ಅಭಿಮಾನಿ ದೇವರುಗಳ ದೇವರು
ದೇವರು ಯಾವಾಗಲು ಅಭೂತಪೂರ್ವ ಜೀವವನ್ನು ಒಮ್ಮೆ ಮಾತ್ರ ಸೃಷ್ಟಿ ಮಾಡುತ್ತಾನೆ..ಅಂತಹ ಒಂದು ಮುತ್ತು ನಮ್ಮ ರಾಜ್
ದೇವರು ಯಾವಾಗಲು ಅಭೂತಪೂರ್ವ ಜೀವವನ್ನು ಒಮ್ಮೆ ಮಾತ್ರ ಸೃಷ್ಟಿ ಮಾಡುತ್ತಾನೆ..ಅಂತಹ ಒಂದು ಮುತ್ತು ನಮ್ಮ ರಾಜ್
ಚಿತ್ರ - ನನ್ನ ಸ್ನೇಹಿತ ವಿಕ್ರಂ ಕೃಪೆ |
ರಾಜಕುಮಾರ್ ಒಂದು ದಂತಕಥೆ ಅನ್ನುವದಕ್ಕಿಂತ ಕಥೆಗಳ ದಾದಾ ಆಗಿ ಬಿಟ್ರು. ಅವರಲ್ಲಿನ ಪ್ರತಿಭೆಯನ್ನು ಹೊರಗೆ ತೆಗೆಯಲು ಶ್ರಮಿಸಿದ ಎಲ್ಲ ತೆರೆಯ ಹಿಂದಿನ ದಾದಗಳಿಗೆ ಒಂದು ನಮಿಸುವ ಒಂದು ಸಣ್ಣ ಪ್ರಯತ್ನ. ಇದು ನನ್ನ ಆಯ್ಕೆ, ಇದರಲ್ಲಿ ಯಾವ ಭೇದ-ಭಾವ ಇಲ್ಲ, ನನ್ನ ಅನಿಸಿಕೆ, ನನ್ನ ಅಭಿಪ್ರಾಯ ಮಾತ್ರ ಅಷ್ಟೇ
ನಿರ್ದೇಶಕರು
೧. ಎಚ್. ಎಲ್. ಏನ್. ಸಿಂಹ - ಕನ್ನಡಾಂಬೆಯಾ ಸಾಗರದಲ್ಲಿ ಹೆಕ್ಕಿ ತೆಗೆದ ಅನರ್ಘ್ಯ ರತ್ನವನ್ನು ಪರಿಚಯಿಸಿದ ಮಹನೀಯ
ಬೇಡರಕಣ್ಣಪ್ಪ, ಅಬ್ಬಾ ಆ ಹುಡುಗಿ, ತೇಜಸ್ವಿನಿ
೨. ಹುಣುಸೂರು ಕೃಷ್ಣಮೂರ್ತಿ : ಇವರು ರಾಜನ ಎಲ್ಲ ಮುಖಗಳನ್ನು ಪರಿಚಯಿಸಿದ ಪುಣ್ಯಾತ್ಮ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ, ಸಾಹಸಮಯ ಎಲ್ಲಾ ಪಾತ್ರಗಳಲ್ಲಿ ರಾಜನ ಪ್ರತಿಭೆಯನ್ನ ಅನಾವರಣ ಮಾಡಿದರು
ಕೃಷ್ಣ ಗಾರುಡಿ,ಆಶಾಸುಂದರಿ,ಸತ್ಯ ಹರಿಶ್ಚಂದ್ರ,ಶ್ರೀ ಕನ್ನಿಕಾಪರಮೇಶ್ವರಿ ಕಥೆ,ದೇವರ ಗೆದ್ದ ಮಾನವ,ಭಕ್ತ ಕುಂಬಾರ,ಬಬ್ರುವಾಹನ
೩.ಬಿ. ಆರ್. ಪಂತುಲು: ರಾಜನ ಅಭಿನಯಕ್ಕೆ ಒರೆ ಹಚ್ಚುವ ಪಾತ್ರಗಳಿಗೆ ಶ್ರುತಿ ಹಿಡಿದ ನಿರ್ದೇಶಕ
ಕಿತ್ತೂರು ಚೆನ್ನಮ್ಮ,ಗಾಳಿ ಗೋಪುರ,ಎಮ್ಮೆ ತಮ್ಮಣ್ಣ,ಗಂಗೆ ಗೌರಿ,ಬೀದಿ ಬಸವಣ್ಣ,ಅಮ್ಮ,ಗಂಡೊಂದು ಹೆಣ್ಣಾರು,ಶ್ರೀ ಕೃಷ್ಣದೇವರಾಯ
೪. ದೊರೈ ಭಗವಾನ್ ಬಾಂಡ್ ಮಾದರಿ ಪತ್ರಗಳು, ತ್ಯಾಗಮಯ ಪತ್ರಗಳು, ಸಂಗೀತ ಪ್ರಧಾನ ಪಾತ್ರಗಳು ಮೂಡಿಸಿರುವ ಛಾಪನ್ನು ನೋಡಿಯೇ ತೀರಬೇಕು
ಜೇಡರ ಬಲೆ,ಗೋವಾದಲ್ಲಿ ಸಿ.ಐ.ಡಿ. ೯೯೯,ಆಪರೇಷನ್ ಜ್ಯಾಕ್ಪಾಟ್ ಸಿ.ಐ.ಡಿ. ೯೯೯,ಕಸ್ತೂರಿ ನಿವಾಸ,ಪ್ರತಿಧ್ವನಿ,ಎರಡು ಕನಸು,ಗಿರಿಕನ್ಯೆ,ಆಪರೇಷನ್ ಡೈಮಂಡ್ ರಾಕೆಟ್,ನಾನೊಬ್ಬ ಕಳ್ಳ,ವಸಂತ ಗೀತ,ಹೊಸ ಬೆಳಕು,ಸಮಯದ ಗೊಂಬೆ,ಯಾರಿವನು?,ಜೀವನ ಚೈತ್ರ,ಒಡ ಹುಟ್ಟಿದವರು
೫. ವಿಜಯ್ : ಈ ಮಹನೀಯ ೧೦೦% ಯಶಸ್ಸು ಕಂಡ ನಿರ್ದೇಶಕ. ಅವರ ಚಿತ್ರಗಳು ಎಲ್ಲ ಆಯಾಮಗಳನ್ನು ಹೊಂದಿತ್ತು.
ಗಂಧದ ಗುಡಿ,ಶ್ರೀನಿವಾಸ ಕಲ್ಯಾಣ,ಮಯೂರ,ನಾ ನಿನ್ನ ಮರೆಯಲಾರೆ,ಬಡವರ ಬಂಧು,ಸನಾದಿ ಅಪ್ಪಣ್ಣ,ಹುಲಿಯ ಹಾಲಿನ ಮೇವು,ನೀ ನನ್ನ ಗೆಲ್ಲಲಾರೆ,ಭಕ್ತ ಪ್ರಹ್ಲಾದ
೬. ಸಿದ್ದಲಿಂಗಯ್ಯ : ಬಂಗಾರ ಛಾಪನ್ನು ಮೂಡಿಸಿದ ಮಹಾನ್ ನಿರ್ದೇಶಕ
ಮೇಯರ್ ಮುತ್ತಣ್ಣ,ಬಾಳು ಬೆಳಗಿತು,ನಮ್ಮ ಸಂಸಾರ,ತಾಯಿ ದೇವರು,ನ್ಯಾಯವೇ ದೇವರು,ಬಂಗಾರದ ಮನುಷ್ಯ,ದೂರದ ಬೆಟ್ಟ
ಇವರ ಜೊತೆ ವೈ.ಆರ್. ಸ್ವಾಮಿ, ಸೋಮಶೇಕರ್, ಸಿಂಗೀತಂ ಶ್ರೀನಿವಾಸರಾವ್, ಪುಟ್ಟಣ್ಣ ಮುಂತಾದ ಹಲವಾರು ಮಹಾನ್ ಜೀವಗಳು ಇದ್ದಾರೆ
ಖಳನಾಯಕರು
೧. ವಜ್ರಮುನಿ
ಮಯೂರ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಶಂಕರ್ ಗುರು, ರವಿ ಚಂದ್ರ, ಸಂಪತ್ತಿಗೆ ಸವಾಲ್, ಬಹಾದ್ದೂರ್ ಗಂಡು, ಮುಂತಾದ ಅನೇಕ ಸಿನೆಮಾಗಳಲ್ಲಿ ರಾಜಣ್ಣ-ಮತ್ತು-ವಜರಮುನಿ ಜುಗಲ್ ಬಂಡಿ ನೋಡಿಯೇ ಆನಂದಿಸಬೇಕು
೨. ತೂಗುದೀಪ ಶ್ರೀನಿವಾಸ್ - ರಾಜಣ್ಣ ಮತ್ತು ತೂಗುದೀಪ ಜೀವದ ಗೆಳೆಯರು ತೂಗುದೀಪ ಸಿನೆಮಾದಿಂದ ಶ್ರೀನಿವಾಸ್ ಕೊನೆ ಉಸಿರು ಎಳೆಯುವ ತನಕ ರಾಜಣ್ಣ ಮಾಡಿದ ಎಲ್ಲ ಚಿತ್ರಗಳಲ್ಲೂ ಇದ್ದರು, ರಾಜಣ್ಣ ಮಾಡಿದ ಸಹಾಯಕ್ಕೆ ಶ್ರೀನಿವಾಸ್ ಅವರ ಮನೆಗೆ ಮು. ಪ. ನಿಲಯ ಅಂತ ಇತ್ತಿದ್ದ್ದರೆ ಅಂದ್ರೆ ಮುತ್ತುರಾಜ್-ಪಾರ್ವತೀ ನಿಲಯ ಅಂತ.
ಶಂಕರ್ ಗುರು, ತಾಯಿಗೆ ತಕ್ಕ ಮಗ, ಜೀವನ ಚೈತ್ರ, ಕಾಮನಬಿಲ್ಲು ಮುಂತಾದ ಚಿತ್ರಗಳು
ಸಹನಟರು
೧. ದ್ವಾರಕೀಶ್ - ಮೆಯೇರ್ ಮುತ್ತಣ್ಣ, ಬಂಗಾರದಮನುಷ್ಯ, ಗಾಂಧಿನಗರ ಮುಂತಾದ ಚಿತ್ರಗಳು
೨. ನರಸಿಂಹರಾಜು - ಲೆಕ್ಕವಿಲ್ಲದಷ್ಟು ಚಿತ್ರಗಳು ಇಬ್ಬರ ನಟನೆ ಅಮೋಘ
ಚಾರಿತ್ರಿಕ ಸಹನಟರು
೧. ಬಾಲಣ್ಣ - ಬಂಗಾರದ ಮನುಷ್ಯ, ಶಂಕರ್ ಗುರು, ಕಾಮನ ಬಿಲ್ಲು, ಭಾಗ್ಯದ ಲಕ್ಷ್ಮಿ ಬಾರಮ್ಮ, ಕಣ್ತೆರೆದು ನೋಡು, ಅಪೂರ್ವ ಸಂಗಮ, ತ್ರಿಮೂರ್ತಿ, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ ಅನೇಕ ಚಿತ್ರಗಳು
೨. ಅಶ್ವಥ್ ಕೆ. ಎಸ - ಕಸ್ತೂರಿ ನಿವಾಸ, ಎರಡು ಕನಸು, ಬಡವರ ಬಂಧು, ಕಾಮನಬಿಲ್ಲು, ಹೊಸಬೆಳಕು, ಬಂಗಾರದ ಪಂಜರ, ಗಾಂಧಿನಗರ, ಚಲಿಸುವ ಮೋಡಗಳು, ಮುಂತಾದ ಚಿತಗಳು
ಅಮ್ಮನ ಹಾಗು ಅಕ್ಕನ ಪಾತ್ರದಲ್ಲಿ
೧. ಪಂಡರಿ ಬಾಯಿ - ಇದರ ಬಗ್ಗೆ ಮತ್ತೆ ಬೇಡ, ರಾಜಣ್ಣ ನಾಯಕಿ ಯಾಗಿ, ಅಮ್ಮನಾಗಿ, ಅಜ್ಜಿ ಯಾಗಿ, ಆವರ ನಟನೆ...ಅದು ಮಾತೃ ಹೃದಯದವರಿಗೆ ಮಾತ್ರ ಸಾಧ್ಯ. ಕನ್ನಡ ಸಿನಿಮಾ ಜಗತ್ತಿನ ಅಮ್ಮ ಈ ಮಹಾ ತಾಯಿ.
೨. ಆದವಾನಿ ಲಕ್ಷ್ಮಿ ದೇವಿ : ಬಂಗಾರದ ಮನುಷ್ಯ, ಎರಡು ಕನಸು, ಚಲಿಸುವ ಮೋಡಗಳು, ಮಲ್ಲಮನ ಪವಾಡ, ಜ್ವಾಲಾಮುಖಿ ಮುಂತಾದ ಚಿತ್ರಗಳು
ನಾಯಕಿಯರು
೧. ಅಂಬಿಕ - ಸುಮಾರು ಅಣ್ಣಾವ್ರಿಗೆ ೫೦ ವರ್ಷ ಆದಾಗ ಅಂಬಿಕ ನಾಯಕಿಯಗಿದ್ದು, ಆಗ ಆಕೆಗೆ ಸುಮಾರಿ ೨೩-೨೫ ವರ್ಷ, ಆ ವ್ಯತ್ಯಾಸ ಕಾಣುವುದಿಲ್ಲ..ಸ್ನಿಗ್ದ ಸೌಂದರ್ಯ, ಅಭಿನಯ ಕಣ್ಣಿಗೆ ಹಬ್ಬ - ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ,ಎರಡು ನಕ್ಷತ್ರಗಳು, ಅಪೂರ್ವ ಸಂಗಮ
೨. ಗೀತ : ಸುಂದರ ನಗು, ಸುಂದರ ಅಭಿನಯ ಸರಿ ಸಮವಾಗಿತ್ತು
ಧೃವತಾರೆ, ಅನುರಾಗ ಅರಳಿತು,ಶೃತಿ ಸೇರಿದಾಗ, ದೇವತಾ ಮನುಷ್ಯ,ಆಕಸ್ಮಿಕ
೩. ಮಾಧವಿ : ಬೊಗಸೆ ಕಂಗಳ ಚೆಲುವೆ, ಅಣ್ಣಾವ್ರ ಎತ್ತರಕ್ಕೂ ಇರುತ್ತಿದ್ದ ಅಭಿನಯ ಒಳ್ಳೆಯ ಜೋಡಿ agittu
ಹಾಲು ಜೇನು,ಭಾಗ್ಯದ ಲಕ್ಷ್ಮಿ ಬಾರಮ್ಮ,ಅನುರಾಗ ಅರಳಿತು,ಶೃತಿ ಸೇರಿದಾಗ,ಜೀವನ ಚೈತ್ರ,ಆಕಸ್ಮಿಕ,ಒಡ ಹುಟ್ಟಿದವರು
೪. ಸರಿತಾ: ಭಾವನೆಗಳು ತುಂಬಿರುವ ಕಣ್ಣಗಳು, ಸೊಗಸಾದ ಅಭಿನಯ, ಭಾವಬಿನಯದಲ್ಲಿ ಅಣ್ಣವರಿಗೆ ಸೆಡ್ಡು ಹೊಡೆದು ನಿಲ್ಲುತ್ತಿದ ರೀತಿ - ಕೆರಳಿದ ಸಿಂಹ,ಹೊಸ ಬೆಳಕು,ಚಲಿಸುವ ಮೋಡಗಳು,ಕಾಮನ ಬಿಲ್ಲು,ಭಕ್ತ ಪ್ರಹ್ಲಾದ
೫. ಭಾರತೀ, ಜಯಂತಿ, ಲೀಲಾವತಿ, ಆರತಿ
ಇವರೆಲ್ಲ ರಾಜಣ್ಣನ ಅಭಿನಯಕ್ಕೆ ಸರಿ ಸಾಟಿಯಾಗಿ ನಿಲ್ಲುತ್ತಿದ ಕಲಾ ಕುಸುಮಗಳು
ಹಾಡುಗಳು, ಸಂಭಾಷಣೆ : ಚಿ. ಉದಯಶಂಕರ್, ಹುಣುಸೂರು ಕೃಷ್ಣಮೂರ್ತಿ
ಸಂಗೀತ :
ರಾಜನ-ನಾಗೇಂದ್ರ - ಸುಮುಧುರ ಹಾಡುಗಳು - ಗಂಧದ ಗುಡಿ, ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ಶ್ರೀನಿವಾಸ ಕಲ್ಯಾಣ, ಗಿರಿ ಕನ್ಯೆ, ಎರಡು ಕನಸು ಅನೇಕ ಚಿತ್ರಗಳು
ಉಪೇಂದ್ರ ಕುಮಾರ - ಸಿನಿಮಾಕ್ಕೆ ಜೀವ ತುಂಬುತ್ತಿದ್ದ ಸಂಗೀತ, ಪ್ರಯೋಗವಿಲ್ಲದೆ, ಇತಿ ಮಿತಿಯಲ್ಲೇ ಹಾಡುಗಳನ್ನು ನೀಡಿದ ಮಹನೀಯ - ಶಂಕರ್ ಗುರು, ಅನುರಾಗ ಅರಳಿತು, ಕಟಾರಿವೀರ,. ಮುಂತಾದ ಚಿತ್ರಗಳು
ಜಿ. ಕೆ. ವೆಂಕಟೇಶ್ - ಇಡಿ ಚಿತ್ರ ಜಗತ್ತು ಅಣ್ಣವರು ಅಂತ ಇದ್ರೆ ಈ ಮಹಾತ್ಮಾ ಒಬ್ಬರೇ, ತಮ್ಮಯ್ಯ ಅಂತ ಕರಿತ ಇದ್ದದ್ದು. ಅವರ ಗಾನ ಸುಧೆಯನ್ನು ಹೊರಗೆ ತಂದವರು. ಓಹಿಲೇಶ್ವರ, ಮಹಿಷಾಸುರ ಮರ್ಧಿನಿ ಯಲ್ಲಿ ಹಾಡಿಸಿದ ಇವರು ಸಂಪತ್ತಿಗೆ ಸವಾಲ್ ಚಿತ್ರದಿಂದ ಮಹಾನ್ ಗಾಯನ ಪ್ರತಿಬೆಯನ್ನು ಹೊರಗೆ ಹಾಕಿದರು. ಸನಾಧಿ ಅಪ್ಪಣ್ಣನ ಸಂಗೀತದ ಬಗ್ಗೆ ಮಾತಾಡಲು ತಿಂಗಳು ಸಾಲದು.
ಎಲ್ಲದಕ್ಕೂ ಬೆಂಬಲವಾಗಿದ್ದ ಹಾಗೂ ಅವರ ಸಿನಿಮಾ ಇಮೇಜ್ ಅನ್ನು ಕಾಪಾಡಿದ ಇಬ್ಬರು ಮಹನೀಯರಿಗೆ ಇದು ಒಂದು ನಮನ...ಅವರುಗಳು ಯಾರು ಎಂದರೆ
ವರದರಾಜ್ - ರಾಜಣ್ಣ ಅವರ ತಮ್ಮ, ಪ್ರತಿ ಪಾತ್ರದ ಆಯ್ಕೆ, ಸಂಭಾಷಣೆಯಲ್ಲಿ, ಕಥೆಗಳ ಆಯ್ಕೆಯಲ್ಲಿ ಇವರ ಮಾತಿಲ್ಲದೆ ರಾಜಣ್ಣ ಏನು ಮಾಡುತ್ತಿರಲಿಲ್ಲ
ಚಿ. ಉದಯಶಂಕರ್ : ರಾಜಣ್ಣ ಇಮೇಜ್ ತಕ್ಕ ಹಾಗೆ ಸಂಭಾಷಣೆ, ಹಾಡುಗಳು, ಕಥೆಗಳು ಹೆಣೆಯುತ್ತಿದ ರಾಜಣ್ಣನ ಆಸ್ಥಾನದ ಕವಿ, ಕಥೆಗಾರ
ಎಷ್ಟು ಬರೆದರೂ ಸಮಾಧಾನ ಆಗೋಲ್ಲ - ಕಂಗಳು ತುಂಬಿ ಬಂತು, ಇಲ್ಲಿಗೆ ನಿಲ್ಲಿಸ್ತಾ ಇದ್ದೀನಿ...