Tuesday, November 1, 2011

ನಮ್ಮ ಅಣ್ಣ ಬಾಲಣ್ಣ ಜನ್ಮ ಶತಮಾನೋತ್ಸವ (2011)

ಹೆಮ್ಮೆಯ ಬಾಲಣ್ಣ
ಬಾಲಣ್ಣ ನಮ್ಮ ಜೊತೆ ಇದ್ದರು.....ಛೆ ಎಂಥ ಮಾತು...ನಮ್ಮ ಜೊತೆ ಸದಾ ಇರುವ ಅಪರೂಪದ ವ್ಯಕ್ತಿತ್ವ...


ಜೀವನದಲ್ಲಿ ಅನೇಕ ಪುಸ್ತಕಗಳನ್ನು ಓದುವುದಕ್ಕಿಂತ...ಬಾಲಣ್ಣನ ಸಿನಿಮಾಗಳು ಕೊಡುವ ಜ್ಞಾನ ಅದಕ್ಕಿಂತ ಅಧಿಕ...
ಇಂದಿಗೆ ಬಾಲಣ್ಣ ನಮ್ಮ ಕರುನಾಡ ಭೂಮಿಯನ್ನು ಬೆಳಗುವುದಕ್ಕೆ ಬಂದು ನೂರು ವರ್ಷಗಳಾದವು..
ನೂರು ಸಂಖ್ಯೆ ಬರಿ ಸಂಖ್ಯೆ ಮಾತ್ರ...ಆದ್ರೆ ಬಾಲಣ್ಣ ನಮ್ಮ ಬಾಳಿನ ಮೇಲೆ ಮಾಡಿರುವ ಹೆಗ್ಗುರುತು ಅಪಾರ..ಅವರ ಬಾಲ್ಯದ ಬಗ್ಗೆ, ಕಿವುಡುತನದ ಬಗ್ಗೆ, ಅಭಿಮಾನ್ ಸ್ಟುಡಿಯೋ ಕಟ್ಟಲು ಸಾಹಸ ಮಾಡಿದರ ಬಗ್ಗೆ ಸಾವಿರಾರು ಪುಟಗಳು ಸಿಗುತ್ತವೆ...

ಆದ್ರೆ ಅವರ ಚಿತ್ರ ಬದುಕಿನಲ್ಲಿ ಸಾಧಿಸಿದ ಪಟ್ಟ, ಸಣ್ಣ ಪಾತ್ರದಿಂದ ತ್ರಿವಿಕ್ರಮನಂತೆ ಬೆಳೆದ ಪರಿ ಎಂಥವರನ್ನು ಮಂತ್ರ ಮುಗ್ಧರನ್ನಾಗಿಸುತ್ತೆ 
ಅವರ ಪ್ರತಿ ಸಂಭಾಷಣೆಯಲ್ಲೂ ಇರುತಿದ್ದ ಶ್ರದ್ಧೆ, ಅನುಭವಿಸಿ ಮಾತಾಡುತ್ತಿದ್ದ ರೀತಿ, ರಾಗವಾಗಿ ಹೇಳುತಿದ್ದ ರೀತಿ...ಅವರಿಗೆ ಅವ್ರೆ ಸಾಟಿ...

ಬಂಗಾರದ ಮನುಷ್ಯ ಚಿತ್ರದ ರಾಚೂಟಪ್ಪ ಅಣ್ಣಾವ್ರ ರಾಜೀವನ ಪಾತ್ರದಷ್ಟೇ ಪರಿಣಾಮಕಾರಿ..ಈ ಚಿತ್ರ ಬಿಡುಗಡೆ ಆದ ಮೇಲೆ ಅನೇಕ ಧನವಂತರು ದಾನಶೀಲ  ಗುಣಗಳನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಅನ್ನುವ ಮಾತಿದೆ..
ಗಂಧದಗುಡಿ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯ ತಣ್ಣಗಿನ ಕ್ರೌರ್ಯ ತೋರಿಸುತ್ತೆ..
ಕಣ್ತೆರೆದು ನೋಡು ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಬೆಣ್ಣೆ ಮೇಲಿನ ಕೂದಲು ತೆಗೆಯುವಷ್ಟೇ ಸಲಿಸಾಗಿ ಮೋಸ ಮಾಡುತ್ತ ಹೋಗುತ್ತೆ..
ಚಂದವಳ್ಳಿಯ ತೋಟದಲ್ಲಿ ಅಣ್ಣ ತಮ್ಮನ ಮಧ್ಯೆ ತಂದು ಹಾಕಿ ಮನೆ ಮುರುಕನ  ಪಾತ್ರ ಕಣ್ಣಲ್ಲಿ ಕೋಪ ತರಿಸುತ್ತೆ..
ಗಾಂಧಿನಗರದ ಚಿತ್ರದಲ್ಲಿ ಬೇಜವಬ್ಧಾರಿ ತಂದೆಯ ಪಾತ್ರ..
ಭೂತಯ್ಯನ ಮಗ ಅಯ್ಯು ಚಿತ್ರದ ಸಂಸಾರದಲ್ಲಿ ಇದ್ದುಕೊಂಡು ಅವರಿಗೆ ಒಂದು ಗತಿ ತೋರಿಸುವ ಶಕುನಿ ಪಾತ್ರ..
ಒಂದೇ ಎರಡೇ..ಪ್ರತಿ ಪಾತ್ರದಲ್ಲೂ ಅವರ ಪಾತ್ರ ಜೀವನಕ್ಕೆ ಒಂದು ಪಾಠ...

ಕನ್ನಡಕ್ಕೆ ಇಬ್ಬರೇ ಅಣ್ಣ ಒಂದು ರಾಜಣ್ಣ ..ಇನ್ನೊದು ಬಾಲಣ್ಣ...
ಬಾಲಣ್ಣ ರಾಜಣ್ಣನಿಗೆ ಸಂಭಾಷಣೆ ತಿದ್ದುವ ಮೇಷ್ಟ್ರು ಆಗಿದ್ದರೆನ್ನುವುದು ಅತಿಶಯ ಅಲ್ಲ...ರಾಜಣ್ಣ ಅವ್ರೆ ಇದನ್ನು ಹಂಚಿಕೊಂಡಿದ್ದರು..

ಇಂತಹ ಮಹಾನ್ ಕಲಾವಿದ ನಮ್ಮ ನಾಡಿನಲ್ಲಿ ಇದ್ದರು ಎನ್ನುವುದೇ ನಮಗೆ ಹೆಮ್ಮೆ...
ನಾವು ಅವರ ಬದುಕಿಗೆ ಏನು ಮಾಡಲಿಲ್ಲ...ಆದ್ರೆ ಅದಕ್ಕಾಗಿ ಕೊರಗುವ ಬದಲು ....ಅವರ ಅಭಿನಯದ ಚಿತ್ರಗಳಿಂದ ನಮ್ಮ ಜೀವನ ಸುಧಾರಿಸಿಕೊಂಡರೆ...ನಾವು ಅವರ ಈ ಶತಮಾನೋತ್ಸವಕ್ಕೆ ಕೊಡುವ ದೊಡ್ಡ ಸನ್ಮಾನ ಅನ್ನುವ ಮಾತು ಹಾಗು ಇಂಗಿತ ನನ್ನದು...

9 comments:

  1. ಅಕ್ಷರಸಹ ನಿಜವಾದ ಮಾತು .... ಬಾಲಣ್ಣ ಅವರ ಮಾತು, ಮೌಲ್ಯಗಳು ಕಾಲವಾಗಿಲ್ಲಣ್ಣ ... ಅದು ಎಂದೆoದಿಗೂ ಚಿರ ಅಮರ

    ReplyDelete
  2. ಬಾಲಣ್ಣ ಅಮರ, ಅವರ ಮೌಲ್ಯಗಳು ಎಂದೆoದಿಗೂ ಚಿರ........

    ReplyDelete
  3. Hey Srikanth,

    Very true, Balanna is just NOT a person he is an institution.

    It is a pious occasion for us to inculcate the values.

    Long live Balanna !!

    ReplyDelete
  4. A true talent! alas we care only for the *stars*

    ReplyDelete
  5. ಧನ್ಯವಾದಗಳು ಗಿರಿ..
    ಹೌದು..ಬಾಲಣ್ಣ ಅಂಥಹ ಕಲಾವಿದರು ಯುಗಕ್ಕೆ ಒಬ್ಬರು...
    ಅಂಗವಿಹೀನತೆಯನ್ನೇ ತನ್ನ ದೊಡ್ಡ ಆಸ್ತಿ ಮಾಡಿಕೊಂಡು...ಬೆಳಗಿದ ಕಲಾವಿದ...
    ಅವರು ನಡೆದಾಡಿದ ಮಣ್ಣಿನಲ್ಲಿ ಕೆಲವು ಕ್ಷಣ ಕಳೆದೆ..ನಿಜವಾಗಲು ನನ್ನ ಜನ್ಮ ಸಾರ್ಥಕ ಅನ್ನಿಸಿತು..

    ReplyDelete
  6. ಧನ್ಯವಾದಗಳು ಸಂದೀಪ್..
    ಇವರೆಲ್ಲ ನಿಸ್ವಾರ್ಥ ಕಲಾ ಸೇವೆ ಮಾಡಿಕೊಂಡಿದ್ದರು ಹಂಗಾಗಿ ಬಾಲಣ್ಣ ಅಜರಾಮರ

    ReplyDelete
  7. ಪ್ರಸಾದ್ ನೀವು ಹೇಳುವುದು ಸರಿ..ಅವರೇ ಒಂದು ವಿಶ್ವವಿದ್ಯಾಲಯ...
    ಅವರ ಚಿತ್ರಗಳಿಂದ ಹಾಗು ಅಭಿನಯದ ಧಾಟಿಯಿಂದ ಕಲಿಯಬೇಕಾದ್ದು ಅಪಾರ..
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ..

    ReplyDelete
  8. ಅಶೋಕ್ ಅವರೇ
    ನಮ್ಮ ದೊಡ್ಡ ತಾರೆಗಳೆಲ್ಲ...ಕೇವಲ ನಕ್ಷತ್ರಗಳು...ಅವು ಕೇವಲ ರಾತ್ರಿ ಮಾತ್ರ ಬೆಳಗುತ್ತವೆ..
    ಬಾಲಣ್ಣ ಮುಂತಾದ ಸಹ ಕಲಾವಿದರು...ಸೂರ್ಯನಿದ್ದಂತೆ...ಸದಾ ಬೆಳಗುತ್ತಲೇ ಇರುತ್ತವೆ..ಅವಕ್ಕೆ ಯಾರ ಸಹಾಯವೂ ಬೇಡ..
    ಜನರ ಮಾನಸ ಸರೋವರದಲ್ಲಿ ಯಾವಾಗಲು ಅರಳಿ ನಿಂತಿರುವ ಕಮಲದ ದಳಗಳು...
    ನಿಮಗೆ ನಮನಗಳು..

    ReplyDelete
  9. ನಮಸ್ಕಾರ ಶ್ರೀ,

    ನಮ್ಮ ನಿಮ್ಮೆಲರ ಬಾಲಣ್ಣನಿಗೆ
    ಅತ್ಹ್ಮಿಯ ನಮಸ್ಕಾರಗಳುಮಾತು ಹುಟ್ಟು ಹಭದ ಹಾರ್ದಿಕ ಶುಭಾಶಯಗಳು
    ಮತ್ತೆ ಹುಟ್ಟಿಬ ಬಾಲಣ್ಣ

    ಇಂತಿ ನಿಮ್ಮ ಪ್ರೀತಿಯ ಅಭಿಮಾನಿ,
    ಸೋಮು

    ReplyDelete