Wednesday, April 24, 2013

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ! (2013)

ರಾಜ್ ಕಲಾವಿದರಾಗಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ. ಉತ್ತರ ಹುಡುಕುತ್ತ ಹೊರಟರೆ ಪ್ರಾಯಶಃ ಈ ಭೂಮಿ.... ಮಂಗಳ ಗ್ರಹವಾಗಿಬಿಡುತ್ತೆ ಅನ್ನಿಸುತ್ತೆ. ಯಾಕೆಂದರೆ ಈ ಪ್ರಶ್ನೆಯನ್ನು ಕೇಳುತ್ತಾ ಹೊರಟರೆ ಎಲ್ಲರೂ ಮುಖ ಕೆಂಪಗೆ ಮಾಡಿಕೊಳ್ತಾರೆ. ಇಡಿ ಭೂಮಂಡಲವೇ ಕೆಂಪಾಗಿ.. ಮಂಗಳ ಗ್ರಹದಂತೆ ಆಗುತ್ತದೆ. 

ಇಂದು ಅವರ ಜನುಮ ದಿನ.. ವರ್ಷವೆಲ್ಲಾ ನೆನಪಲ್ಲಿ ಇದ್ದರೂ ಇಂದು ಇನ್ನೊಮ್ಮೆ ಅವರನ್ನು ನೆನೆಸಿಕೊಂಡು ಮೈ ಮನ ಪುಳಕಗೊಳ್ಳುವ ತವಕ ಎಲ್ಲರಲ್ಲೂ ಇರುತ್ತದೆ. ಮಗುವನ್ನು ಎಷ್ಟೇ ಬಾರಿ ಮುದ್ದಿಸಿದರೂ....  ಇನ್ನೊಮ್ಮೆ ಮುದ್ದಿಸೋಣ ಅನ್ನುವ ಬಯಕೆಯಂತೆ ಅಲ್ಲವೇ!

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ. 



ಅವರು ಮಹಾರಾಜರಾಗಿ ದರ್ಬಾರ್ ನಲ್ಲಿ ಕೂತಿದ್ದಾಗ ಅವರ ಆಸ್ಥಾನದಲ್ಲಿ ಯಾರು ಯಾರು ಇರಬಹುದು. ಹೀಗೊಂದು ಕಲ್ಪನೆ ನನ್ನ ಕಾಡುತಿತ್ತು. ಆ ಒಂದು ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕ ಈ ಕ್ಷಣದಲ್ಲಿ ಮೂಡಿಬಂದ ಲೇಖನ ಇದು. 

ಮಹಾರಾಜ : ಶ್ರೀ ಶ್ರೀ ಮುತ್ತು ರಾಜಕುಮಾರ್ 

ರಾಜ ಮಾತೆ : ಪಂಡರಿಬಾಯಿ 

ರಾಜ ಗುರು : ಕೆ ಎಸ್ ಅಶ್ವತ್ 

ಸಲಹೆ : ಆದ್ವಾನಿ ಲಕ್ಷ್ಮೀದೇವಿ 

ಮಹಾಮಂತ್ರಿಗಳು  : ವರದರಾಜ್ (ತಮ್ಮ) ಹಾಗೂ ಚಿ. ಉದಯಶಂಕರ್ 


ದರ್ಬಾರಿನ ನಿರ್ದೇಶಕರು : ಎಚ್ ಎಲ್ ಎನ್ ಸಿಂಹ 
                                    ಬಿ ಆರ್ ಪಂತುಲು 
                                    ದೊರೈ ಭಗವಾನ್ 
                                    ವಿಜಯ್ 
                                    ಹುಣಸೂರ್ ಕೃಷ್ಣಮೂರ್ತಿ 
                                    ಟಿ ವಿ ಸಿಂಗ್ ಠಾಕೂರ್ 
                                    ಕು ರಾ ಸೀತಾರಾಮ ಶಾಸ್ತ್ರಿ ಇನ್ನೂ ಅನೇಕ 
                                    ಮಹನೀಯರು 

ದೃಶ್ಯಸೆರೆ ಹಿಡಿದವರು  : ಆರ್ ಮಧುಸೂದನ್ 
                                 ಶ್ರೀಕಾಂತ್ 
                                 ಚಿಟ್ಟಿಬಾಬು 
                                 ಡಿ ವಿ ರಾಜಾರಾಮ್ 
                                 ಗೌರಿಶಂಕರ್ ಇನ್ನೂ ಮುಂತಾದವರು     

ಗರಡಿ ಗುರು : ಎಂಪಿ ಶಂಕರ್ 

ಸಂಗೀತ ವಿದ್ವಾಂಸರು : ಉಸ್ತಾದ್ ಬಿಸ್ಮಿಲ್ಲಾ ಖಾನ್ 
                                ಜಿ ಕೆ ವೆಂಕಟೇಶ್ 
                                ರಾಜನ್ ನಾಗೇಂದ್ರ 
                                ಎಂ ರಂಗರಾವ್ 
                                ಉಪೇಂದ್ರ ಕುಮಾರ್ 
                                ಟಿ ಜಿ ಲಿಂಗಪ್ಪ 
                                ವಿಜಯಭಾಸ್ಕರ್ 
                                ಮತ್ತಿತರರು 

ಸೇನಾಪತಿಗಳು : ನಟ ಭೈರವ ವಜ್ರಮುನಿ ಹಾಗೂ ತೂಗುದೀಪ ಶ್ರೀನಿವಾಸ್   

ರಣಕಲಿಗಳು : ಶಕ್ತಿ ಪ್ರಸಾದ್, ನಾಗಪ್ಪ, ದಿನೇಶ್

ವಿಕಟಕವಿಗಳು : ಹಾಸ್ಯ ಬ್ರಹ್ಮ ಬಾಲಣ್ಣ 
                       ಹಾಸ್ಯ ಚಕ್ರವರ್ತಿ ನರಸಿಂಹರಾಜು 
                       ಕುಳ್ಳ ಏಜೆಂಟ್ ದ್ವಾರಕೀಶ್ 
                       ಹಾಸ್ಯ ರಸತಜ್ಞ ಶಿವರಾಂ  

ಪೋಷಕ ವೃಂದದಲ್ಲಿ : ಹೊನ್ನವಳ್ಳಿ ಕೃಷ್ಣ, ಶಾಂತಮ್ಮ, ಪಾಪಮ್ಮ, ಸಂಪತ್, ಶನಿ ಮಹಾದೇವಪ್ಪ, ಅನಂತರಾಮ್ ಮಚ್ಚೇರಿ, ಗೋ ರಾ ಭೀಮರಾವ್, ಎಂ ಎಸ್ ಉಮೇಶ್, ಎಂ ಎಸ್ ಸತ್ಯ, ರಾಮಚಂದ್ರ ಶಾಸ್ತ್ರಿ, ಗಣಪತಿ ಭಟ್, ಅಶ್ವತ್ ನಾರಾಯಣ, ಜೋಕರ್ ಶ್ಯಾಮ್, ಕುಳ್ಳಿ ಜಯ, ರಮಾ ದೇವಿ, ಎಂ ಎನ್ ಲಕ್ಷ್ಮೀದೇವಿ  ಹಾಗೂ ಮತ್ತಿತರರು 

ನೃತ್ಯ ಪಟುಗಳು : ಉಡುಪಿ ಜಯರಾಂ, ದೇವಿ

ಸಾಹಸ: ಶಿವಯ್ಯ, ವಿಜಯ್, ಜೂಡೋ ರತ್ನಂ  
                                                             
ಈ ಪಟ್ಟಿಯಲ್ಲಿ ಇನ್ನೂ ಅನೇಕ ವಿಖ್ಯಾತ ಕಲಾವಿದರ, ಸಭಿಕರ, ಕಲಾ ಪೋಷಕರ ಹೆಸರುಗಳು ಪ್ರಕಟವಾಗಿಲ್ಲ. ಅವರನೆಲ್ಲಾ ಸೇರಿಸಿ ಒಂದು ದೊಡ್ಡ ಒಡ್ಡೋಲಗ ಮಾಡುವ ಅಭಿಲಾಷೆ ಇದೆ. ಎಲ್ಲರ ಮುಖ ಚಿತ್ರಗಳು ಜಗತ್ತಿಗೆ ಪರಿಚಯವಾಗಬೇಕೆಂಬ ಹಂಬಲ ಇದೆ.... ನೋಡೋಣ..ಪ್ರಯತ್ನ ಪಡೋಣ 

ಅಣ್ಣಾವ್ರ ಈ ಹುಟ್ಟು ಹಬ್ಬಕ್ಕೆ ಒಂದು ಕಲಾವಿದರ ಪಟ್ಟಿ.. ಹಾಗೂ ತಾವು ಮರೆಯಲ್ಲಿ ನಿಂತು ಕಲಾ ರತ್ನವನ್ನು ಬೆಳಕಿಗೆ ತಂದು ಹೊಳಪು ಕೊಟ್ಟ ಎಲ್ಲ ಕಲಾ ಮಣಿಗಳಿಗೆ ಈ ಲೇಖನ ಅರ್ಪಿತ!

14 comments:

  1. ಮುಖ್ಯವಾಗಿ ಛಾಯಾಗ್ರಾಹಕರನ್ನು ನೆನೆಸಿದ್ದನ್ನು ನಾನು ಓದಿ ಖುಷಿ ಪಟ್ಟೆ. ಅಂದಹಾಗೆ ಅಣ್ಣಾ ಅವರಿಗೆ ನೆಚ್ಚಿನ ಛಾಯಾಗ್ತಾಹಕರು ವಿ.ಕೆ. ಕಣ್ಣನ್, ಕಡೆಯ ಚಿತ್ರದ ಛಾಯಾಗ್ರಾಹಕರು ಆರ್. ಗಿರಿ (ಶಬ್ಧವೇದಿ).

    ರಾಜ್ ಜನುಮದಿನಕ್ಕೆ ತಾವು ಪ್ರಸ್ತುತ ಪಡಿಸಿದ ಈ ಲೇಖನ ವಿಭಿನ್ನವಾಗಿದೆ. ತಾವು ನನ್ನ ಚಿತ್ರರಂಗದ ತಂತ್ರಜ್ಞರನ್ನು ನೆನಪು ಮಾಡಿಕೊಟ್ಟದ್ದು ನಿಮ್ಮ ಮೇಲಿನ ಪ್ರೀತಿ ದ್ವಿಗುಣವಾಗಳು ಕಾರಣವಾಯಿತು.

    ಬಹಳ ಕಾಲ ಅವರಿಗೆ ಪ್ರಸಾದನ (ಮೇಕಪ್) ಕಲಾವಿದರಾಗಿದ್ದವರು ನಿರ್ದೇಶಕ ಎಂ.ಎಸ್. ರಾಜಶೇಖರ ಅವರ ತಂದೆ.

    ರಾಜಕುಮಾರ್ ಅವರು ಭಾರತದಲ್ಲೇ ಕತ್ತಿವರಸೆ ಸಾಹಸಗಳಲ್ಲಿ ಎತ್ತಿದ ಕೈ. ಅವರ ಬಹಧೂರ್ ಗಂಡು, ಮಯೂರ ಚಿತ್ರಗಳಲ್ಲಿ ಅವರ ಅನನ್ಯ ಕತ್ತಿ ವರಸೆ ಗಮನಿಸಬಹುದು.

    ಎಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಲ್ಲ ಕಲಾವಿದ ಅವರು.

    ReplyDelete
    Replies
    1. ಸುಮಾರು ಕಲಾವಿದರ ಹೆಸರುಗಳು ಬರೆಯಲು ಆಗಲಿಲ್ಲ , ನೆನಪಿನಾಳದಿಂದ ಹೆಕ್ಕಲು ಆಗಲಿಲ್ಲ. ಅವರ ಯೋಗ ಗುರುಗಳು, ಪ್ರಸಾಧನ ತಂಡದವರು, ಅವರ ವೇಷಭೂಷಣಗಳನ್ನು ನೋಡಿಕೊಂಡವರು ಹೀಗೆ ಸುಮಾರು ಶಿಲ್ಪಿಗಳಿದ್ದಾರೆ ರಾಜ್ ಎಂಬ ಬೃಹತ್ ಸುಂದರ ಶಿಲ್ಪದ ಹಿಂದೆ. ನೆನಪು ಮಾಡಿಕೊಂಡು ಎಲ್ಲರ ಹೆಸರನ್ನು ಹಾಕಿ ಒಂದು ಲೇಖನ ಮಾಡುವ ಆಸೆ ಇದೆ. ಕಥೆಗಾರರು, ಸಾಹಿತಿಗಳು, ಸಂಗೀತ ನಿರ್ದೇಶಕರು, ಸಾಹಸ, ಕಲೆ, ಛಾಯಾಗ್ರಾಹಕರು, ಅವರ ಚಿತ್ರಗಳಲ್ಲಿ ಸಾಮಾನ್ಯವಾಗಿ ಇದ್ದೆ ಇರುತ್ತಿದ್ದ ಕಲಾವಿದರು ಹೀಗೆ ರಾಜ್ ಎಂಬ ಪ್ಯಾಕೇಜ್ ಒಳಗೆ ಭಾವ ತುಂಬಿದ್ದ ಎಲ್ಲರನ್ನು ನೆನೆವ ಒಂದು ಲೇಖನ ತಲೆಯೊಳಗೆ ಬಂದಿದೆ. ಪ್ರಾಯಶಃ ಮುಂದಿನ ಹುಟ್ಟು ಹಬ್ಬದ ಹೊತ್ತಿಗೆ ಎನ್ನಿಸುತ್ತಿವೆ. ಧನ್ಯವಾದಗಳು ಬದರಿ ಸರ್ ಸುಂದರ ಪ್ರತಿಕ್ರಿಯೆಗೆ.

      Delete
  2. ನೀವು ಇಂದು ಖಂಡಿತಾ ಒಂದು ಬರಹವನ್ನ ಪೋಸ್ಟ್ ಮಾಡ್ತೀರಾ ಅಂತ ಗೊತ್ತಿತ್ತು.ನಮ್ಮೂರಲ್ಲಿ ಇವತ್ತು ಹೊಟೇಲ್ ನಲ್ಲಿ ಕೆಲ್ಸ ಮಾಡೋ ಹುಡುಗರು ಕೇಕ್ ಹಂಚುತ್ತಿದ್ದುದು ನೆನಪಾಯಿತು."ಜೀವ ರಾಶಿಯಲ್ಲಿ ಮಾನವನಿಗೆ ಆದ್ಯತೆ , ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ "



    ReplyDelete
    Replies
    1. ನಂಬಿಕೆಯೇ ದೇವರು ಅದನ್ನೇ ಹೇಳುತ್ತಾ ಪಾಲಿಸುತ್ತಾ ಬಂದಿದ್ದರು ಅಭಿಮಾನಿಗಳ ದೇವರು. ಸುಂದರ ಪ್ರತಿಕ್ರಿಯೆ ಸಹೋದರಿ. ಅವರ ಚಿತ್ರಗಳಲ್ಲಿನ ಎಷ್ಟೋ ವಿಷಯಗಳು, ಮಾತುಗಳು ಹಾಡುಗಳು.. ಪ್ರತಿಯೊಂದು ಒಂದು ನಿಯಮವೇನೂ ಅನ್ನಿಸುವಷ್ಟು ಗಾಢವಾಗಿರುತ್ತವೆ

      Delete
  3. This is cool......
    I love Rajanna for his simplicity and values.
    Khushiyaaytu lekhana oDi....

    ReplyDelete
    Replies
    1. ತೆರೆಯ ಮೇಲೆ ಹೇಳಿದ್ದನ್ನ ಜೀವನದಲ್ಲೂ ತೋರುವ ಅವರ ನಿಷ್ಠೆ ಅವರನ್ನು ಈ ಮಟ್ಟಕ್ಕೆ ಒಯ್ದಿದೆ ಎಂದರೆ ತಪ್ಪಿಲ್ಲ. ಧನ್ಯವಾದಗಳು ರೂಪ

      Delete
  4. ಕನ್ನಡ ಕುಲಕೋಟಿ ಜನತೆಯ ಹೃದಯ ಆಸ್ಥಾನದ ಅನಭಿಷಿಕ್ತ ಮಹಾರಾಜರಿಗೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ನುಡಿನಮನ ಎನ್ನಲೇ...

    ReplyDelete
    Replies
    1. ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಎನ್ನುವ ಹಾಗೆ ಅಣ್ಣಾವ್ರ ಬಗ್ಗೆ ಏನೇ ಬರೆದರೂ ಅದು ಅಕ್ಷರಗಳಿಗೆ ಸಲ್ಲುವ ಗೌರವ. ಅಕ್ಷರಗಳು ಅವರಿಗೆ ನಮಸ್ಕರಿಸುವ ಒಂದು ಬಗೆ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಸಹೋದರ!

      Delete
  5. ಕನ್ನಡಿಗರ ಹೃದಯ ಸಾಮ್ರಾಟ ರಾಜಕುಮಾರ್ ಅವರ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೆ..

    ನಿಮ್ಮ ಈ ಬರಹ ವಿನೂತನವಾಗಿದೆ.. ಹೊಸ ಕಲ್ಪನೆ..

    ನಮ್ಮ ಪೌರಾಣಿಕ ಪಾತ್ರಗಳಂತೆ ಆಗಿಬಿಟ್ಟಿದ್ದಾರೆ ನಮ್ಮ ರಾಜಕುಮಾರ್...

    ಅವರ ಜನ್ಮ ದಿನದ ಸಂದರ್ಭದಲ್ಲಿ ಸಕಾಲಿಕ ಲೇಖನ..

    ಧನ್ಯವಾದಗಳು ಶ್ರೀ....

    ReplyDelete
    Replies
    1. "ರಾಜ್ ಹೆಸರೇ ಒಂದು ಪೌರಾಣಿಕ ಪಾತ್ರ".. ಸುಂದರ ಉದ್ಗಾರಾ ಪ್ರಕಾಶಣ್ಣ. ,ಬರೆದಷ್ಟು ಮುಗಿಯೋಲ್ಲ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  6. ವಿಭಿನ್ನ ಬರಹ ಶ್ರೀಕಾಂತಣ್ಣ ..
    ತುಂಬಾನೇ ಖುಷಿ ಆಯ್ತು ಓದಿ :)
    ಹಮ್ ....ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ.....

    ReplyDelete
  7. ರಾಜ್ ಅಭಿಮಾನವನ್ನು ಕಂಡು ಮನಸ್ಸು ಮೂಕ... :)
    ವಿಭಿನ್ನ ಪ್ರಯತ್ನ..
    :) :)

    ReplyDelete
    Replies
    1. ಧನ್ಯವಾದಗಳು ಪಿ ಎಸ್.. ಅವರ ಬಗ್ಗೆ ಬರೆದಷ್ಟು ಸಮುದ್ರದಲ್ಲಿ ಏಳುವ ಅಲೆಗಳಂತೆ ಇನ್ನಷ್ಟು ಬರೆಯುವ ಆಸೆ ಬರುತ್ತಲೇ ಇದೆ

      Delete