Thursday, April 24, 2014

ರಾಜ್ ಆಸ್ಥಾನದಲ್ಲಿ ಅಣ್ಣಾ !!!!

ಕಾಂತ.. ಶ್ರೀಕಾಂತ.. ಶ್ರೀಕಾಂತು.. ಶ್ರೀಕಾಂತೂ...

ಯಾರೋ ಕೂಗಿದ ಹಾಗೆ ಆಯಿತು.. ಮಯೂರ ಶೈಲಿಯಲ್ಲಿಯೇ

"ನಿನಗೆ ನನ್ನ  ಜನುಮ ದಿನ ನೆನಪಿಲ್ಲವೇ.. .. ಇದರ ಬಗ್ಗೆ ಏನಾದರೂ ಬರೆಯುದಿಲ್ಲವೇ.. "

ಅಚಾನಕ್ ಕಣ್ಣು ಬಿಟ್ಟೆ.. ಸುತ್ತ ಮುತ್ತಲು ಕಪ್ಪು ಕತ್ತಲೆ...

ನಿಧಾನವಾಗಿ ಇದ್ದ ಜಾಗವನ್ನು ಪರಿಶೀಲಿಸುತ್ತಾ ಹೋದೆ.. ಅಭಿಮಾನದ ಬೆಳಕಲ್ಲಿ ಅಲ್ಲಿ ಇದ್ದ ದೃಶ್ಯಗಳು ಕಾಣತೊಡಗಿದವು..

ಒಂದು ಕಿರು ನಗೆ ಬೀರಿದೆ..

ಹಾ ಈಗ ಬರಿಯಬಹುದು.. ಬೇಗ ಬರಿ ಕಾಂತ.. ಓದಬೇಕು ಎಂದಿತು ಒಂದು ಅಶರೀರವಾಣಿ... !

ಅದರ ಫಲವೇ ಈ ಲೇಖನ!!!!!

***************

ರಾಜಸ್ಥಾನದಲ್ಲಿ ನಡೆಯುತ್ತಾ ಹೋದೆ.. ಆ ಕಡೆ ಈ ಕಡೆ ಸಾಧು ಸಂತರು, ಸಾಮಂತರು, ಪ್ರಜೆಗಳು, ಗಾಯಕರು, ಕಲಾವಿದರು ಎಲ್ಲರೂ ನೆರೆದಿದ್ದರು.. ನಿಧಾನವಾಗಿ ಕಣ್ಣು ಹಾಯಿಸಿದೆ.. ಬಹು ಪರಾಕ್ ಬರುತ್ತಿತ್ತು..

"ರಾಜಾಧಿರಾಜ.. ರಾಜ ಮಾರ್ತಂಡ.. ಕರುನಾಡಿನ ಅಭಿನಯ ತಿಲಕ, ಹುಟ್ಟು ಕಲಾವಿದ.. ಬಹು ಪರಾಕ್ ಬಹು ಪರಾಕ್.. "

"ಅಭಿಮಾನಿ ದೇವರುಗಳೇ.. ದಯಮಾಡಿ ಎಲ್ಲರೂ ಆಸೀನರಾಗಿ.. ನೀವೆಲ್ಲ ಇಂದು ಬಂದದ್ದು ನನಗೆ ಬಹಳ ಸಂತಸವಾಗುತ್ತಿದ್ದೆ. ನೀವೆಲ್ಲ ಇಂದು ಬಂದ ಕಾರಣ ಹೇಳಿದರೆ ನನಗೆ ಇನ್ನಷ್ಟು ಖುಷಿಯಾಗುತ್ತದೆ.. ಒಬ್ಬೊಬ್ಬರಾಗಿ ನಿಮ್ಮ ಪರಿಚಯ ಮಾಡಿಕೊಳ್ಳಿ..ಹಾಗೆಯೇ ಇಂದು ನಮ್ಮ ಆತಿಥ್ಯ ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕು"

ನೆರೆದಿದ್ದ ಎಲ್ಲರೂ ಒಂದೇ ಉಸಿರಲ್ಲಿ "ಆಗಬಹುದು" ಎಂದರು.. ಇಲ್ಲಿಂದ ಶುರುವಾಯಿತು ಒಂದು ಬೃಹತ್ ಸಭಾ ದೃಶ್ಯ..

******************

ಅಣ್ಣ ನಿಮಗಾಗಿ ನನ್ನ ಕಣ್ಣು ಕೊಡಲು ಸಿದ್ಧ ಅಂತ ಒಬ್ಬರು ನಿಂತರು.. ಅಣ್ಣಾ ನೀವು ಹೇಳಿ.. ನಾ ಅದನು ಮಾಡಲು ಸಿದ್ಧ ಎಂದರು ಇನ್ನೊಬ್ಬರು..


ನಿಮ್ಮ ರಾಜ್ಯದಲ್ಲಿ ಸಾಧು ಸಂತರಿಗೆ.. ದೇವಾನು ದೇವತೆಗಳಿಗೆ ತೊರುತ್ತಿರುವ ಅಭಿಮಾನ, ಭಕ್ತಿ ತುಂಬಾ ಇಷ್ಟವಾಗುತ್ತಿದೆ ಪ್ರಭು ಎಂದರು ಇನ್ನಿಬ್ಬರು.. 


ಪ್ರಭು .. ಕರುನಾಡಿನ ಉಳಿವಿಗಾಗಿ ಹೋರಾಡಲು ಸದಾ ಸಿದ್ಧ.. ನೋಡಿ ಗದೆಯನ್ನು ಯಾವಾಗಲೂ ಹೀಗೆಯೇ ಇಟ್ಟುಕೊಂಡು ನಿಂತಿರುತ್ತೇನೆ..!

ಕನ್ನಡ ನಾಡಿನ ಸಿಂಹಗಳಿಗೆ ನೀವು ಕಳಶಪ್ರಾಯ.. ಅದರಂತೆ ನಾವು ಕೂಡ ಎಂದರು ರಣಧೀರರು!


ದೇವರಿಲ್ಲದ ತಾಣವಿಲ್ಲ.. ನಾಡಿನ ಬಗ್ಗೆ ಅಭಿಮಾನವಿರದ ಪ್ರಜೆಗಳಿಲ್ಲ.. ಕೈವಾರದಿಂದ ಕಿತ್ತೂರಿನ ತನಕ ಎಲ್ಲೆ ಇರದ ಅಭಿಮಾನದ ಭಕ್ತಿ ನಮ್ಮದು ಅಣ್ಣಾ ಎಂದರೂ ಕೈವಾರ ಮತ್ತು ಕಿತ್ತೂರಿನ ಪ್ರಮುಖರು..


"ಕುಲ ಕುಲವೆಂದು ಹೊಡೆದಾಡುತ್ತಲೇ ಇಲ್ಲ ರಾಜರೆ.. ನಮಗೆ ಎಲ್ಲರೂ ಸಮಾನರು ಎನ್ನುವ ನಿಮ್ಮ ತತ್ವವೇ ನಮಗೆ ಆದರ್ಶ.. ಚೇತ ಆಗಿರಲಿ ಕಬೀರ್ ಆಗಿರಲಿ ಎಲ್ಲರೂ ಒಂದೇ ಎನ್ನುವ ನಿಮ್ಮ ಮಾತಿಗೆ ನಮ್ಮ ನಮನಗಳು"


"ಕರುನಾಡಿನ ವಿಷಯಕ್ಕೆ ಬಂದರೆ ಸತಿಶಕ್ತಿ ಮಹತ್ವವೇನು ಎಂದು ತೋರಿಸಿಯೇ ಬಿಡುತ್ತೇನೆ.. ಎಂದು ಟೊಂಕ ಕಟ್ಟಿ ನಿಂತಿದ್ದೇನೆ ಅಣ್ಣ.. ನೀವು ಹೂಂ ಎಂದು ಹೇಳಿ.. ಮುಂದೆ ನಮಗೆ ಬಿಡಿ"


ಕೈಲಾಸದಿಂದ ಬಂದ ಗೌರಿಯೇ ಆದರೂ.. ತ್ರೇತಾಯುಗದ ಸೀತೆಯೇ ಆದರೂ ಹೆಣ್ಣು ಮಕ್ಕಳಿಗೆ ಸದಾ ಗೌರವ ಆದರಗಳು ಇದ್ದೆ ಇವೆ.. ನಮಸ್ಕಾರಗಳು ಪ್ರಭುಗಳೇ!


ನಾ ಹಾಡುವ ಹಾಡು ನಿಮ್ಮ ಸಾಮ್ರಾಜ್ಯದ ಏಳಿಗೆಗಾಗಿ.. ನನ್ನ ಭಕ್ತಿ ನಾಡಿನ ಸಾಧನೆಗಾಗಿ..  ವಿಠಲನ ದಯೆ ಇರಲಿ ಸದಾ ನಿಮ್ಮ ಮೇಲೆ ಎಂದು ಬೇಡಿಕೊಳ್ಳುವೆ ಪ್ರಭು ಎಂದರು ತುಕಾರಾಂ


ಮಹಾರಾಜರೇ.. ನೀವು ಹೀಗೆ ನನ್ನ ತರಹ ಯೋಚಿಸುವುದೇ ಬೇಡ... ನಾ ಸುಮ್ಮನೆ ನಂದಲಾರದ ದೀಪವನ್ನು ಹೇಗೆ ಬೆಳಗಿಸಬೇಕು ಎಂದು ಯೋಚಿಸುತ್ತಿರುವೆ ಅಷ್ಟೇ ..ಎಮ್ಮೆ ಕಾದರೂ ಸರಿಯೇ.. ಏನೇ ಆದರೂ ನಿಮ್ಮ ನಾಡಿನಲ್ಲಿ ಸತ್ಯಕ್ಕಿರುವ ಬೆಲೆ ಮಹಾರಾಜ ಹರಿಶ್ಚಂದ್ರನ ವರ್ಚಸ್ಸಿಗಿಂತಲೂ ಹೆಚ್ಚು...!

ರಾಘವೇಂದ್ರ ಸ್ವಾಮಿಗಳನ್ನು ಧರೆಗಿಳಿಸಿದ ಪುಣ್ಯ ಭೂಮಿಯಿದು.. ಶಿವನ ಇನ್ನೊಂದು ರೂಪವೇ ಇರುವ ಪುಣ್ಯ ನೆಲೆಯಿದು.. ಆ ನೆಲದಲ್ಲಿರುವ ನಾವೇ ಧನ್ಯ ಪ್ರಭುಗಳೇ


ಗೂಡಾಚಾರರೂ ಎಲ್ಲ ರಾಜ್ಯಗಳಿಗೂ ಬೇಕು.. ನಿಮ್ಮ ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಲು ನಾ ಸದಾ ಎಚ್ಚರದಿಂದ ಇರುವೆ.. ನಾ ಕರುನಾಡಿನ ಬಾಂಡ್ ಜೇಮ್ಸ್ ಬಾಂಡ್..


ನಮ್ಮ ಭಾಗ್ಯ.. ನಿಮ್ಮ ಬೆಳಗು.. ರಾಜರೆ.. ನಾಡಿನಲ್ಲೆಲ್ಲ ಈ ರಾಜ ಭಲೇ ರಾಜ ಎಂದು ಕೊಂಡಾಡುತ್ತಿದ್ದಾರೆ!!!


ನಿಮ್ಮ ಆಶೀರ್ವಾದದ ಫಲ.. ಬೆಂದಕಾಳೂರಿಗೆ ನಾಡ ಪ್ರಭುವಾಗಿದ್ದೇನೆ.. ನಿಮ್ಮನ್ನು ಭೇಟಿ ಮಾಡಲು ಬಂದೆ.. ಮಹಾರಾಜರೇ..


ಮನದ ಉಯ್ಯಾಲೆಗೆ ಕಡಿವಾಣ ಹಾಕಲು ಕೆಲವೊಮ್ಮೆ ಬುದ್ಧನ ಹಿಂದೆ ಹೋಗಬೇಕಾಗುತ್ತದೆ.. ಅವರ ತತ್ವಗಳನ್ನು ನಾಡಿನಲ್ಲಿ ಪ್ರಚಾರ ಮಾಡುತ್ತಿದ್ದೇವೆ.. ಜೊತೆಯಲ್ಲಿ ಬಾಳು ಬೆಳಗಿಸಲು ಬರುವ ಅಡ್ಡಿ ಆತಂಕಗಳನ್ನು ತೊಡೆದು ಹಾಕಲು ನಾವು ಬಂದಿರುವೆವು.,


ಒಬ್ಬರು ಇಬ್ಬರಾಗಿರಲಿ ಇಬ್ಬರು  ಒಬ್ಬರಾಗಿರಲಿ ಆದ್ರೆ ಅಭಿಮಾನ ಮಾತ್ರ ಸದಾ ಏಕ ಮುಖವಾಗಿರಲಿ ಕಾರಣ ನಮ್ಮೆಲ್ಲರದ್ದು ಭಲೇ ಜೋಡಿ.. ಅಲ್ಲವೇ ಮಿ. ರಾಜರೆ

ಮನೆತನದ ಗೌರವ.. ಕುಲದ ಗೌರವ ಕಾಪಾಡಲು ತಾತ ಮಗ ಮೊಮ್ಮಗ ಒಟ್ಟಿಗೆ ಬಂದಿದ್ದೇವೆ.. ಒಲವು ನಮ್ಮ ಬದುಕು.. ಒಲವೆ ಜೀವನ ಸಾಕ್ಶತ್ಕಾರ ಎನ್ನುವ ತತ್ವ ನಮ್ಮದು..


ನಮ್ಮನ್ನು ನಂಬಿರುವ ಜನತೆಗೆ ಉದಾರ ಮನಸ್ಸಿನಿಂದ ದಾನ ಮಾಡಬೇಕು ಸಾಕಬೇಕು ಸಲಹಬೇಕು ಎನ್ನುವ ಕಸ್ತೂರಿ ಸಂದೇಶ... ಭೂ ತಾಯಿಯನ್ನು ನಂಬಿದರೆ ಕೆಡುಕಿಲ್ಲ ಎನ್ನುವ ನೀತಿ ನಮ್ಮ ನಾಡಿನದು.. ಅದಕ್ಕೆ ನಮ್ಮ ನಾಡು ಬಂಗಾರದ ಕಸ್ತೂರಿ ನಿವಾಸ...


 ಹುಚ್ಚು ಮನಸ್ಸನ್ನು ಕಡಿವಾಣದಲ್ಲಿಡುವುದು ಹೇಗೆ ಅಂದರೆ ಹೀಗೆ.. ಅನ್ನುತ್ತಾರೆ ಕೆಲ ಭಲೇ ಹುಚ್ಚರು.. ಆದರೆ ಅದು ಕೆಲ ಕ್ಷಣಗಳು ಮನೋರಂಜನೆಗೆ ಮಾತ್ರ.. ಅದಕ್ಕಾಗಿ ನಾ ಬಂದಿರುವೆ..


ದೂರದ ಬೆಟ್ಟದಲ್ಲಿ ಗಂಧದಗುಡಿ ಇದೆ ಆದರೆ ಗಂಧದ ಘಮ ಘಮ ಎಲ್ಲ ಕಡೆಯೂ ಪಸರಿಸುತ್ತಿದೆ.. ಕನ್ನಡ ನಾಡು ಗಂಧದ ಬೀಡು.. ಅದರ ರಕ್ಷಣೆಗೆ ನಾ ಇರುವೆ..


ವಜ್ರಗಳ ಬಗ್ಗೆ ಕನಸ್ಸು ಕೆಲವೊಮ್ಮೆ ಮುದಕೊಡುತ್ತದೆ.. ಆದರೆ ನಮ್ಮ ನಾಡಿನಲ್ಲಿ ಕಲಾವಿದರೇ ವಜ್ರಗಳು.. ಮುತ್ತು ರತ್ನ ಸೇರಿನಲ್ಲಿ ಅಳೆಯುತ್ತಿದ್ದ ನಾಡು ನಮ್ಮದು.. ಇನ್ನು ಮೂರುವರೆ ವಜ್ರಗಳು ಎರಡು ಕನಸೊಂತು ಅಲ್ಲವೇ ಅಲ್ಲ ಪ್ರಭುಗಳೇ..


 ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡುವ ಕಾಯಕ ಹೊಂದಿರುವ ನಾನು, ಪ್ರತಿ ಜೀವಿಯಲ್ಲೂ ಪಾಂಡುರಂಗನನ್ನು ಕಾಣುತ್ತೇನೆ.. ಆ ಪಾಂಡುರಂಗನ ಒಲುಮೆ ನಿಮ್ಮ ರಾಜ್ಯಕ್ಕೆ ಸದಾ ಇರಲಿ ಎಂದು ಕೈಯೆತ್ತಿ ಆ ದೇವನಲ್ಲಿ ಪ್ರಾರ್ಥಿಸುತ್ತಿದ್ದೇನೆ..


ನಾಡಿನ ಭಾಷೆ ಗಡಿ ರಕ್ಷಣೆಯ ವಿರುದ್ಧ ನಿಲ್ಲುವವರಿಗೆ ನನ್ನ ಸವಾಲ್.. ಭದ್ರವಾಗಿ ನಾ ನಿಲ್ಲುವೆ ನಿಮ್ಮ ಜೊತೆ ಅಣ್ಣಾ!!!


ಪಂಜರ ಹೇಗಾದರೂ ಇರಲಿ.. ಪ್ರಜೆಗಳ ಮುದ್ದಾದ ಮುಗ್ಧತನ... ಅವರು ಇರುವ ಕಡೆಯಲ್ಲಿಯೇ ಬಂಗಾರ ಬೆಳೆವ ಅವರ ಮನಸ್ಸಿಗೆ ನನ್ನ ಒಂದು ಶಿಳ್ಳೆ!!!


ಪಕ್ಕದ ಊರಿನಲ್ಲಿ ತಿಮ್ಮಪ್ಪನ ನೋಡಲು ಹೋಗಬೇಕಿತ್ತು.. ಆದ್ರೆ ನಿಮ್ಮ ರಾಜ್ಯದಲ್ಲಿ ಆ ಶ್ರೀನಿವಾಸನನ್ನು  ಕಂಡದ್ದು ಖುಷಿಯಾಯಿತು.. ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀನೊಲಿದ ಮನೆ ಮನೆಯು ಲಕ್ಷ್ಮಿನಿವಾಸ.. !ಕರುನಾಡ ಸಿಂಹಾಸನಧೀಶ್ವರ.. ನಿಮಗೆ ಬಲಗೈಯಾಗಿ  ನಾ ಇರುವೆ.. ಕನ್ನಡದ ಪತಾಕೆ ಮುಗಿಲೆತ್ತರಕ್ಕೆ ಏರಲಿ.. !ದಾರಿ ತಪ್ಪಿದ ಎಷ್ಟೋ ಜನರನ್ನು ನಿಮ್ಮ ರಾಜ್ಯಭಾರದಲ್ಲಿ ದಾರಿಗೆ ತಂದಿದ್ದೀರ .. ಅದಕ್ಕೆ ಧನ್ಯತಾ ಭಾವ ಸೂಸಲು ತ್ರಿಮೂರ್ತಿಯಾಗಿ ನಾವೆಲ್ಲಾ ಬಂದಿದ್ದೇವೆ..


ಅಣ್ಣಾ ನಿಮ್ಮನ್ನು ನಾವು ಮರೆಯಲಾರೆವು... ಬಹದ್ದೂರ್ ಗಂಡು ಮೆಟ್ಟಿದ ಈ  ನೆಲದಲ್ಲಿ ನಿಮ್ಮನ್ನು  ಅಭಿನಂದಿಸಲು ಬಂದಿದ್ದೇವೆ.. ಮೋಟಾರ್ ಬೈಕ್ ನಲ್ಲಿ


ಪ್ರತಿ ಶುಭ ಸಮಾರಂಭಕ್ಕೆ.. ಬೆಳಗಿನ ಪೂಜೆಗೆ ಸನಾಧಿ ನಾದ ಬೇಕೇ ಬೇಕು.. ಹಾಗೆಯೇ ಗಾನ ಸುಧೆ ಕೂಡ.. ನಿಮ್ಮ ಗಾನ ಸಭೆಗೆ ನಾವಿಬ್ಬರು ಜೊತೆಯಲ್ಲಿ ಜುಗಲ್  ಬಂಧಿ... 


ಕರಾವಳಿಯಿಂದ ಬಿಸಿಲಿಂದ ಮಡಿಕೇರಿಯ ತಂಪಿನ ತನಕ ನಿಮ್ಮ ಎಲ್ಲಾ ಪ್ರಜೆಗಳು ಕ್ಷೇಮವಾಗಿದ್ದಾರೆ..ಅದನ್ನು ತಿಳಿಸಲು ನಾವಿಬ್ಬರು ಹೀಗೆಯೇ ಬಂದಿದ್ದೇವೆ


ಕನ್ನಡ ಕಂಪನ್ನು.. ಇಂಗ್ಲಿಷ್ ಪದಗಳ ಜೊತೆಯಲ್ಲಿ ಹಾಡಿ.. ಎಲ್ಲರನ್ನೂ ರಂಜಿಸಲು ನಾ ಇರುವೆ.. ಬರುವೆ.. ಹಾಡುವೆ..


ಕರುನಾಡು ಹೊಸಬಬೆಳಕಲ್ಲಿ ಸದಾ ಬೀಗುತ್ತಿರಬೇಕು,.. ಬೆಳಗುತ್ತಿರಬೇಕು.. ನನ್ನ ಹಾಡು ಆ ಹೊಸಬೆಳಕಿಗಾಗಿ !!!


ಯೋಗ ದೇಹಕ್ಕೆ ಎಷ್ಟು ಮುಖ್ಯವೋ ಹಾಗೆಯೇ ಛಲ ಕೂಡ ಮನಸ್ಸಿಗೆ ಮುಖ್ಯ.. ಅಂದುಕೊಂಡಿದ್ದನ್ನು ಸಾಧಿಸಬೇಕು.. ಸಾಧಿಸಿದ್ದನ್ನು ಹಂಚಿಕೊಳ್ಳಬೇಕು.. ಅದುವೇ ಜೀವನ.. ಕಾಮನಬಿಲ್ಲಿನ ಈ ಸಂದೇಶ ಪ್ರಜೆಗಳಿಗೆ ಸದಾ ನೀಡುತ್ತಿದ್ದೇವೆ..


ನಮ್ಮ ದೇಶದ ಮುತ್ತು  ಕಾಳಿದಾಸ..ಅವರು ಬರೆದ ಪ್ರತಿ ಕಾವ್ಯವು ಒಂದು ಮುತ್ತಿನ ಕಥೆ.. ನಾ ಸಾಗರದ ಆಳದಿಂದ ಮುತ್ತನ್ನು ತಂದರೆ ಇವರು ಅಕ್ಷರಗಳ ಒಡಲಲ್ಲಿರುವ ಮುತ್ತನ್ನು ಹೊರತರುತ್ತಾರೆ..ದೇವರಿರುವ ಪ್ರತಿ ತಾಣದಲ್ಲೂ ಮನುಷ್ಯಇರುತ್ತಾನೆ .. ಮನುಷ್ಯ ಇರುವ ಪ್ರತಿ ಕ್ಷಣದಲ್ಲೂ ದೇವರು ಇರುತ್ತಾನೆ ಎನ್ನುವ ಮಾತು ನನ್ನದು.. ಅಲ್ಲವೇ ಅಣ್ಣಾ..ಹಾಡುತ್ತಾ ಹಾಡುತ್ತಾ ಹಿಮಗಿರಿಯಿಂದ ನಾದ ಗಂಗೆಯನ್ನು ಇಳಿಸುವ ಈ ಗಾಯನದಿಂದ ನಿಮ್ಮ ಮನಸ್ಸನ್ನು ತಣಿಸಲು ನಾ ಬಂದಿರುವೆ..

ನೀವು ಹುಟ್ಟಿದ್ದು ಕರುನಾಡಿನಲ್ಲಿ.. ನಾ ಹುಟ್ಟಿದ್ದು ಕರುನಾಡಿನಲ್ಲಿ.. ಮೆಟ್ಟಿದ್ದು ಕರುನಾಡಿನಲ್ಲಿ.. ಅಣ್ಣಾ ನಿಮಗೆ ಜೈ ಜೈ ಜೈ..


ಕನ್ನಡ ಪದಗಳು ಶಬ್ಧವೇದಿ ಇದ್ದ ಹಾಗೆ.. ಅದು ಹೇಳಬೇಕಾದ್ದು ಹೇಳುತ್ತದೆ.. ಹೇಳಿದಂತೆ ಬರೆಯುತ್ತದೆ.. ಅದು ಈ ಭಾಷೆಯ ತಾಕತ್.. ಅಣ್ಣಾ ನಿಮ್ಮನ್ನು ನೋಡಲು ಜೀಪಲ್ಲಿ ಬಂದಿರುವೆ..***********

"ಅಣ್ಣ ಹೇಗಿದೆ..?" 

ಕಾಂತಾ..ನಾ ಏನೂ ಹೇಳೋಲ್ಲ.. ನೀ ಬರೆದಿದ್ದನ್ನು ಹೇಳಲು.. ಅದರ ಬಗ್ಗೆ ಪ್ರತಿಕ್ರಿಯೆ ಕೊಡಲು ನನ್ನ ಅಭಿಮಾನಿ ದೇವರುಗಳು ಇದ್ದಾರೆ ... ನಿನ್ನ ಓದುಗರಿದ್ದಾರೆ.. ಅವರ ಮಾತುಗಳನ್ನು ನಾ ಹೀಗೆ ಕುಳಿತು ಕೇಳುತ್ತಿರುತ್ತೇನೆ ನೋಡುತ್ತಿರುತ್ತೇನೆ... ನೋಡು ಹೀಗೆ ಇಲ್ಲಿಯೇ ಕುಳಿತಿರುವೆ.. ಅಣ್ಣಾವ್ರ ಇನ್ನೊಂದು ಜನುಮ ದಿನ.. ಇನ್ನೊಂದು ವರ್ಷ ಅವರ ಚಲನ ಚಿತ್ರಗಳಿಂದ ಕಲಿತ ಪಾಠ ನೀತಿ ಸಂಯಮಗಳನ್ನು ಅಳವಡಿಸಿಕೊಳ್ಳಲು ಮತ್ತೊಂದು ದಿನ... ಮತ್ತೊಂದು ವರ್ಷ..!!!!

ಅಣ್ಣಾವ್ರೆ ನೀವು..... ಕರುನಾಡಿನ ಮಹಾರಾಜರೇ ಸರಿ.. ಜನುಮದಿನದ ಶುಭಾಶಯಗಳು.... !

17 comments:

 1. ಡಾ. ರಾಜ್ ಎಂದರೆ ಅದು ಕಿರು ವಿಶ್ವವಿದ್ಯಾಲಯ, ಅವರ ಜನುಮ ದಿನಕ್ಕೆ ತಾವು ಅವರ ಚಿತ್ರಗಳ ಪಾತ್ರಗಳನ್ನು ಮುತ್ತು ಪೋಣಿಸಿದಂತೆ ಪೋಣಿಸಿಕೊಟ್ಟಿದಗದೀರ.

  ಮೇರು ನಟನಿಗೆ ಅಮೋಘ ಜನುಮದಿನದ ಶುಭಾಶಯದ ಬ್ಲಾಗ್ ಬರಹ.

  ReplyDelete
  Replies
  1. ಧನ್ಯವಾದಗಳು ಬದರಿ ಸರ್.. ರಾಜ್ ಚಿತ್ರ, ಹಾಡುಗಳು, ಸಂಭಾಷಣೆ ಮರ್ಯಾದೆ ಮೀರಿದ್ದೆ ಇಲ್ಲಾ.. ಪ್ರತಿಯೊಂದು ಪಾತ್ರಗಳು ಚಿತ್ರಗಳು ಸಮಾಜಮುಖಿಯಾಗಿದ್ದವು..

   ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

   Delete
 2. ಯಾವುದೇ ಚಿತ್ರದಲ್ಲಿ ರಾಜ್ ಅವರ ನಟನೆ ನೋಡಿದರೆ, ಈ ಪಾತ್ರ ಅವರಿಗಾಗೇ ರಚಿಸಿರುವಂತಿರುತ್ತದೆ. ಬೇರೆ ಯಾರು ಆ ಪಾತ್ರ ಮಾಡಲಾರರು ಎನ್ನುವ ಹಾಗೆ ನಟಿಸುತ್ತಿದ್ದರೂ.
  ಹಾಗೆ ಅವರ ಜನ್ಮದಿನಕ್ಕೆ ನೀವು ಮಾತ್ರ ಇಂಥ ಶುಭಾಶಯ ಕೋರಲು ಸಾಧ್ಯ. ಇದರೊಂದಿಗೆ ನನ್ನದೂ ಒಂದು ಜನ್ಮದಿನದ ಶುಭಾಶಯ ಕನ್ನಡ ಚಿತ್ರರಂಗ ಸಾಮ್ರಾಜ್ಯದ ರಾಜಕುಮಾರರಿಗೆ :)

  ReplyDelete
  Replies
  1. ನನಗೂ ಅನೇಕ ಬಾರಿ ಅನ್ನಿಸುತ್ತದೆ.. ಈ ಪಾತ್ರ ರಾಜ್ ಬಿಟ್ಟರೆ ಬೇರೆ ಯಾರೂ ಅಂತ.. ಅದಕ್ಕೆ ಉತ್ತರ ಇರೋದಿಲ್ಲ.. ಅದಕ್ಕಿಂತ ಹೆಚ್ಚಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ.. ದೇವರನ್ನು ನೋಡದ ನಮಗೆ ಅವರೇ ಕಣ್ಣಿಗೆ ಕಾಣುವ ಎಲ್ಲಾ ದೇವರ ಪಾತ್ರಗಳಾಗಿದ್ದಾರೆ. ಐತಿಹಾಸಿಕ ರಾಜ ಮಹಾರಾಜರ ದರುಶನ ಭಾಗ್ಯ ಪಡೆದ ನಾವೇ ಧನ್ಯರು..

   ಸುಂದರ ಪ್ರತಿಕ್ರಿಯೆಗೆ ಕೋಟಿ ನಮನಗಳು ನಿವಿ

   Delete
 3. ಶ್ರೀ ನಿಜಕ್ಕೂ ಸಂಗ್ರಹಯೋಗ್ಯ ಲೇಖನ. ಗೊತ್ತಿಲ್ಲದ ಎಷ್ಟೋ ವಿಷಯಗಳ ಇಲ್ಲಿ ಮುತ್ತು ರತ್ನ, ಹವಳಗಳಾಗಿಸಿದ್ದೀರಿ.

  ReplyDelete
  Replies
  1. ಚೆನ್ನ ಬಸವರಾಜ್ ಸರ್ ನಿಮ್ಮ ಅಭಿಮಾನ ಪೂರಿತ ಮಾತುಗಳಿಗೆ ನಾ ಧನ್ಯ.. ಎಲ್ಲರಿಗೂ ಗೊತ್ತಿರುವ ವಿಷಯವೇ ಅಣ್ಣಾವ್ರ ಬಗ್ಗೆ ಇದೆ.. ನನ್ನ ಹೃದಯಕ್ಕೆ ತಾಕಿದ ಮಾತುಗಳನ್ನು ಬರೆದಿದ್ದೇನೆ. ಅದು ನಿಮಗೆ ಇಷ್ಟವಾಗಿದೆ ಎಂದರೆ ನನಗೆ ಸಂತಸ..

   ಧನ್ಯವಾದಗಳು

   Delete
 4. ಎವರ್ ಗ್ರೀನ್ ರಾಜ್ ಕುಮಾರ್ ಅವರ ಬಗ್ಗೆ ಸೂಪರ್ ಆಗಿರೋ ಲೇಖನ..
  ಫೋಟೋಗಳು ಮತ್ತದಕ್ಕೆ ಸರಿಯಾದ ಕ್ಯಾಪ್ಶನ್..
  ಇಷ್ಟವಾಯಿತು..

  ರಾಜ್ ಅಭಿಮಾನದ ಹೊಳೆ ಸದಾ ಹೀಗೆ ತುಂಬಿ ಹರಿಯುತ್ತಿರಲಿ.
  ಹುಟ್ಟು ಹಬ್ಬದ ಶುಭಾಶಯಗಳು ಅಣ್ಣಾವ್ರಿಗೆ..

  ReplyDelete
  Replies
  1. ಇಂಗದ ಬತ್ತಳಿಕೆ ಅಣ್ಣಾವ್ರ ವಿಚಾರಗಳು. ಮೊಗೆದಷ್ಟು ಬರುತ್ತವೆ.. ಅದಕ್ಕೆ ಕೊನೆಯೇ ಇಲ್ಲ.. ನಿನ್ನ ಪ್ರತಿಕ್ರಿಯೆ ಮನಸ್ಸಿಗೆ ಮುದ ನೀಡಿತು.. ಧನ್ಯವಾದಗಳು..

   Delete
 5. ನಿಜಕ್ಕೂ ಸಂಗ್ರಹಯೋಗ್ಯ ಲೇಖನ. ಅಮೋಘ ಬರಹ --roopa

  ReplyDelete
  Replies
  1. ಧನ್ಯವಾದಗಳು ರೂಪ.. ಅಣ್ಣಾವ್ರ ಬಗೆ ಹೇಳುವಾಗೆಲ್ಲ ಮನಸ್ಸಿಗೆ ಒಂದು ರೀತಿಯ ಶಕ್ತಿ ಬರುತ್ತದೆ.. ಹಾಗೆ ಬರಹವಾಗಿ ಬಿಡುತ್ತದೆ.. ಪ್ರತಿಕ್ರಿಯೆಗೆ ಓದಿದ್ದಕ್ಕೆ ಧನ್ಯವಾದಗಳು

   Delete
 6. ಶ್ರೀಕಾಂತ್ ಜಿ ಮತ್ತೊಮ್ಮೆ ಸಿಕ್ಸರ್ ಭಾರಿಸಿ ಬಿಟ್ಟಿರಿ , ಕನ್ನಡದ ಅದ್ಭುತ ನಟ ರಾಜ್ ಕುಮಾರ ಬದುಕಿದ್ದು ನಿಮ್ಮ ಲೇಖನ ಓದಿದ್ದರೆ ಬಹುಸಹ ನಿಮ್ಮನ್ನು ಕಾಣಲು ಓಡಿ ಬರುತ್ತಿದ್ದರು. ವಾಹ್ ವಾಹ , ರಾಜಕುಮಾರ ನಟಿಸಿದ ಚಿತ್ರಗಳ ಸ್ಟಿಲ್ಸ್ ಇಟ್ಟುಕೊಂಡು ಅದಕ್ಕೆ ನಿಮ್ಮದೇ ಟ್ರಂಪ್ ಕಾರ್ಡ್ ಒತ್ತಿ ಒಂದು ಅದ್ಭುತ ಲೇಖನ ಬರೆದಿದ್ದೀರಿ . ಓದುತ್ತಾ ಓದುತ್ತಾ ರೋಮಾಂಚನ ಆಯಿತು. ಮತ್ತೊಮ್ಮೆ ರಾಜ್ಕುಮಾರ್ ಕನ್ನಡ ಚಿತ್ರಗಳ ಬಗ್ಗೆ ಒಂದು ಮೆಲುಕು ನೋಟ ಸಿಕ್ಕಿತು. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು . ಕನ್ನಡ ತಾಯಿಯ ಮಡಿಲ ಒಂದು ಅನರ್ಘ್ಯ ರತ್ನ ನಟ ರಾಜಕುಮಾರ್ ಅವರಿಗೆ ಇದಕ್ಕಿಂತಾ ಒಳ್ಳೆಯ ನೆನಪಿನ ಕಾಣಿಕೆ ಬಹುಷಃ ಇರಲಾರದು . ಕನ್ನಡಿಗರೇ ಒಮ್ಮೆ ನಮ್ಮ ಶ್ರೀಕಾಂತ್ ಕೆ ಜೈ ಎಂದುಬಿಡೀ .

  ReplyDelete
  Replies
  1. ಬಾಲೂ ಸರ್ ನಿಮ್ಮ ಅಭಿಮಾನಕ್ಕೆ ಮತ್ತು ಸ್ಪೂರ್ತಿದಾಯಕ ಪ್ರತಿಕ್ರಿಯೆ ಮತ್ತು ಬೆನ್ನು ತಟ್ಟುವಿಕೆಗೆ ಶಿರಬಾಗಿ ನಮಿಸುವೆ.. ಕರುನಾಡಿನ ಚಿತ್ರಗಳನ್ನು ಇಂದಿಗೂ ನೋಡುವಂತೆ ಮಾಡುವಲ್ಲಿ ಅಣ್ಣಾವ್ರ ಚಿತ್ರಗಳ ಕಾಣಿಕೆ ತುಂಬಾ ತುಂಬಾ ಇದೆ.. ಪ್ರತಿಚಿತ್ರವೂ ಒಂದು ಭಿನ್ನ ಅನುಭವ ಕೊಡುವ ಮಾಲಿಕೆ,...

   ಧನ್ಯೋಸ್ಮಿ ಬಾಲೂ ಸರ್.. ನಿಮ್ಮ ಪ್ರತಿಕ್ರಿಯೆ ಓದಿ ನಾ... ಮೂಕನಾದೆ

   Delete
 7. ಅಜ್ಜಿ ನಂತರ ಅಮ್ಮ ಅಣ್ಣ ನಂತರ ನಾನು ತಂಗಿ ನಂತರ ತಮ್ಮ
  ಅದರಲ್ಲೂ ಅಮ್ಮ ಮತ್ತು ತಮ್ಮನಂತೂ ರಾಜ್ ಕುಮಾರ್ ವೀರಾಭಿಮಾನಿಗಳು.
  ಪೀಳಿಗೆ ಪೀಳಿಗೆಯಿಂದ ಪೀಳಿಗೆಗೆ ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ಅಪರೂಪದ ನಟನಿಗೆ , ಮಾನವತಾ ಮೂರ್ತಿಗೆ ನಿಮ್ಮ ಪದ ಹಾರೈಕೆ ಚೆನ್ನಾಗಿದೆ ಭಾಯ್

  ReplyDelete
  Replies
  1. ಪೀಳಿಗೆಯಿಂದ ಪೀಳಿಗೆಗೆ ತನ್ನ ಇರುವನ್ನು ತೋರಿಸುವುದು ತುಂಬಾ ಕಷ್ಟದ ಕೆಲಸ.. ಭಿನ್ನ ಭಿನ್ನ ಸಂಸ್ಕೃತಿಯ ಬದಲಾಗುವ ಕಾಲ ಘಟ್ಟದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದು ಅಣ್ಣಾವ್ರ ವಿಶೇಷತೆ.. ಇವರು ಎಲ್ಲ ತಲೆಮಾರಿಗೂ ಸಲ್ಲುವ ಕಲಾವಿದ..

   ಸುಂದರ ಪ್ರತಿಕ್ರಿಯೆ ಮತ್ತು ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ನಾ ತಲೆ ಬಾಗುವೆ ಸಹೋದರಿ

   Delete
 8. sir ee nimma blog post itself is a monument.. I downloded all photos & saved ur article.... liked it a lot.. Thank you :)

  ReplyDelete
  Replies
  1. ಧನ್ಯವಾದಗಳು ಪ್ರದೀಪ್ ಸುಂದರ ಅಭಿಪ್ರಾಯ ನಿಮ್ಮದು.. ಅಣ್ಣಾವ್ರು ಕರುನಾಡಿನ ಆಸ್ತಿ..

   Delete
 9. waaah !!! yestondu visteerana paatra parichaya !!! adhbhuta baravaNige ! hats off sri !!

  ReplyDelete