ದೂರದರ್ಶನದ ಆರಂಭದ ದಿನಗಳು..
ಮನೆಯಲ್ಲಿ ಟಿವಿ ಇದೆ ಎನ್ನುವುದೇ ಅವರ ಠೀವಿಗೆ ಇನ್ನೊಂದು ಕಾರಣವಾಗುತ್ತಿತ್ತು.. ಆ ಪೆಟ್ಟಿಗೆಯ ಹೊರಮೈಯಲ್ಲಿ ಕಾಣುವ ಗಾಜಿನ ತಟ್ಟೆಯ ಹಿಂದೆ ಮೂಡುತ್ತಿದ್ದ ಚಿತ್ರಗಳು ನಿಜವೇನೋ ಎನ್ನುವ ಭ್ರಮೆ ನಮಗೆ.. ಮುಟ್ಟೋಣ ಎಂದರೆ.. ಮುಟ್ಟುವುದಿರಲಿ, ಟಿವಿ ನೋಡಲು ನಮ್ಮನ್ನು ಒಳಗೆ ಸೇರಿಸುತ್ತಿದ್ದದ್ದೇ ಒಂದು ದೊಡ್ಡ ಸಾಹಸ.. ಇನ್ನೂ ಅದನ್ನು ಮುಟ್ಟುವುದು ಅಂದರೆ ದೇವರೇ ಗತಿ.. ಅದರಲ್ಲೂ ಪೆಟ್ಟಿಗೆಯೊಳಗೆ ಕೂತ ಟಿವಿಯನ್ನು .. ಅದರ ಬಾಗಿಲು ಸರಿಸಿ... ಸ್ವಿಚ್ ಹಾಕಿ.. ಟಿವಿಯನ್ನು ಆನ್ ಮಾಡುವುದು ಗೌರವದ ಕೆಲಸ ಮತ್ತು ದರ್ಪವೂ ಇರುತ್ತಿತ್ತು.. ನನಗೆ ಗೊತ್ತು ಎಲ್ಲಾ ಎನ್ನುವ ಅಹಂ..
ಸರಿ.. ಟಿವಿ ಆನ್ ಮಾಡಿದರು.. ಕಾರ್ಯಕ್ರಮ ಶುರುವಾಯಿತು.. ಆಗಿನ ಕಾಲದಲ್ಲಿ ಜಾಹಿರಾತುಗಳು ಕಡಿಮೆ.. ಆದರೂ ನಮಗೆ ಟಿವಿ ನೋಡುವ ಚಪಲ.. ವಾರ್ತೆಗಳು, ಗೀತಾ ಚಿತ್ರ, ಚಿತ್ರಮಂಜರಿ.. ಕುಡಿತದ ಕೆಡುಕುಗಳು ಇದರ ಫಲಕ.. ಯಾವುದನ್ನು ಬಿಡುತ್ತಿರಲಿಲ್ಲ.. ಇದೆಲ್ಲದರ ಮಧ್ಯೆ ವಿದ್ಯುತ್ ಹೋಯಿತು ಅಂದರೆ.. ಕೆ ಇ ಬಿ ಗೆ ಹಿಡಿಶಾಪ.. ಕರೆಂಟ್ ಇಲ್ಲದ ಬೋರ್ಡ್ ಅಂತ ಹಾಸ್ಯ ಬೇರೆ..
ಸರಿ ಹೋಗಿದ್ದ ಕರೆಂಟ್ ಬಂತು.. ಕಾರ್ಯಕ್ರಮ ಮುಂದೆ ಓಡಿ ಹೋಗಿತ್ತು.. ಆದರೂ ನೋಡುವ ಚಪಲ ಕಡಿಮೆಯಾಗಿರುತ್ತಿರಲಿಲ್ಲ.. ಅರ್ಥವಾದಷ್ಟು ನಮಗೆ ಎನ್ನುವ ಚಪಲ.. ಇದೆಲ್ಲದರ ಮಧ್ಯೆ ಶುರುವಾಗುತ್ತಿತ್ತು.. ಆಂಟೆನಾ ಭರಾಟೆ.. ಗಾಳಿಗೆ, ಕಾಗೆಯ ಮಂಗಾಟಕ್ಕೆ, ಮಂಗಗಳ ಕಾದಾಟಕ್ಕೆ, ಬಿಸಿಲಿಗೆ.. ಚಿತ್ರಗಳು ಸರಿಯಾಗಿ ಮೂಡುತ್ತಿರಲಿಲ್ಲ.. ಆದರೂ ಹಠ ಬಿಡದ ವಿಶ್ವಾಮಿತ್ರನ ರೀತಿ ಟಿವಿ ಪರದೆಯ ಮೇಲೆ ನಮ್ಮ ನೋಟ.. ಮನೆಯ ಮೇಲೆ ಯಾರೋ ದೊಡ್ಡವರು ಹತ್ತಿ ಅಂಟೆನಾವನ್ನು ಆ ಕಡೆ ಈ ಕಡೆ ಸರಿ ಮಾಡುತ್ತಾ.. ಬಂತಾ ಬಂತಾ ಎಂದು ಕೇಳುವುದು.. ನಾವು ಹುಮ್ಮಸ್ಸಿನಿಂದ ಬರ್ತಿಯಾ ಇದೆ, ಆ ಸ್ವಲ್ಪ.. ಇನ್ನೊಂದು ಚೂರು... ಆ ಆ ಇವಾಗ ಬಂತು.. ಅಯ್ಯೋ ಸರಿಯಾಗಿ ತಿರುಗಿಸಿ.. ಮತ್ತೆ ಇನ್ನೊಂದು ಚೂರು.. ಆ ಇವಾಗ ಸಕತ್.. ಸೌಂಡ್ ಕೊಡಿ.. ಹೀಗೆ ನಮ್ಮ ಕಾಮೆಂಟರಿ ಓಡುತ್ತಲಿತ್ತು.. ಕಡೆಗೆ ಟಿವಿ ಪರದೆಯ ಮೇಲೆ ಚಿತ್ರ ಸರಿಯಾಗಿ ಮೂಡುತ್ತಿದೆ ಎಂದಾಗ.. ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.. ಜೊತೆಯಲ್ಲಿ ಎದುರು ಮನೆಯವರು, ಪಕ್ಕದ ಮನೆಯವರು..ನಮ್ಮನ್ನೆಲ್ಲ ಹೊಗಳಿದರು ಎಂದರೆ.. ನಾವು ಕೊಂಬು ಹೊತ್ತ ಮಹಿಷಾಸುರಗಳಾಗಿ ಬಿಡುತ್ತಿದ್ದೆವು..
ಇದೇನು ರಾಜ್ ಅವರ ಚಿತ್ರದ ಬಗ್ಗೆ ಅಂತ ಹೇಳಿ.. ಇನ್ನೇನೂ ಕೊರೀತಾ ಇದ್ದೀನಿ ಅಂದು ಕೊಂಡ್ರಾ.. ಇರಿ.. ವಿಷಯಕ್ಕೆ ಬರುತ್ತೇನೆ..
ಸರಿ ಟಿವಿ ಚಿತ್ರಗಳು ಸರಿಹೋಯಿತು.. ಇನ್ನೇನು ಎಲ್ಲವೂ ಸರಿಹೋಗಿದೆ.. ಎಂದು ಕೊಂಡಾಗ ಶುರುವಾಗುತ್ತಿತ್ತು.. "ಅಡಚಣೆಗಾಗಿ ಕ್ಷಮಿಸಿ.. "
ಈ ಫಲಕವನ್ನೇ ನೋಡುತ್ತಾ ಕೂರುತ್ತಿದ್ದೆವು.. ಮನೆಯವರು.. "ಲೋ. .. ಕಾರ್ಯಕ್ರಮ ಶುರುವಾದಮೇಲೆ.. ಹೇಳ್ರೋ ಅಂತ ಹೊರಗೆ ಕೂತಿರೋರು.. ನಾವು ಯಾವಾಗ ಸರಿಹೋಗುತ್ತೆ ಅಂತ ಜಾತಕ ಪಕ್ಷಿಯ ಹಾಗೆ ನೋಡುತ್ತಲೇ ಕೂರುತ್ತಿದ್ದೆವು..
ರಾಜ್ ಅವರ ಐದು ಚಿತ್ರಗಳು ಸರಾಗವಾಗಿ ನೋಡಲು ಅನುಕೂಲವಾಯಿತು.. ನನಗೆ ಅರಿವಿಗೆ ಬಂದ ವಿಷಯಗಳನ್ನು ಬರೆದು ಆಯಿತ್ತು.. ಮುಂದಡಿ ಇಡೋಣ ಅಂತ ಸಾಗಿದರೆ.. ಕಂಡಿದ್ದು "ಅಡಚಣೆಗಾಗಿ ಕ್ಷಮಿಸಿ" ಫಲಕ..
ಗೂಗಲೇಶ್ವರ.. ಅಂಗಡಿಯೇಶ್ವರ, ಆನ್-ಲೈನೇಶ್ವರ, ಟೋಟಲ್-ಕನ್ನಡ ಡಾಟ್ ಕಾಮೇಶ್ವರ, ಯು ಟ್ಯುಬೇಶ್ವರ... ಹೀಗೆ ದ್ವಾದಶ ಲಿಂಗೇಶ್ವರಗಳ ದರ್ಶನ ಮಾಡಿದರೂ.. ರಾಜ್ ಅವರ ಆರನೇ ಚಿತ್ರ ಸತಿ ನಳಾಯಿನಿ ಚಿತ್ರದ ಪ್ರತಿ ಎಲ್ಲೂ ಸಿಗುತ್ತಿಲ್ಲ.. ಎಲ್ಲರ ಉತ್ತರೇಶ್ವರ ಒಂದೇ.. ಆ ಚಿತ್ರದ ಪ್ರತಿ ಸಿಗೋಲ್ಲ ಎಂದು..
೧೯೫೭ರಲ್ಲಿ ಟಿ ಆರ್ ಎಸ್ ಗೋಪು ನಿರ್ದೇಶನದಲ್ಲಿ, ಕಾಮಧೇನು ಫಿಲಂಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದಲ್ಲಿ ರಾಜ ಕುಮಾರ್ ಮತ್ತು ಪಂಡರೀಬಾಯಿ ಅವರ ಅಭಿನಯವಿತ್ತು. ಸಂಗೀತ ಟಿ ಕೆ ಕುಮಾರ್ ಅವರದ್ದು, ಛಾಯಾಗ್ರಹಣ ಸಿ ಜೆ ಮೋಹನ್ ಅವರದ್ದು.
ಒಂದೊಮ್ಮೆ ಈ ಚಿತ್ರದ ಪ್ರತಿ ಸಿಕ್ಕರೆ.. ಅದರಲ್ಲಿ ಸಿಕ್ಕ ಅನುಭವದ ಅಕ್ಷರ ರೂಪವನ್ನು ಖಂಡಿತಾ ನಿಮ್ಮ ಮುಂದೆ ಇಡುತ್ತೇನೆ..
ಮತ್ತೊಂದು ರಾಜ್ ಅವರ ಮಾಣಿಕ್ಯ ಮಣಿಯ ಜೊತೆ ಬರುತ್ತೇನೆ.... !
ಗೂಗಲೇಶ್ವರ.. ಅಂಗಡಿಯೇಶ್ವರ, ಆನ್-ಲೈನೇಶ್ವರ, ಟೋಟಲ್-ಕನ್ನಡ ಡಾಟ್ ಕಾಮೇಶ್ವರ, ಯು ಟ್ಯುಬೇಶ್ವರ... ಹೀಗೆ ದ್ವಾದಶ ಲಿಂಗೇಶ್ವರಗಳ ದರ್ಶನ ಮಾಡಿದರೂ.. ರಾಜ್ ಅವರ ಆರನೇ ಚಿತ್ರ ಸತಿ ನಳಾಯಿನಿ ಚಿತ್ರದ ಪ್ರತಿ ಎಲ್ಲೂ ಸಿಗುತ್ತಿಲ್ಲ.. ಎಲ್ಲರ ಉತ್ತರೇಶ್ವರ ಒಂದೇ.. ಆ ಚಿತ್ರದ ಪ್ರತಿ ಸಿಗೋಲ್ಲ ಎಂದು..
ReplyDeleteಹ್ಹ ಹ್ಹ ಹ್ಹ .. ಚಿತ್ರ ಈಗ ಶುರುವಾಗುತ್ತೆ ಈಗ ಶುರುವಾಗುತ್ತೆ ಅಂತ ಕಾಯ್ತಾ ಕೂತ್ತಿದ್ದೆ ಆಯ್ತು... ಆದರೆ ಸಿಗದ ಕಾರಣ ಈ ಚಿತ್ರವನ್ನು ಬಿಟ್ಟು ಮುಂದು ಹೋಗದೆ, ಇದಕ್ಕೆ ಒಂದು ಸೊಗಸಾದ ಬರಹ ಕೊಟ್ಟಿದ್ದೀರಲ್ಲ ಅದು ಸೂಪರ್ :D
ಶ್ರೀಕಾಂತ್ ಅವ್ರೇ
ReplyDeleteನನ್ನ ಬಳಿ ಚಿತ್ರದ ಸ್ಟಿಲ್ ಇದೆ
ನನ್ನ ನಂಬರ್ 9972883175
ಚಂದ್ರಶೇಖರ ನನ್ನ ಹೆಸರು