ಕೆಲವೊಂದು ಚಿತ್ರಗಳು ಸಿಗೋಲ್ಲ .. ಸಿಕ್ಕರೂ ಪ್ರಿಂಟ್ ಚೆನ್ನಾಗಿರೊಲ್ಲ.. ಕಾರಣಗಳು ಹತ್ತಾರು.. ನೆಗೇಟಿವ್ಸ್ ಸುಟ್ಟುಹೋಗಿರಬಹುದು, ಹಾಳಾಗಿರಬಹುದು, ಸರಿಯಾಗಿ ಸಂರಕ್ಷಣೆ ಮಾಡದೆ ಹಾಳಾಗಿರಬಹುದು.. ಕಳೆದುಹೋಗಿರಬಹುದು, ಅಥವ ಸರಿಯಾದ ಲೇಬಲ್ ಇಲ್ಲದೆ ಗುರುತಿಸಲಾಗದ ನೆಗೇಟಿವ್ಸ್ ಅಂತ ಒಂದು ಮೂಲೆಯಲ್ಲಿ ಅಳುತ್ತಾ ಕೂತಿರಬಹುದು... ಹಲವಾರು ಸಾಧ್ಯತೆಗಳಿರುತ್ತವೆ..
ಅಂತಹ ಒಂದು ಚಿತ್ರ ೧೯೬೨ ಇಸವಿಯಲ್ಲಿ ತೆರೆಕಂಡ ದೇವಸುಂದರಿ ಚಿತ್ರ.. ಸಿ ವಿ ರಾಜು ನಿರ್ದೇಶಿಸಿದ ಈ ಚಿತ್ರವನ್ನು ಎಂ ಎಚ್ ಎಂ ಮುನಾಸ್ ನಿರ್ಮಿಸಿದ್ದರು. ಸಿ ಎನ್ ಪಾಂಡುರಂಗ ಅವರ ಸಂಗೀತವಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಬಿ ಸರೋಜಾದೇವಿ, ನರಸಿಂಹರಾಜು, ಕಲ್ಯಾಣ್ ಕುಮಾರ್ ಮತ್ತಿರರು ನಟಿಸಿದ್ದರು. ಡಿ ಎಸ್ ಖೋಟ್ನಿಸ್ ಛಾಯಾಗ್ರಹಣವಿದ್ದ ಈ ಚಿತ್ರದ ಪ್ರತಿ ಎಲ್ಲೂ ಸಿಗುತ್ತಿಲ್ಲ.. ಆದರೂ ಹುಡುಕುವ ಪ್ರಯತ್ನ ಮಾಡಿ ಮುಂದೊಂದು ದಿನ ಸಿಕ್ಕಾಗ ಈ ಚಿತ್ರದ ಬಗ್ಗೆ ಬರೆಯುವೆ.

ವಿಕಿಪೀಡಿಯದ ಒಂದು ತುಣುಕು.. |
ಮುಂದಿನ ಚಿತ್ರದಲ್ಲಿ ಸಿಗೋಣ ಅಲ್ಲವೇ..
ಇದೊಂದು ವಿಚಾರದಲ್ಲಿ ಶ್ರೀಯುತ ರಾಮೋಜಿ ರಾವ್ RFC ಮೂಲಕ ತೆಲುಗು ಚಿತ್ರ ರಸಿಕರಿಗೆ ಪ್ರಾಯಃ ಸ್ಮರಣೀಯರು. ಹಲವು ತೆಲುಗಿನ ಕಪ್ಪು ಬಿಳುಪು classicಗಳನ್ನು restore ಮಾಡಿ, ಮರು ಶುದ್ದೀಕರಿಸಿ, ದ್ವನಿ ಉತ್ತರೀಕರಿಸಿದ್ದಾರೆ. ಅವು ಈಗ YouTube ಮತ್ತು ಈ ಟೀವಿ ಸಿಮಾದಲ್ಲೂ ಲಭ್ಯ.
ReplyDeleteಇಂತಹ ಪ್ರಯತ್ನ ಇಲ್ಲಿ ಯಾರು ಕೈಗೊಳ್ಳುವರೋ? ವಜ್ರೇಶ್ವರಿ ಸಂಸ್ಥೆ ಮನಸು ಮಾಡಿದರೆ, ಅವರಿಗೆ ಇದು ಸರಳ ಸಾಧ್ಯ. Restore ಮಾಡಿ ಡಿಜಟಲೀಕರಿಸಿದರೆ ಮುಂದಿನ ತಲೆಮಾರುಗಳಿಗೂ ಅಣ್ಣಾವ್ರ ಇಡೀ ಚಿತ್ರಗುಚ್ಛ ಉತ್ತಮ ಗುಟ ಮಟ್ಟದಿ ಲಭಿಸಬಹುದು.
ನಿಮ್ಮ ಚಿತ್ರ ರಸಿಕತನಕ್ಕೆ ನಮ್ಮ ಶರಣು.
ಧನ್ಯವಾದಗಳು ಬದರಿ ಸರ್ ವಿಸ್ತೃತ ಪ್ರತಿಕ್ರಿಯೆ ಖುಷಿ ಕೊಟ್ಟಿತು
Deleteಅಂತೆಯೇ ಕನ್ನಡ ಚಲನ ಚಿತ್ರಗಳ ಬಗೆಗೆ ವಿಕೀಪೀಡಿಯಾ ಮತ್ತು ಗೂಗಲೇಶ್ವರದಲ್ಲೂ ಮಾಹಿತಿ ಕೊರತೆಯಿದೆ. ತುಂಬುವ ವಲನಚಿತ್ರ ಇತಿಹಾಸಕಾರರು ಮನಸು ಮಾಡಬೇಕಷ್ಟೇ.
ReplyDeleteವಿಕಿಪೀಡಿಯದಲ್ಲಂತೂ ಕೆಂಪು ಲಿಂಕುಗಳ ಸರ ಮಾಲೆಯೇ ನಮ್ಮ ಮಾಹಿತಿ ಹಪಹಪಿಗೆ ತೊಡರುಗಾಲು!
ನಿಜವಾದ ಮಾತು.. ವಿವರಗಳಿಗೆ ಹುಡುಕಾಡುವಾಗ ಈ ಕೆಂಪು ಕೆಂಪು ಅಕ್ಷರಗಳು ಬೇಸರ ಮೂಡಿಸುತ್ತವೆ
DeleteSir RFC andre yenu
ReplyDeleteWhat is RFC
ReplyDelete