Wednesday, April 11, 2012

ಅಣ್ಣಾವ್ರನ್ನ ಬರವಣಿಗೆಯಲ್ಲಿ ನೆನಪಿಸಿಕೊಳ್ಳುವ ಪ್ರಯತ್ನ (2012)

ಅಣ್ಣಾ ನೀವು ನಮಗಾಗಿ...
ಇನ್ನೂರು ಚಿಲ್ರೆ ಸಿನೆಮಗಾಗಿ
ಇಲ್ಲೇ ಇರ್ತೀರಾ ಕರುನಾಡ ಹಸಿರಾಗಿ...

ರಾಜಕುಮಾರ್ ಅವರು ನಿರ್ವಹಿಸದ ಪಾತ್ರ ಬಹುಶಃ ಈ ಪ್ರಪಂಚದಲ್ಲಿ ಯಾವುದು ಇಲ್ಲ!!!!!


ನಮ್ಮ ಕರುನಾಡಿನಲ್ಲಿ ಯಾವುದೇ ದೇವರ ಪಾತ್ರ ಇರಬಹುದು, ಐತಿಹಾಸಿಕ ಅರಸರ ಪಾತ್ರ ಇರಬಹುದು, ಪತ್ತೆದಾರ ಇರಬಹುದು, ಸಂತ-ಭಕ್ತ ಇರಬಹುದು...ರಾಜ್ ಮುಖವೇ ನಮ್ಮ ಕಣ್ಣ ಮುಂದೆ ಬರುತ್ತದೆ...

ಈ ಪಾತ್ರಗಳಲ್ಲಿ ಎಷ್ಟು ಘನ-ಗಂಭೀರ ಚರ್ಯೆ, ಹಾವ-ಭಾವಗಳಲ್ಲಿ ಇರುತಿದ್ದರೂ..ಅಷ್ಟೇ ಮಿಂಚಿನ, ತುಂಟ ಪಾತ್ರಗಳಲ್ಲೂ ತನ್ಮಯತೆಯಿಂದ ಪಾತ್ರವಹಿಸುತ್ತಿದ್ದರು..

ಕೆಲವು ಪಾತ್ರಗಳು...
ಶಂಕರ್ ಗುರು : ಈ ಚಿತ್ರದಲ್ಲಿ ಗುರುವಿನ ಪಾತ್ರ ಕೇವಲ ಅಣ್ಣಾವ್ರು ಮಾತ್ರ ಮಾಡಲು ಸಾಧ್ಯ...ಆ ತರಲೆ, ತುಂಟತನ, ಹಾಸ್ಯ, ರೇಗಿಸುವ ಭಂಗಿ, ಆ ಉಡುಪು ವಯ್ಯಾರಗಳು ಕೇವಲ ಅಣ್ಣಾ ಅವರಿಂದ ಮಾತ್ರ ಸಾಧ್ಯ
ಗುರು ಪಾತ್ರದ ಮೊದಲ ದೃಶ್ಯದಲ್ಲಿ ಬಾಲಣ್ಣನನ್ನು ಗೋಳು ಹುಯ್ಕೊಳೋ ದೃಶ್ಯ ಸೊಗಸು 
"ಈ ಹುಡುಗಿಯ ಕೊಬ್ಬನ್ನು ಇಳಿಸಿ...ಕಾಶ್ಮೀರದಿಂದ ಕರ್ನಾಟಕಕ್ಕೆ ಕರೆದುಕೊಂಡು ಬರದಿದ್ದರೆ ನಾನು ಗುರುವೇ ಅಲ್ಲ" ಎಂದು ಹೇಳುತ್ತಾ ಎದೆ ತಟ್ಟಿಕೊಳ್ಳುವ ಶೈಲಿ ಸೀಟಿ ಹೊಡೆಸುತ್ತ್ತೆ..ಇ ಸಿನೆಮಾವನ್ನು ಬೆಂಗಳೂರಿನಲ್ಲಿ ಬಿಡುಗಡೆ ಯಾದಗೆಲ್ಲ ನೋಡಿದ್ದೇನೆ..ಪ್ರತಿ ಭಾರಿಯೂ ಅದೇ ಶೀಟಿ, ಚಪ್ಪಾಳೆ ಗಿಟ್ಟಿಸುತ್ತೆ ಈ ಸನ್ನಿವೇಶ 

"ಡ್ಯಾಡಿ ಕೀಪ್ ಟು ಲ್ಯಾಕ್ಸ್ ರೆಡಿ"  ಇನ್ನೊಂದು ಸೊಗಸಾದ ಸಂಭಾಷಣೆ..



ತ್ರಿಮೂರ್ತಿ: ಈ ಸಿನಿಮಾ...ಮೂರು ಭಿನ್ನ ಪಾತ್ರಗಳಿಂದ ಕೂಡಿದೆ..ಇದರಲ್ಲಿ ಎರಡನೇ ಪಾತ್ರ "ಶೇಖರ್" ಎಂಬ ಹಿಪ್ಪಿ ಪಾತ್ರದಲ್ಲಿ ಬಾಲಣ್ಣನ ಕಾಡುವ ದೃಶ್ಯಗಳು ನಗೆ ಬುಗ್ಗೆ ಉಕ್ಕಿಸುತ್ತದೆ.."ಬಿಸಾಕೋ ದುಡ್ಡನ್ನ..ನಿನ್ನ ಹೆಂಡತಿ ಮಕ್ಕಳಿಗೆ ನಾನು ಕೊಟ್ಯಾದೀಶ ಅಂತ ತೋರಿಸ್ಕೊಬೇಕು ಕಣೋ" ಅಂತ ಬಾಲಣ್ಣ ಅವರಿಗೆ ಹೇಳುವ ಭಾವಾಭಿನಯ ಸುಂದರ...

ಹೀಗೆ ಅನೇಕ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್, ವಜ್ರಮುನಿ, ಬಾಲಣ್ಣ, ದ್ವಾರಕೀಶ್ ಮುಂತಾದ ಅನೇಕ ಕಲಾವಿದರ ಜೊತೆ ಹಾಸ್ಯ ದೃಶ್ಯಗಳು, ಸಂಭಾಷಣೆ ನಿಜಕ್ಕೂ  ಇದೆ ಅಣ್ಣಾವ್ರ ಅನೇಕ ಗಂಭೀರ ಪಾತ್ರಗಳನ್ನ ಮಾಡಿದ್ದು ಅನ್ನುವ ಸಂದೇಹ ಕಾಡುತ್ತದೆ..

ಸಂಪತ್ತಿಗೆ ಸವಾಲ್ ನಲ್ಲಿ ಬಾಲಣ್ಣನ, ಮಂಜುಳಾ ಜೊತೆ, 
ಮಯೂರದಲ್ಲಿ ವಜ್ರಮುನಿ, 
ಭಾಗ್ಯದ ಲಕ್ಷ್ಮಿ ಬಾರಮ್ಮ - ವಜ್ರಮುನಿ
ಕಣ್ತೆರೆದು ನೋಡು - ಬಾಲಣ್ಣ
ಮೇಯರ್ ಮುತ್ತಣ್ಣ - ದ್ವಾರಕೀಶ್
ಶ್ರುತಿ ಸೇರಿದಾಗ - ಎಂ. ಎಸ್. ಉಮೇಶ್
ಶಂಕರ್ ಗುರು - ತೂಗುದೀಪ ಶ್ರೀನಿವಾಸ್, ವಜ್ರಮುನಿ
ಅನೇಕ ಚಿತ್ರಗಳಲ್ಲಿ - ನರಸಿಂಹ ರಾಜು
ಇನ್ನೂ ಅನೇಕ ಚಿತ್ರಗಳಲ್ಲಿ..ಅವರ ಹಾಸ್ಯ ಪ್ರಜ್ಞೆ ಅನಾವರಣಗೊಂಡಿದೆ 


ಅವರ ಹಾಸ್ಯ ಪ್ರಜ್ಞೆ, ಸಮಯೋಚಿತ ಸಂಭಾಷಣೆ ಹೇಳುವ ಶೈಲಿ ಬಹಳ ಸೊಗಸು..

ಅಣ್ಣಾವ್ರು ತುಂಟ ಪಾತ್ರಗಳನ್ನೂ ಕೂಡ ಲೀಲಾಜಾಲಾವಾಗಿ ಮಾಡುತಿದ್ದರು..ನಡಿಗೆ, ನಾಟ್ಯ, ವೇಷ ಭೂಷಣ..ಎಲ್ಲವು ಸೊಗಸು...ಮಗುವಿನ ಹಾಗೆ...


ಅದಕ್ಕೆ ಅಲ್ಲವೇ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಹಾಡಿದ್ದು..



ಎಂಥ ಸೊಗಸು ಮಗುವಿನ ಮನಸು...

No comments:

Post a Comment