೂಷಣಗಳು ಸರಳವಾಗಿ, ಸುಂದರವಾಗಿ ಕಾಣುವಂತೆ ಮಾಡಿವೆ.. ಅದರಲ್ಲೂ ಚಿತ್ರದ ಕೊನೆಯ ದೃಶ್ಯಗಳಲ್ಲಿ ಆ ಸೀರೆಯಲ್ಲಿ ಸರಳ ಸುಂದರತೆ ಎಂದರೆ ಇದು ಎನ್ನುವಂತೆ ಮಾಡಿವೆ.
ಚಿತ್ರಕೃಪೆ - ಗೂಗಲೇಶ್ವರ |
ತನ್ನ ಜೀವನದ ಘಟನೆಗಳನ್ನು ನೆನೆಯುತ್ತಾ ಆಫೀಸಿಗೆ ಬರುತ್ತಾ.. ಬಾಗಿಲನ್ನು ತೆರೆಯುವ ಮುಂಚೆ.. ಒಮ್ಮೆ ದೀರ್ಘ ಉಸಿರು ಎಳೆದುಕೊಂಡು ಮುಖದ ಮೇಲೆ ನಗು ತಂದುಕೊಂಡು ತನ್ನ ಸಹೋದ್ಯೋಗಿಗಳಿಗೆ ಶುಭ ಕೋರುತ್ತಾ ಒಳಗೆ ಬರುವ ದೃಶ್ಯ ನನ್ನ ಇಷ್ಟವಾದ ದೃಶ್ಯ..
ಅರೆ ಕಷ್ಟಗಳು, ನೋವು ಇದ್ದೆ ಇರುತ್ತೆ.. ಅದನ್ನು ಬಾಗಿಲಿನಲ್ಲಿಯೇ ಬಿಟ್ಟು ಸವಾಲುಗಳಿಗೆ ಠಕ್ಕರ್ ಕೊಡಬೇಕು ಎನ್ನುವ ಅದ್ಭುತ ದೃಶ್ಯವದು..
ತನ್ನ ವಿವರಗಳನ್ನು ಜಾಲತಾಣದಲ್ಲಿ ತುಂಬುವಾಗ.. ತನ್ನ ವಯಸ್ಸನ್ನು ಮೊದಲು ಸರಿಯಾಗಿ ನಮೂದಿಸಿ ನಂತರ ಕಡಿಮೆ ಮಾಡುವಾಗ ಪುಟ್ಟ ತುಂಟ ನಗು.. ಕಣ್ಣುಗಳ ಹೊಳಪು ನೋಡಿದಾಗ ಒಮ್ಮೆ ಎದೆಯ ಬಡಿತ ಕೊಂಚ ಹೆಚ್ಚಾಗುತ್ತದೆ..
ಚಿತ್ರಕೃಪೆ - ಗೂಗಲೇಶ್ವರ |
ಪ್ರತಿ ದೃಶ್ಯದಲ್ಲಿಯೂ ಆಕೆಯ ಅಭಿನಯ ತುಂಬಾ ಇಷ್ಟವಾಗುತ್ತದೆ.. ಕೆಲವು ದೃಶ್ಯಗಳಲ್ಲಿ ಓಲಾಡುವ ಕ್ಯಾಮೆರಾ ಆಕೆಯ ಮನಸ್ಥಿತಿ ಡೋಲಾಯಮಾನವಾಗಿರುವುದನ್ನು ಬಿಂಬಿಸುತ್ತದೆ.
ಒಂದು ದೃಷ್ಟಾಂತ ಕತೆ ನೆನಪಿಗೆ ಬಂತು..
ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬಾಕೆ ತನ್ನ ಮಗು ತುಂಬಾ ಬೆಲ್ಲಾ ತಿನ್ನುತ್ತದೆ.. ಅದನ್ನು ಬಿಡಿಸುವ ಉಪಾಯ ಹೇಳಿ ಅಂದಾಗ.. ಆಕೆಯನ್ನು ಒಂದು ವಾರ ಬಿಟ್ಟು ಬರೋಕೆ ಹೇಳುತ್ತಾರೆ.. ಒಂದು ವಾರ ಬಿಟ್ಟು ಬಂದಾಗ ಆಕೆಯ ಮಗುವಿಗೆ "ನೋಡು ಮಗು ಬೆಲ್ಲ ತಿಂದರೆ ಹಲ್ಲು ಹಾಳಾಗುತ್ತದೆ.. ತಿನ್ನೋದು ಬಿಟ್ಟು ಬಿಡು ಮಗು" ಎಂದು ಮಗುವಿನ ತಲೆ ಸವರುತ್ತಾರೆ..
"ಆಕೆ ಅಲ್ಲಾ ಗುರುಗಳೇ ಇದೆ ಮಾತನ್ನು ಹೋದವಾರ ಹೇಳಬಹುದಿತ್ತಲ್ವಾ" ಎಂದಾಗ.. "ನೋಡಮ್ಮ ಬೆಲ್ಲ ತಿನ್ನುವ ಅಭ್ಯಾಸ ನನಗೂ ಇತ್ತು.. ಅದನ್ನು ಬಿಡುವ ಕಷ್ಟ ನನಗೆ ಅರ್ಥವಾದ ಮೇಲೆ... ನಾನು ಇನ್ನೊಬ್ಬರಿಗೆ ಉಪದೇಶ ಹೇಳಬಹುದು ಅಂತ ಅರಿವಾಯಿತು... "
ಈ ಸಿನಿಮಾ ನೋಡಿದಾಗ ನನಗೆ ಅನಿಸಿದ್ದು ಇದೆ ಮಾತು.. ಒಂಟಿ ಜೀವನ ಅಂತ ಬಂದಾಗ ಅದರ ಸಾಧಕ ಬಾಧಕಗಳ ಬಗ್ಗೆ ಅರಿವಾದಾಗ ಜಯ ಶಶಿಧರನ್ ಪಾತ್ರ ಇನ್ನಷ್ಟು ಹತ್ತಿರವಾಗುವ ಪಾತ್ರವಾಗುತ್ತದೆ..
ಚಿತ್ರಕೃಪೆ - ಗೂಗಲೇಶ್ವರ
ಚಿತ್ರದ ಅಂತ್ಯದ ಒಂದು ಭಾಗದಲ್ಲಿ ಸುಮಾರು ಇಪ್ಪತ್ತು-,ಮೂವತ್ತು ಸೆಕೆಂಡುಗಳು ಆಕೆಯ ಮೊಗದ ಮೇಲೆ ಸ್ಟೆಡಿ ಕ್ಯಾಮೆರಾ ನಿಲ್ಲುತ್ತದೆ.. ಕ್ಷಣ ಕ್ಷಣಕ್ಕೂ ಮುಖದ ಭಾವ ಬದಲಿಸುವಾಗ ನನ್ನ ಕಣ್ಣಂಚಲ್ಲಿ ಕೊಂಚ ಹನಿಗಳು ಕಟ್ಟೆ ಕಟ್ಟಿದವು.. ಅದ್ಬುತ ಅಭಿನೇತ್ರಿ ನನ್ನ ನೆಚ್ಚಿನ ಪಾರ್ವತಿ.. ...
ಹೆಣ್ಣಿನ ಮನದ ತುಮುಲಗಳನ್ನು, ಗೊಂದಲಗಳನ್ನು, ಪರಿಸ್ಥಿತಿಯನ್ನು ನಿಭಾಯಿಸುವ ಹೆಣ್ಣಾಗಿ ಪಾರ್ವತೀ ಬಿಂದಾಸ್ ಹಾಗೂ ಬೊಂಬಾಟ್..
ತನುಜಾ ಚಂದ್ರ ಅವರ ನಿರ್ದೇಶನ ಮನಸ್ಸೆಳೆಯುತ್ತದೆ... ಕಾಮ್ನ ಚಂದ್ರ ಅವರ ಕತೆಯನ್ನು ಸುಂದರ ಚಿತ್ರಕತೆಯನ್ನಾಗಿಸಿದವರು ತನುಜಾ ಚಂದ್ರ, ಗಝಲ್ ಧಾಲಿವಾಲ್ ಮತ್ತು ರಾಮಾಶ್ರಿತ್ ಜೋಶಿ.. ಹಾಡುಗಳು ಚಿತ್ರಕತೆಯನ್ನು ಮುಂದಕ್ಕೆ ಕೊಂಡು ಹೋಗಲು ಸಹಾಯ ಮಾಡುತ್ತದೆ.. ಸಾಹಿತ್ಯ ಕತೆಯನ್ನು ಮುಂದಕ್ಕೆ ಒಯ್ಯಲು ಮತ್ತು ಪಾತ್ರಧಾರಿಗಳ ಮನಸ್ಸಿನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ..
ಚಿತ್ರಕೃಪೆ - ಗೂಗಲೇಶ್ವರ |
ಶ್ರೀ ನಿನಗೇನಾಯ್ತು.. ಈ ಚಿತ್ರದಲ್ಲಿ ಪಾರ್ವತೀ ಒಬ್ಬಳೇನಾ ಇರೋದು... ಬೇರೆ ಯಾರೂ ಇಲ್ವಾ ಅಂತ ಮನಸ್ಸು ಕೇಳಿತು..
ಹೌದು ಕಣೋ.. ಇದ್ದಾರೆ.. ಆಕೆಯ ಒಂಟಿತನವನ್ನು ತಮ್ಮ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳೋಕೆ ಉಪಯೋಗಿಸುವ ಗೆಳತಿ.. ಆಕೆಯನ್ನು ಬೇಕಾದ ಹೊತ್ತಿಗೆ ಮಾತ್ರ ಉಪಯೋಗಿಸುವ ಆಕೆಯ ಇತರ ಗೆಳತಿಯರು ತನ್ನನ್ನು ಅವರ ಅವಶ್ಯಕತೆಗೆ ಮಾತ್ರ ಉಪಯೋಗಿಸುತ್ತಿದ್ದಾರೆ ಎಂದು ಅರಿವಾದಾಗ ಆಕೆ ಎಲ್ಲರಿಗೂ ಕರೆ ಮಾಡಿ ಸ್ನೇಹಿತೆ ಬೇಕು ಅನಿಸಿದಾಗ ಕರೆ ಮಾಡಿ ಎಂದು ಹೇಳುವಾಗ ಆಕೆಯ ಮುಖಭಾವ ಇಷ್ಟವಾಗುತ್ತದೆ..
ಲೋ ಅದನ್ನು ಹೇಳುವಾಗಲೂ ಪಾರ್ವತಿಯೇ ಬೇಕಾ.. ಮಿಕ್ಕವರ ಬಗ್ಗೆ ಹೇಳು ಗುರು ಅಂತ ನನ್ನ ಮನಸ್ಸು ದಂಬಾಲು ಬಿತ್ತು..
ಸರಿ ಕಣಪ್ಪ.. ಹೇಳ್ತೀನಿ .. ಈ ಚಿತ್ರದಲ್ಲಿ ಪಾರ್ವತೀ ಜೊತೆಗೆ ಇರ್ಫಾನ್ ಖಾನ್ ಯೋಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.. ಮೋಟಾರ್ ಮೌತ್ ಅಂತಾರಲ್ಲ ಹಾಗೆ ಚಟಪಟ ಮಾತುಗಳಲ್ಲಿ ಆರಂಭದಲ್ಲಿ ಕೊಂಚ ಬೋರ್ ಹೊಡೆಸಿದರೂ.. ಪ್ರೀತಿ ಎನ್ನುವ ನೈಜತೆಯ ಬಲೆಗೆ ಬಿದ್ದಾಗ ಗಂಭೀರವಾಗುವ ಅವರ ಸಹಜ ಅಭಿನಯ ಇಷ್ಟವಾಗುತ್ತದೆ..
ಕಾರಣ ಗೊತ್ತಿಲ್ಲ.. ನಾನು ಇರ್ಫಾನ್ ನ ಅಭಿಮಾನಿಯಲ್ಲ.. ಬಹುಶಃ ಆತನ ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡದೆ ಇರೋದು ಆಗಿರಬಹುದು.. ಅಥವ ಕೊಂಚ ಪೂರ್ವಗ್ರಹ ಪೀಡಿತನಾಗಿ ಹೊಸತನದ ಚಿತ್ರಗಳನ್ನು ನೋಡದೆ ಇರಬಹುದು.. ಒಟ್ಟಿನಲ್ಲಿ ಅರ್ಜುನ ಮತ್ಸ್ಯ ಯಂತ್ರ ಭೇದಿಸುವಾಗ ಬರಿ ಮೀನಿನ ಕಣ್ಣು ಮಾತ್ರ ಕಾಣುವ ಹಾಗೆ. .. ಇಡೀ ಚಿತ್ರದಲ್ಲಿ ಪಾರ್ವತಿಯೇ ಕಾಣುತ್ತಾಳೆ..
ಆದರೆ ಕಡೆಯ ದೃಶ್ಯದಲ್ಲಿ ನೀರಿನ ಬಾಟಲ್ ತೋರಿಸಿ ಅವರು ಹೇಳುವ ಸಂಭಾಷಣೆಗೆ ಫಿದಾ ಆಗಿಬಿಟ್ಟೆ..
ಒಂದು ಸುಂದರ ಕತೆಯನ್ನು ಸುಂದರ ಸಿನಿಮಾ ಮಾಡಿ.. ಅದನ್ನು ಅದ್ಭುತ ಎನ್ನುವ ಹಂತಕ್ಕೆ ಕರೆದೊಯ್ದಿದ್ದು.. .. ಬಿಡಪ್ಪ ನಿನ್ನ ಪಾರ್ವತಿಯೇ ಮುಖ್ಯ ಮಿಕ್ಕೆಲ್ಲರೂ ಇಲ್ಲಿ ಇಲ್ಲವೇ ಇಲ್ಲ.. ಈ ಚಿತ್ರದ ಹೆಸರು ಕರೀಬ್ ಕರೀಬ್ ಅಕೇಲಿ ಸಿನೆಮಾ ಕೋ ಜಾನ್ ದಿಯಾ ಹೈ ತುಮ್ಹಾರೀ ಪಾರ್ವತಿ ಎಂದಿತು ಮನಸ್ಸು..
ಹೌದು ಕನ್ಲಾ ಸರಿಯಾಗಿ ಹೇಳಿದೆ ಅಂದೇ.. ಹೌದು ಕರೀಬ್ ಕರೀಬ್ ನಹಿ ಬಹುತ್ ಬಹುತ್ ಏ ಸಿನಿಮಾ ಪಾರ್ವತೀ ಕೋ ಜಾತಿ ಹೈ!
Superb 👌
ReplyDeleteThank you Magale.. thank you for the reading!
Deleteee movie ega nodalebeku anside!!!
ReplyDeletePlease watch it..nice movie..Parvati steals the show!
DeleteEvattu kutkondu e film nodode kelsa.. as usual nim Baraha super.. I am also a fan of parvati... Simple beauty... Over acting illa.. yavde charctergu nyaya odagiso astu chenagi madtale...
ReplyDeleteVery true putty..she is simple and effective acting..Thank you for the reading and complimenting!
DeleteHame pathaa tha ki jaya (parvathi menon) aapke dil pe chaayegi... Aur aise blog likhneki prerana jaroor banegi.... and I was right. Liked your review and thanks for watching 👏👏👏
ReplyDeleteThank you for suggesting to watch this movie...Parvati really grabs the screen space and acting.. She is an eye candy to watch over the length of the movie..amazing she is!
DeleteI loved the movie too. Parvathy of course steals the show. Loved your review sri.
ReplyDeleteThank you CB..
DeleteParvathy walks away with the credits..so true