Wednesday, April 12, 2017

ಅಣ್ಣಾವ್ರ ಡೆಡ್ಲಿ ಎಂಟ್ರೀಸ್.. ಪುಣ್ಯ ದಿನ

ಭಾರತೀಯ ಚಿತ್ರಗಳಲ್ಲಿ ನಾಯಕನ ಅಥವಾ ಖಳನಾಯಕನ ಆರಂಭಿಕ ದೃಶ್ಯಗಳು ಚಿತ್ರದ ಯಾವುದೇ ಹಂತದಲ್ಲಿ ಮಜಾ
ಕೊಡುತ್ತದೆ.  ಮತ್ತೆ ಚಿತ್ರ ನಟ ನಟಿಯರನ್ನು ಆರಾಧಿಸುವ ನಮ್ಮ ದೇಶದಲ್ಲಿ ಕೆಲವೊಮ್ಮೆ ಇದು ತುಸು ಹೆಚ್ಚೇ ಮನಸ್ಸಿಗೆ ಹಿತಕೊಡುತ್ತದೆ. ಹಾಡಿನ ಮೂಲಕ, ಹಾಸ್ಯದ ದೃಶ್ಯದ ಮೂಲಕ, ಹೊಡೆದಾಟದ ಮೂಲಕ.. ಇಲ್ಲವೇ ತುಸು ಭಾಷಣ ಅಥವಾ ಹಿತವಚನ ನೀಡುವ ದೃಶ್ಯಗಳ ಮೂಲಕ ಅವರ ಆರಂಭದ ದೃಶ್ಯಗಳು ಮೂಡಿಬರುವುದು ಸಹಜವಾಗಿದೆ.

ಕರುನಾಡಿನ ಹೆಮ್ಮೆಯ ನಟ ಜೊತೆಗೆ ಚಿತ್ರಜಗತ್ತಿನಲ್ಲಿ ತನ್ನದೇ ಅಭಿನಯ, ಗಾಯನದಿಂದ ತಮ್ಮದೇ ಸ್ಥಾನಗಳಿಸಿ ತಾವೇ ಹೇಳುವ  ಅಭಿಮಾನಿ ದೇವರುಗಳ ಹೃದಯ ಸಿಂಹಾಸನದಲ್ಲಿ ಅನಭಿಷಿಕ್ತ ಚಕ್ರವರ್ತಿಯಾಗಿ ರಾರಾಜಿಸುತ್ತಿರುವ ಅಣ್ಣಾವ್ರ ಕೆಲವು ಚಿತ್ರಗಳ ಆರಂಭಿಕ ದೃಶ್ಯಗಳು ಪುಟ್ಟ ವಿವರ ನನ್ನ ಮನಸ್ಸಿಗೆ ಕಂಡಂತೆ ನಿಮ್ಮ ಮುಂದೆ:-

೧)  ಸಾಹಸಮಯ "ಶಂಕರ್ ಗುರು"
 ಚಿತ್ರಪ್ರೇಮಿಗಳ ಹೃದಯದಲ್ಲಿ ಹಸಿರಾಗಿ ಉಳಿದಿರುವ ಚಿತ್ರ.. ಇದರಲ್ಲಿ ಅಣ್ಣಾವ್ರು ಮೂರು ಪಾತ್ರಗಳು..
ಚಿತ್ರ ಕೃಪೆ : ಗೂಗಲೇಶ್ವರ 

ಮೊದಲನೇ ಪಾತ್ರ.. ಹೆಂಡತಿಯನ್ನು   ಬಹುವಾಗಿ ಪ್ರೀತಿಸುವ ರಾಜಶೇಖರ್.. ಹೆಂಡತಿ ರಚಿಸಿದ ಬಣ್ಣ ತುಂಬಿದ ಚಿತ್ರವನ್ನು ಕಂಡು ಖುಷಿ ಪಟ್ಟು.. ಈಗ ನನ್ನ ಚಾನ್ಸ್ ಎನ್ನುತ್ತಾ.. ಕುಂಕುಮದ ಭರಣಿ ತೆಗೆದು ಹಣೆಗೆ ಕುಂಕುಮ ಇಡುವ ದೃಶ್ಯ.. ಅದ್ಭುತವಾಗಿ ಮೂಡಿಬಂದಿದೆ.. ನಂತರ "ಚೆಲುವೆಯ ನೋಟ ಚೆನ್ನಾ" ಹಾಡು

ಎರಡನೇ ಪಾತ್ರ. ಸಂಯಮ ಸ್ವಭಾವದ ಶಂಕರ್.. ನಾಯಕಿ ಜಯಮಾಲಾ ಅವರನ್ನು ಪೋಕ್ರಿಗಳು ಛೇಡಿಸುತ್ತಿದ್ದಾಗ.. "ಅಡ್ರೆಸ್ಸ್ ಬೇಕಾ ನಾ ಕೊಡುತ್ತೇನೆ" ಎಂದು ಹೊಡೆದಾಡಿ ನಾಯಕಿಯನ್ನು ರಕ್ಷಿಸುತ್ತಾರೆ.. ಸೌಮ್ಯ ಸ್ವಭಾವದಲ್ಲಿ ಮಾತಾಡುತ್ತಲೇ, ಲೀಲಾಜಾಲವಾಗಿ ಹೊಡೆದಾಟದ ದೃಶ್ಯಕ್ಕೆ ನುಗ್ಗುವ ಅಣ್ಣಾವ್ರು ಇಷ್ಟವಾಗುತ್ತಾರೆ

ಅಣ್ಣಾವ್ರ ಈ ಹಾಸ್ಯ ತುಂಬಿದ ಪಾತ್ರ "ಗುರು" ಬಹುಶಃ ಯಾರೂ ಮಾಡಲಿಕ್ಕೆ ಆಗೋದಿಲ್ಲ ಅನ್ಸುತ್ತೆ.. ನಾಟಕದ ಪಾತ್ರದ ಅಭ್ಯಾಸ ಎಂದು ವಕೀಲ ಅಪ್ಪನ ಮುಂದೆ ಕೊಲೆಗಡುಕನಾಗಿ ಬರುವ ಪಾತ್ರ.. ಅದ್ಭುತವಾಗಿ ಮೂಡಿ ಬಂದಿದೆ.

೨) ಮನಸ್ಸನ್ನು ಸುಧಾರಿಸುವ ಗಿರಿ ಕನ್ಯೆ
ಗುಪ್ತಗಾಮಿನಿಯಾಗಿ ಮನುಜನ ದುರಾಸೆ, ಆಕ್ರಮಣ, ವಂಚನೆ ಇದನ್ನೆಲ್ಲಾ ಕೂಡಿಸಿಕೊಂಡು ಬರುವ ಹಾಡು "ಏನೆಂದು ನಾ ಹೇಳಲಿ.. ಮಾನವನಾಸೆಗೆ ಕೊನೆಯೆಲ್ಲಿ" ಚಿತ್ರೀಕರಣ, ಸಾಹಿತ್ಯ, ಸಂಗೀತ, ಹಾಡುಗಾರಿಕೆ ಮತ್ತೆ ಅಣ್ಣಾವ್ರ ಅಭಿನಯ ಸೊಗಸಾಗಿದೆ.
ಚಿತ್ರ ಕೃಪೆ : ಗೂಗಲೇಶ್ವರ 


೩) ಆಡುವ ಸಮಯದ ಗೊಂಬೆ
ನಮ್ಮ ಉಪಾಯಗಳು ಸಿದ್ಧತೆಗಳು ಏನೇ ಇದ್ದರೂ, ಮೇಲೆ ಕೂತಿರುವ ಆ ಮಾಯಗಾರನ ತಲೆಯಲ್ಲಿ ಏನು ಇರುತ್ತದೆಯೋ ಅದೇ ನೆಡೆಯುವುದು.. ಇದರ ಬುನಾದಿಯ ಮೇಲೆ ಬರುವ "ಚಿನ್ನದ ಗೊಂಬೆಯಲ್ಲ" ಹಾಡು ನಂತರ ಲಾರಿಯಲ್ಲಿ ಕುಳಿತು ತನ್ನ ಬಾಲ್ಯದ ನೆನಪನ್ನು ಮಾಡಿಕೊಳ್ಳುತ್ತಾ, ದಾರಿಯಲ್ಲಿ ಒಬ್ಬ ಹುಡುಗನನ್ನು ಕಳ್ಳರಿಂದ ರಕ್ಷಿಸಿ ಮನೆಗೆ ಬಂದಾಗ.. ತಾಯಿ ಕೇಳುತ್ತಾಳೆ ಯಾಕೆ ಗುರು ತಡವಾಯಿತು "ಏನು ಮಾಡೋದಮ್ಮ ದಾರಿಯಲ್ಲಿ ಸಿಗುವ ನಾಯಿಗಳು, ಎಮ್ಮೆಗಳು, ದನಗಳು ನನ್ನಂತೆ ಮನೆ ಬಿಟ್ಟು ಓಡಿ ಬಂದ ಅನಾಥ ಮಕ್ಕಳು ಇವರನ್ನೆಲ್ಲಾ ಮನೆಗೆ ಸೇರಿಸಿ ಮನೆಗೆ ಬರುವುದು ತಡವಾಯಿತು" ಸರಳ  ಮಾತುಗಳಲ್ಲಿ ಜೀವನದ ಸೂತ್ರವನ್ನು ಹೇಳುವ ಅಣ್ಣಾವ್ರು ಇಷ್ಟವಾಗುತ್ತಾರೆ.
ಚಿತ್ರ ಕೃಪೆ : ಗೂಗಲೇಶ್ವರ 

೪) ತಾಯಿಯ ಅನುರಾಗ.. ಅನುರಾಗ ಅರಳಿತು
ತಾಯಿ ಈ ಪಾತ್ರ ಅಣ್ಣಾವ್ರ ಚಿತ್ರದಲ್ಲಿ ಯಾವಾಗಲೂ ವಿಶೇಷ... ತನ್ನ ತಾಯಿಗೆ ಆರೋಗ್ಯದ ಸಮಸ್ಯೆಯನ್ನು ಶ್ರೀಕಂಠನ ಮುಂದೆ ಹೇಳಿಕೊಳ್ಳದೆ  ಬದಲಿಗೆ ಆ ಮಹಾದೇವನನ್ನು ಹೋಗುಳುತ್ತಾ "ಶ್ರೀಕಂಠ ವಿಷಕಂಠ" ಹಾಡಲ್ಲಿ ಅಣ್ಣಾವ್ರ ಅಭಿನಯ ಸೊಗಸು. ಅದರಲ್ಲೂ ಉರುಳು ಸೇವೆ ಮಾಡುತ್ತಾ ದೇವಸ್ಥಾನದ ಮುಂದೆ ಕುಳಿತಾಗ ಕಾಣುವ ಅವರ ಮುಖಭಾವ ಮತ್ತು ದೇಹ ಭಾಷೆ ನನಗೆ ಯಾವಾಗಲೂ ಇಷ್ಟ.. ಮಹಾದೇವನಿಗೆ ಅಭಿಷೇಕವಾಗುತ್ತಿರುವಾಗ ಅವರು ಹಾಡುವ ಆಲಾಪ ಭಕ್ತಿರಸ ಹೊಮ್ಮಿಸುತ್ತದೆ.
ಚಿತ್ರ ಕೃಪೆ : ಗೂಗಲೇಶ್ವರ 

೫) ಘರ್ಜಿಸುವ ಹಿರಣ್ಯ - ಭಕ್ತ ಪ್ರಹ್ಲಾದ 
ಏನೂ ಹೇಳಲಿ.. ಮನಸ್ಸು ತುಂಬಿ ಬರುತ್ತದೆ.. ತನ್ನ ಅಪ್ಪ ಮಾಡುತ್ತಿದ್ದ ಪೌರಾಣಿಕ ಪಾತ್ರಗಳನ್ನು ಕಂಡು ಅದನ್ನು ತಮ್ಮೊಳಗೆ ತುಂಬಿಕೊಂಡು ಅದಕ್ಕೆ ಒಂದು ಗೌರವ ತಂದು ಕೊಟ್ಟ ಅಭಿನಯ.. "ಪ್ರಿಯದಿಂ ಬಂದು ಚತುರ್ಮುಖನ್"   ಈ ಪುಟ್ಟ ಮಟ್ಟಿನ ಜೊತೆಯಲ್ಲಿ ಶುರುವಾಗುವ ದೃಶ್ಯ.. ಆ ದೈತ್ಯನ ಭವ್ಯತೆಯನ್ನು ಎತ್ತಿ ನಿಲ್ಲಿಸುತ್ತದೆ ಅಣ್ಣಾವ್ರ ಅಭಿನಯ.. ನಾವು                       ಹಿರಣ್ಯಕಶಿಪುವನ್ನು ನೋಡಿಲ್ಲ.. ಆದರೆ ಅಣ್ಣಾವ್ರನ್ನು ನೋಡಿದ ಮೇಲೆ.. ಸ್ವತಃ ಹಿರಣ್ಯಕಶಿಪು ಬಂದರೂ ಮಂಕಾಗುತ್ತಾರೇನೋ.. 
ಚಿತ್ರ ಕೃಪೆ : ಗೂಗಲೇಶ್ವರ 
ಹೀಗೆ ಅಣ್ಣಾವ್ರ ಹಲವಾರು ಚಿತ್ರಗಳ ಆರಂಭಿಕ ದೃಶ್ಯಗಳು, ಹಾಡುಗಳು ಜೀವನಕ್ಕೆ ಬೇಕಾಗುವ ಯಾವುದೋ ಒಂದು ಸೂತ್ರವನ್ನು ನೆನಪಿಸಿ ಕಳಿಸಿ ಕೊಡುವ ಪಠ್ಯ ಪುಸ್ತಕದಂತಿದೆ..

ಅಣ್ಣಾವ್ರ ಚಿತ್ರ ಪಾತ್ರಗಳನ್ನ ನೋಡುತ್ತಾ ಬೆಳೆದ ನನಗೆ.. ಜೀವನದ ಪರಿಸ್ಥಿತಿಯನ್ನು ಎದುರಿಸಲು ಗೊಂದಲವಾದಾಗ.. ಅವರ ಯಾವುದೋ ಒಂದು ಚಿತ್ರ ನೋಡಿದರೆ ಸಾಕು.. ಸಮಸ್ಯೆಗಳು ವಾಸುದೇವ ಶಿಶು ಕೃಷನನ್ನು ಬುಟ್ಟಿಯಲ್ಲಿ ತಲೆಯ ಮೇಲೆ ಇಟ್ಟುಕೊಂಡು ಬರುವಾಗ ಯಮುನಾ ನದಿ ದಾರಿ ಬಿಡುವಂತೆ.. ಸದ್ದಿಲ್ಲದೇ ಪಕ್ಕಕ್ಕೆ ಹೋಗಿ.. ಆ ಸಮಸ್ಯೆಗಳನ್ನು ನಿವಾರಿಸುವ ಉಪಾಯಗಳು ಹೊರ ಹೊಮ್ಮುತ್ತವೆ 

ಅಣ್ಣಾವ್ರ ಪುಣ್ಯ ದಿನವಿಂದು.. ಅವರ ನೆನಪಲ್ಲಿ ಒಂದು ಲೇಖನ ಅವರ ಕೋಟಿಗಟ್ಟಲೆ ಅಭಿಮಾನಿ ದೇವರುಗಳ ಮಡಿಲಿಗೆ:-)

5 comments:

  1. ಕಣ್ತುಂಬಿ ಬಂತು.... ಯಾವುದೇ ಪಾತ್ರವಾದರೂ ಆವಾಹಿಸಿಕೊಂಡು ಪಾತ್ರವೇ ಆಗಿ ಬಿಡುತ್ತಿದ್ದ ಮಹಾನ್ ನಟ ನಮ್ಮ ರಾಜ್ .. ಸಿನೆಮಾ ಚರಿತ್ರೆಯಲ್ಲಿ ಅಜರಾಮರ.. ಅವರ ಪುಣ್ಯ ದಿನದಂದು ಈ ಪದ ನಮನ ಅರ್ಥಪೂರ್ಣ.. ತುಂಬಾ ಇಷ್ಟವಾಯಿತು.ಅಭಿನಂದನೆಗಳು ಶ್ರೀಕಾಂತ್!!

    ReplyDelete
    Replies
    1. Dhanyavadagalu madam...howdu annavru yuga purusha

      Delete
  2. Super explanation shri anna.. Annawra cinema manaranjane matra agade adondu adhyayana waagi eduraguwa samasye galige daari torisuwa daarideepawagide annuwa nimm maatu nijakku arthapoorna.. Olleya vivaraneyondige Uttama barawanige ..����

    ReplyDelete
  3. ಹೀರೋ ಅಂದರೆ ರಾಜ್ ಅವರು. ಅಬ್ಬ ಅದೇನು ವ್ಯಕ್ತಿತ್ವ, ತೆರೆ ಮೇಲೆ ಮೂಡಿದ ತಕ್ಷಣ ಅನಿಸೋದು ಈ ಪಾತ್ರವನ್ನ ಇವರಿಗಾಗೆ ಟೈಲರ್ ಮೇಡ್ ಅಂತ. ಸಿನಿಮಾ ಪ್ರಪಂಚವೇ ಹಾಗೆ, ಮನರಂಜನೆಗೆ ಸೀಮಿತ ಅಂದರೆ ಅದಕ್ಕೂ ಸೈ .. ಪಾಠ ಕಲಿತ್ತೀನಿ ಅಂದರೆ ಅದಕ್ಕೂ ಸರಿ... ಆದರೆ ಇಂತಹ ಚಿತ್ರಗಳು ಈಗ ಬಹಳ ಅಪರೂಪ

    ReplyDelete