Monday, April 11, 2011

ಅಣ್ಣಾವರ ಇನ್ನೊಂದು ಪುಣ್ಯ ದಿನ ಬಂದಿದೆ (2011)

ಅಣ್ಣಾವರ ಇನ್ನೊಂದು ಪುಣ್ಯ ದಿನ ಬಂದಿದೆ..
ಯಥಾ ಪ್ರಕಾರ ಅಣ್ಣಾವ್ರಿಗೆ ಜೈ, ಅಣ್ಣಾ ಇನ್ನೊಮ್ಮೆ ಹುಟ್ಟಿಬಾ ಅಂತೆಲ್ಲ ಹೇಳೋಕೆ ಹೊರಟಿಲ್ಲ..
ಅಣ್ಣಾವರ ಜೀವನ ಹಾದಿ, ಕಲೆತ ಹಾದಿ, ಬೆರೆತ ಮೌಲ್ಯಗಳು, ಬಿರಿದ ಭಾವನೆಗಳು ಇದನ್ನ ಸ್ವಲ್ಪ ಮಟ್ಟಿಗೆ ಪಾಲಿಸೋಣ ಅನ್ನುವ ಒಂದು ಅನಿಸಿಕೆ ಹಾಗೂ ಬಯಕೆಯಿಂದ ಉದಯಿಸಿದ ಒಂದು ಬರವಣಿಗೆ. ನನ್ನ ನೆನಪಿನಲ್ಲಿ ಉಳಿದು ಹೋದ ಕೆಲವು ಬಂಗಾರದ ನೆನಪುಗಳನ್ನ ಹೆಕ್ಕಿ ತೆಗೆಯುವ ಒಂದು ಸಣ್ಣ ಪ್ರಯತ್ನ

ಬಂಗಾರದ ಮನುಷ್ಯ
"ತಾಯಿ, ಒಂದು ಮುರಿದ ಸಂಸಾರವನ್ನ ಎತ್ತಿ ಹಿಡಿಯೋಕೆ ನಿನ್ನ ಬಳಿ ಬಂದಿದ್ದೀನಿ, ಈ ಅಜ್ಞಾನಿ ತಪ್ಪು ಮಾಡಿದರು..ನೀನು ಮುನಿಸಿಕೊಳ್ಳದೆ ಕಾಪಾಡಬೇಕು".

ಕವಿರತ್ನ ಕಾಳಿದಾಸ
"ಸ್ನಾನ ಗೀನ ದೇಹಕಲ್ಲ ಕಂದ ಮನಸಿಗೆ"

ಸಮಯದ ಗೊಂಬೆ
"ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ"

ಕಾಮನಬಿಲ್ಲು
ನನಗೆ ತುತ್ತು ಅನ್ನ ನೀಡ್ತಿದ್ದ ನನ್ನ ತಾಯಿ ಕಣ್ಣು ನೋಡ್ತಾ ಇದ್ದನೇ ಹೊರತು ಅವಳ ಹರಕು ಸೀರೆ ಸೆರಗು ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ

ಹೊಸ ಬೆಳಕು
ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು, ನಾನು ಹಾಗೆ ಮಾಡದಿದ್ದರೆ, ನಿನಗೆ ಹರಕು ಬಟ್ಟೆ ಒಗೆಯುವುದು ತಪ್ಪುತಿರಲ್ಲಿಲ್ಲ, ನಿನಗೆ ಇಷ್ಟ ಬಂದ ಹಾಗೆ ಕಾಲೇಜ್ ಗೆ ಹೋಗೋಕೆ ಆಗ್ತಾ ಇರ್ಲಿಲ್ಲ, ನಿನ್ನ ಅಪ್ಪನಿಗೆ ಇದು ಅರ್ಥ ಆಗ್ಲಿಲ್ಲ, ನಿನಗೆ ಹೇಗೆ ಅರ್ಥ ಆಗ್ಬೇಕು


ಸಂಧ್ಯಾರಾಗ
ದಯಾ ತೋರು ಗುರುವೇ ...ಗುರು ನಡೆಯೋಕೆ ಆಗದೆ ಮಲಗಿದ್ದಾಗ, ಅಣ್ಣಾವರ ಹಾಡು ಕೇಳಿ ಬಾಗಿಲತನಕ ಬರುತ್ತಾರೆ, ಆಗ ಗುರು ಪತ್ನಿ, ಅಣ್ಣಾವರಿಗೆ ಹಾಡು ಹಾಡು ಅಂತ ಹೇಳುತ್ತಾರೆ, ಆಗ
ಅಣ್ಣಾವರ ಅಭಿನಯ ನೋಡೋಕೆ ಕಣ್ಣು saaladu

ಗಾಂಧಿನಗರ
ತಾಯಿ ಊಟ ಕೊಡಿ ಅಂತ ವಟಾರ ಎಲ್ಲ ಸುತ್ತು ಹೊಡೆದಾಗ ಎಲ್ಲರು ಬಾಗಿಲು ಹಾಕಿ ಕೊಳ್ಳುತ್ತಾರೆ...ಅಣ್ಣಾವರ ಅಸಹಾಯಕತೆ, ಹೊಟ್ಟೆ ಹಸಿವು, ನಿರಪರಾಧಿಯಾಗಿದ್ದರು ಶಿಕ್ಷೆ...ಅಣ್ಣಾವರಿಗೆ ಅವರೇ ಸಾಟಿ

ಜೀವನಚೈತ್ರ
ನಾದಮಯ ಹಾಡಿಗೆ ಅದ್ಭುತ ಅಭಿನಯ, ಗಾಯನ

ಒಂದು ಮುತ್ತಿನ ಕಥೆ
ಮುತ್ತು ಬೇಕ ಮುತ್ತು...ನಿಮ್ಮ ಮನೆ ಹಾಳಾಗ, ಬೆಂಕಿ ಬಿದ್ದು ಮಗು ಏನಾಗಿದೆ ಅಂತ ಕೇಳೋದು ಬಿಟ್ಟು ಮುತ್ತು, ಮುತ್ತು ಅಂತ ಹೇಳ್ತಿರ...ಹಾಳಾಗಿ ಹೋಗಿ

ಸನಾದಿ ಅಪ್ಪಣ್ಣ
ನನ್ನ ಸಂಗೀತ ಇರೋದು, ದೇವರ ಪೂಜೆಗೆ...ನಿಮ್ಮಂಥವರ ಕುಣಿತಕ್ಕೆ ಅಲ್ಲ

ಮೇಯೆರ್ ಮುತ್ತಣ್ಣ
ನಮ್ಮ ದೇಶದಲ್ಲಿ ಇರುವ ಕಲೆ ಪ್ರದರ್ಶನ ಮಾಡೋದು ಬಿಟ್ಟು, ನಮ್ಮ ದೇಶದ ದರಿದ್ರಕ್ಕೆ ಬಣ್ಣ ಹಾಕಿ, ವಿದೇಶದವರಿಗೆ ತೋರಿಸೋದು ಯಾವ ಸೀಮೆ ಶೋಕಿ ಅಮ್ಮಣ್ಣಿ, ನಮ್ಮಪ್ಪ ಬೇಲೂರ, ಹಳೇಬೀಡು ನಲ್ಲಿ ಕೆತ್ತಿರುವ ಶಿಲ್ಪಿ ಕಲೆ ನಾವು ಕಾಗದದಲ್ಲಿ ಬರೆಯೋಕೆ ಆಗುತ್ತ..ಇದು ನಮ್ಮ ದೇಶ, ಇದು ನಮ್ಮ ಬಾಷೆ ಅಂತ ಎದೆ ತಟ್ಟಿ ಹೇಳುವ ತರಹ ಮಾಡಬೇಕು ಅಮ್ಮಣ್ಣಿ

ಕೆರಳಿದ ಸಿಂಹ
ಶತಕೋಟಿ ದೇವರು ಹರಸಿದರೇನು...ಅಮ್ಮನ ಹರಕೆಗೆ ಸರಿ ಸಾಟಿ ಏನು

ಗಂದದ ಗುಡಿ
ಗಂದದ ಗುಡಿ ಇದು ನಮ್ಮೂರು, ಚೆಂದದ ಗುಡಿ ಇದು ನಮ್ಮೂರು ಅಂತ ಹೇಳಿಕೊಂಡು ಬೆಳದಿರೋನು ಸಾರ್ ನಾನು..ದಯವಿಟ್ಟು ನನಗೆ ಅವಕಾಶ ಕೊಡಿ

ರಣಧೀರ ಕಂಟೀರವ
ಒಂದು ಸಿಂಹವನ್ನ ಹಿಡಿಯಲು ನೂರು ಕುರಿಗಳು

ಮೇಲೆ ಕಂಡ ತುಣುಕುಗಳು ಬರಿ ದಂಡೆಯಲ್ಲಿ ಸಿಕ್ಕ ಮುತ್ತುಗಳು, ರಾಜಣ್ಣ ಎನ್ನುವ ಸಮುದ್ರದಾಳಕ್ಕೆ ಹೋದರೆ ಸಿಗುವ ಮುತ್ತುಗಳು ಅನರ್ಘ್ಯ....

ಪ್ರಪಂಚಕ್ಕೆ ಒಬ್ಬರೇ ರಾಜ ಅದುವೇ ನಮ್ಮ ರಾಜಣ್ಣ2 comments:

  1. Waaw, Mast situations...... Great share of info

    ReplyDelete
  2. mathastu chitra gala sangra nimmali idre please upto date madi nanage information kodi narayanadesign@gmail.com nanna mail id nimage idu istavilla andre bidippa.......... navu irode hegi kannadigaru...........

    ReplyDelete