Tuesday, April 12, 2022

ಅಣ್ಣಾವ್ರು .. ಹಾಡುಗಳ ಜುಗಲ್ ಬಂದಿ ... ಪುಣ್ಯ ದಿನ - 2022


ಶ್ರೀ 
"ವಿಧಿಯಾಟವೇನೆಂದು ಬಲ್ಲವರು  
ಯಾರು ಮುಂದೇನು ಎಂದು ಹೇಳುವರು ಯಾರು.. 
ಬರುವುದು ಬರಲೆಂದು 
ನಸುನಗುತ್ತಾ ಬಾಳದೆ 
ನಿರಾಸೆ ವಿಷಾದ ಇದೇಕೆ ಇದೇಕೆ"  (ಹೊಸಬೆಳಕು.. ಕಣ್ಣೆರ ಧಾರೆ ಇದೇಕೆ)

ಅಣ್ಣಾವ್ರು 
"ನಗುನಗುತಾ ನಲಿ ನಲಿ ಏನೇ ಆಗಲಿ 
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ 
ಅದರಿಂದ ನೀ ಕಲಿ" (ಬಂಗಾರದ ಮನುಷ್ಯ .. ನಗು ನಗುತಾ ನಲಿ)

ಶ್ರೀ 
"ಏನೆಂದು ನಾ ಹೇಳಲಿ 
ಮಾನವನಾಸೆಗೆ ಕೊನೆಯೆಲ್ಲಿ 
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ 
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ 
ಯಾರನ್ನೂ ಪ್ರೀತಿಸನು ಮನದಲ್ಲಿ 
ಏನೊಂದು ಬಾಳಿಸನು ಜಗದಲ್ಲಿ " (ಗಿರಿ ಕನ್ಯೆ .. ಏನೆಂದು ನಾ ಹೇಳಲಿ)

ಅಣ್ಣಾವ್ರು 
"ಬದುಕು ಒಂದು ಹೂವಿನ ಹಾಗೆ 
ನಗುವೇ ಆ ಸುಮದ ಪರಿಮಳವು" (ಅದೇ ಕಣ್ಣು .. ನಿನ್ನೀ ನಗುವೇ ಅರುಣೋದಯವೂ ಈ ಮನೆಗೆ)

ಶ್ರೀ 
"ಈ ದೇಹದಿಂದ ದೂರನಾದೆ ಏಕೆ ಆತ್ಮನೇ 
ಈ ಸಾವು ನ್ಯಾಯವೇ.. 
ಆಧಾರ ನೀನೆಂದು ಈ ಲೋಕ ನಂಬಿದೆ 
ಈ ದೇಹದಿಂದ ದೂರನಾದೆ ಏಕೆ ಆತ್ಮನೇ" (ಓಹಿಲೇಶ್ವರ.. ಈ ದೇಹದಿಂದ ದೂರನಾದೆ)

ಅಣ್ಣಾವ್ರು 
"ಯಾರೇ ಕೂಗಾಡಲಿ 
ಊರೇ ಹೋರಾಡಲಿ 
ನಿನ್ನ ನೆಮ್ಮದಿ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ ಬಿಸಿಲು ಮಳೆಗೆ ಚಳಿಗೆ ಬಿಸಿಲಿಗೆ 
ಹೆದರದೆ ಮುಂದೆ ಸಾಗು ನೀ ಅರೆ ಹುಯ್ ಅರೆ ಹುಯ್ ಟುರ್ರ್ರಾ ಆ ಆ ಆ" (ಸಂಪತ್ತಿಗೆ ಸವಾಲ್.. ಯಾರೇ ಕೂಗಾಡಲಿ)

ಶ್ರೀ 
"ನಗುವುದೋ ಅಳುವುದೋ ನೀವೇ ಹೇಳಿ 
ಇರುವುದೋ ಬಿಡುವುದು ಈ ಊರಿನಲ್ಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ 
ಅಳುವುದೋ ನಗುವುದೋ ಈಗ ಏನು ಮಾಡಲಿ" (ಸಂಪತ್ತಿಗೆ ಸವಾಲ್ .. ನಗುವುದೋ ಅಳುವುದೋ)

ಅಣ್ಣಾವ್ರು 
"ಹಿಂದಿನ ಸಾಲ ತೀರಿಸಲೆಂದು 
ಬಂದಿಹೆವಯ್ಯ ಜನ್ಮವ ತಳೆದು 
ಮುಂದಿನ ಬದುಕು ಬಂಧುರವೆನಿಸೋ ಗುರಿ ಸಾಧಿಸೋ ಕಂದಾ" (ಭಕ್ತ ಕುಂಬಾರ .. ನಾನೂ ನೀನು ನೆಂಟರಯ್ಯ)

ಶ್ರೀ 
"ನನ್ನ ನೀನು ಗೆಲ್ಲಲಾರೆ 
ತಿಳಿದು ತಿಳಿದು ಛಲವೇತಕೆ" (ನೀ ನನ್ನ ಗೆಲ್ಲಲಾರೆ .. ನನ್ನ ನೀನು ಗೆಲ್ಲಲಾರೆ)

ಶ್ರೀ 
ಸುಖದಲಿ ಎಂದೂ ಮನದಲ್ಲಿ ನಿನ್ನ ನೆನೆದವನಂತೂ ನಾನಲ್ಲ 
ಕಡು ಕಷ್ಟದ ಬೇಗೆಯು ಸುಡುತಿರುವಾಗ ಮೂಡಿತು ನಿನ್ನ ನೆನಪು ಸುಳ್ಳಲ್ಲ 
ಕೊರಗುತ ಕರೆಯುತ ಬಂದೆ ಕರುಣೆಯೇ ಇಲ್ಲವೇ ಎಂದೇ 
ಇನ್ನೂ ನೀನು ಬಾರದೆ ಹೋದರೆ ಸುಮ್ಮನಿರುವವ ನಾನಲ್ಲ.. 

ಶಕ್ತಿಯು ದೇಹದಿ ತುಂಬಿರುವಾಗ ಮಂತ್ರಾಲಯಕೆ ಬರಲಿಲ್ಲ 
ಗುರು ಭಕ್ತರನೆಂದು ಕನಸಲ್ಲಾಗಲಿ ಸೇರಿಸಿದಂತೆ ನೆನಪಿಲ್ಲ 
ಭಕ್ತನು ನಾನೇನಲ್ಲ ಭಕ್ತಿಯ ಅರಿವೆನಗಿಲ್ಲ 
ಅಭಯವ ನೀನು ನೀಡುವ ತನಕ ಪಾದವ ಬಿಡುವವ ನಾನಲ್ಲ.. (ಮಂತ್ರಾಲಯದ ಭಕ್ತಿ ಗೀತೆಗಳು)

ಅಣ್ಣಾವ್ರು 
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ  (ಮಂತ್ರಾಲಯದ ಭಕ್ತಿ ಗೀತೆಗಳು - ದೇವತಾ ಮನುಷ್ಯ .. ಹಾಲಲ್ಲಾದರೂ ಹಾಕು)

ಶ್ರೀ 
ಆಸೆಯೂ ಕೈಗೂಡಿತು 
ಆಸರೆ ದೊರೆತಾಯಿತು 
ಚಿಂತೆ ದೂರವಾಯಿತು 
ಮನಸು ಹಗುರವಾಯಿತು  (ನಾನೊಬ್ಬ ಕಳ್ಳ -- ಆಸೆಯೂ ಕೈ ಗೂಡಿತು)
 
********

ಅಣ್ಣಾವ್ರು ಗಂಧರ್ವ ಲೋಕ ಸೇರಿದ ದಿನವಿದು.. ಏನಾದರೂ ಬರೆಯಲೇ ಬೇಕು.. ಏನು ಬರೆಯುವುದು.. ಏನಂಥ ಬರೆಯುವುದು..ಕೆಲಸದ ಒತ್ತಡ ಗೊಬ್ಬರ ಗೂಡಾದ ಮನಸ್ಸು.. ಸ್ಪೂರ್ತಿಯ ಸೆಲೆಗಾಗಿ ಹುಡುಕಾಡುತಿತ್ತು.. ಶ್ರೀ ಕೃಷ್ಣ ಅರ್ಜುನನಿಗೆ ಮಾರ್ಗದರ್ಶನ ನೀಡಿದ ಹಾಗೆ.. ಸಂಜೆ ಆಫೀಸಿನಿಂದ ಮೆಟ್ರೋದಲ್ಲಿ ಬರುವಾಗ ನನ್ನ ನೆಚ್ಚಿನ ಗೆಳೆಯ ಅಖಿಲ್ ಜೊತೆ ಮಾತಾಡುತ್ತಾ ಬಂದೆ.. ಸಂಜೆ ಕೊಂಚ ಹೊತ್ತು ದೇಹ ದಂಡಿಸಿ ಬಂದೆ ಶ್ರೀಕಾಂತ್.. ಈಗ ಮನಸ್ಸು ಹಗುರಾಗಿದೆ ಎಂದರು.. 

ಅಚಾನಕ್ ಬಾಯಿಗೆ ಬಂತು.. ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಚಾವಟಿಯಲ್ಲಿ ಹೊಡೆಸಿಕೊಳ್ಳುತ್ತಿರುತ್ತಾರೆ... ಆಗ ಆತನ ಸಾಕು ಮಗಳು ಜಯಮಾಲಾ ಬಂದು ಯಾಕೆ ಅಂಕಲ್ ಅಂದಾಗ.. ಅವರು ಹೇಳುವ ಮಾತು.. ಆತ್ಮ ಶುದ್ಧಿಗೋಸ್ಕರ ಈ ದೇಹಕ್ಕೆ ಪ್ರಾಯಶ್ಚಿತ್ತ ಆಗಾಗ ಅನಿವಾರ್ಯ... 
 
ಅದೇ ರೀತಿ ಕಾಮನಬಿಲ್ಲು ಚಿತ್ರದಲ್ಲಿ ಸರಿತಾ ಯೋಗದ ಬಗ್ಗೆ ಕೇಳಿದಾಗ ಅವರು ಹೇಳುವುದು "ದೇಹಕ್ಕೆ ಸ್ವಲ್ಪ ದಂಡನೆ ಕೊಡಬೇಕು.. ನೋಯಿಸಬೇಕು.. ಹಿಂಸೆ ಕೊಡಬೇಕು.. ಆವಾಗ ಶಾಂತಿ ಸಹನೆ ತನ್ನ ಪಾಡಿಗೆ ತಾನೇ ಸಿಗುತ್ತೆ.. "

ಇದೆ ಮಾತುಗಳು ಮೆಟ್ರೋದಲ್ಲಿ ಮನೆ ತನಕ ಬರೋ ತನಕ ಸೈಕಲ್ ಹೊಡಿತಾ ಇತ್ತು.. ಇತ್ತೀಚಿಗೆ ಬದುಕಲ್ಲಿ ನೆಡೆದ ಕೆಲವು ವಿದ್ಯಮಾನಗಳು ಮನಸ್ಸನ್ನು ಘಾಸಿಗೊಳಿಸಿದ್ದವು.. ಹಿಂಸೆ ಮಾಡಿದ್ದವು.. ಏನು ಮಾಡೋದು.. ಹೇಗೆ ಮುಂದುವರೆಯೋದು ಎನ್ನುವ ಗೊಂದಲ ನನ್ನ ಮನದಲ್ಲಿ ಮನೆಕಟ್ಟಿ ಗೃಹಪ್ರವೇಶ ಮಾಡಿತ್ತು.. . ಎಲ್ಲಿ ಹೆಜ್ಜೆ ಇಟ್ಟರೂ ಕೆಸರಿನ ನೆಲವೇ.. ಕಾಲು ಜಾರಿ ಹೋಗುತ್ತಿತ್ತು.. ಇವತ್ತಿಗೋಸ್ಕರ ಮನಸ್ಸು ಕಾಯುತ್ತಿತ್ತೋ ಏನೋ.. ಅಣ್ಣಾವ್ರ ಅಭಿಮಾನ ಪೂರ್ವಕ ಹಾಡುಗಳು ಮನಸ್ಸಿನಲ್ಲಿ ಕಟ್ಟಿದ್ದ ಜೇಡರಬಲೆಯನ್ನು ಕಿತ್ತೊಗೆಯಿತು.. ಮನಸ್ಸು ಹಕ್ಕಿಯಾಯಿತು.. ಈ ಲೇಖನ ಸೃಷ್ಟಿಯಾಯಿತು. 

******
ಅಣ್ಣಾವ್ರು, ರಾಜ್, ಮುತ್ತು ರಾಜ್.. ಇವೆಲ್ಲಾ ನೂರೆಂಟು ಹೆಸರುಗಳು ಇರಬಹುದು.. ಅವರ ಪ್ರತಿ ಚಿತ್ರಗಳು ಒಂದು ತರಗತಿ ಇದ್ದ ಹಾಗೆ.. ಅಣ್ಣಾವ್ರು ನನ್ನ ತಲೆಯ ಮೇಲೆ ಮೆಲ್ಲಗೆ ಮೊಟಕಿ.. 

"ಶ್ರೀ ನಲವತ್ತು ಮೂರು ಚಿತ್ರಗಳಿಗೆ ನಿಂತು ಬಿಟ್ಟಿದ್ದೀಯ.. ಮುಂದುವರೆಸಪ್ಪ.. ನಾನು ಕಾಯ್ಥ ಇದ್ದೀನಿ.. ಪಾರ್ವತೀ ಪ್ರತಿ ದಿನ ಕೇಳ್ತಾನೆ ಇರ್ತಾಳೆ.. ಇತ್ತೀಚಿಗಷ್ಟೇ ಬಂದ ಅಪ್ಪು ಕೂಡ.. ಅಪ್ಪಾಜಿ ಈ ಶ್ರೀ ಬರಿ ಕತೆ ಹೇಳ್ತಾನೆ.. ನಿಮ್ಮ ಶೈಲಿಯಲ್ಲಿ ಒಂದು ಧಮ್ಕಿ ಹಾಕಿ ಬನ್ನಿ.. ಇನ್ನೂ ನೂರಾ ಅರವತ್ತೆರಡು ಚಿತ್ರಗಳಿವೆ.. ಓದಬೇಕು.. ಶ್ರೀ ಮತ್ತೆ ಅವನ ಹಾದಿಗೆ ಮರಳಬೇಕು.. ಹೋಗಿ ಬನ್ನಿ ಅಪ್ಪಾಜಿ ಅಂತ ಇವತ್ತು ನನ್ನ ಕಳಿಸಿದ.. ಅದಕ್ಕೆ ನೀನು ಎಂದಿಗೂ ದುಃಖ ಪಡುವ ಮನುಷ್ಯನಲ್ಲ.. ಆದರೆ ನೀ ಈ ಲೇಖನ ಶುರು ಮಾಡಿದ ರೀತಿ ನನಗೆ ಬೇಸರವಾಯಿತು.. ನಿನ್ನ ದುಃಖಭರಿತ ಗೀತೆಗಳಿಗೆ ನಾ ಸ್ಫೂರ್ತಿ ಕೊಡುವ ಗೀತೆಗಳನ್ನು ಹೇಳುತ್ತಾ ಬಂದೆ.. ಕೊನೆಯಲ್ಲಿ ಮತ್ತೆ ನಿನ್ನ ಶೈಲಿಗೆ ಮರಳಿದ್ದು ಖುಷಿಯಾಯಿತು.. ಶ್ರೀ ನಾ ಇದ್ದೇನೆ ನಿನ್ನ ಜೊತೆಯಲ್ಲಿ.. ಆಂಜನೇಯ ಸಂಜೀವಿನಿ ಪರ್ವತ ಎತ್ತಿ ಹಿಡಿದಂತೆ ನಿನ್ನ ಬೀಳದಂತೆ ನನ್ನ ಕೈಯಲ್ಲಿ ಹಿಡಿದಿಟ್ಟು ಕೊಂಡಿರುತ್ತೇನೆ.. ಬರಲಿ ನಿನ್ನ ಲೇಖನ ಮಾಲೆಗಳು, ಪುಟ್ಟಣ್ಣ ಕಣಗಾಲ್ ಚಿತ್ರ ಸರಣಿ ಆಯ್ತು, ಬಾಲಣ್ಣ ಚಿತ್ರ ಸರಣಿ ಮುಂದುವರೆಸು.. ಅಶ್ವಥ್ ಅವರ ಚಿತ್ರ ಮಾಲೆ, ರಾಜಾನಂದ್ ಅವರ ಚಿತ್ರ ಮಾಲೆ ಶುರುವಾಗಲಿ ..ಶುಭವಾಗಲಿ ಶ್ರೀ.. ಶುಭವೇ ಆಗುತ್ತದೆ ಶ್ರೀ.. ಸರೀನಾ.. " 

ಇದು ಶ್ರೀ.. ಈ ನಗು ನಿನ್ನ ಮೊಗದಲ್ಲಿ ಸದಾ ಇರಬೇಕು.. ಸದಾ ಇರುತ್ತೆ... ನಿನ್ನ ಜಗತ್ತಿಗೆ ಮತ್ತೆ ಮರಳಿದ ನಿನಗೆ ಶುಭವಾಗಲಿ ಶ್ರೀ ... ! 



ಕಣ್ಣು ಬಿಟ್ಟೆ.. ಮನೆಯ ಗೋಡೆಯಲ್ಲಿ ಇದ್ದ ಅಣ್ಣಾವ್ರ ಚಿತ್ರ ...ಅದು ನನ್ನ ಶ್ರೀ ಎನ್ನುತ್ತಾ ಒಮ್ಮೆ ಕಣ್ಣು ಮಿಟುಕಿಸಿ ನಕ್ಕಿತು.. 

ನನ್ನ ಮನದಲ್ಲಿ ಸ್ಪೂರ್ತಿಯ ಸೆಲೆ ಉಕ್ಕಿತು !!!!!

2 comments:

  1. ಅದ್ಭುತ ಬರಹ ಶ್ರೀ 😊🥰🥰🥰ಧನ್ಯವಾದಗಳು 😊😊😊

    ReplyDelete
  2. Liked it 👏👏👏 ಹಾಡು, ಸಾಹಿತ್ಯ, ಭಾವಾರ್ಥ ಎಲ್ಲವೂ ಅದ್ಭುತ

    ReplyDelete