ಚಲನಚಿತ್ರಗಳು ಕನಸ್ಸನ್ನು ಮಾರುವ ಒಂದು ಸುಂದರ ಮಾರುಕಟ್ಟೆ.. ಆ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳು, ಕನಸುಗಳು ಬಹುಶಃ ಇಲ್ಲ ಎನ್ನಬಹುದು..
ಚಲನಚಿತ್ರಗಳನ್ನು ಬರಿ ಮಾಧ್ಯಮ ಅಂತ ನೋಡದೆ ಅದರಲ್ಲಿ ಸಿಗುವ ಒಳ್ಳೆಯ ಅನುಭವಗಳು, ಕಲಿಸುವ ಪಾಠಗಳು, ಸಿಗುವ ದಾರಿ ಸೂಚಿಗಳನ್ನು ನೋಡುತ್ತಾ ಕಲಿಯುವ ಪರಿ ಪಾಠವನ್ನು ನನಗೆ ಅರಿಯದೆ ಕಲಿಸಿದ್ದು ನನ್ನ ಜನುಮದಾತ, ನನ್ನ ಸೋದರ ಮಾವ ಶ್ರೀಕಾಂತ ಹಾಗೂ ನನ್ನ ಅತ್ತೆಯ ಮಗಳು ವೀಣಾ.
ಇವರೆಲ್ಲ ಚಲನಚಿತ್ರವನ್ನು ನೋಡುವ ಧಾಟಿಯನ್ನೇ ಬದಲಿಸಿದರು. ಅದರೊಳಗಿನ ಹೂರಣ, ಸಂಗೀತ, ಸಾಹಿತ್ಯ ಇವೆಲ್ಲ ಕಲಿಕಾ ಮಾಧ್ಯಮವಾಗಿ ಬದಲಾದದ್ದು ಸೋಜಿಗ.. ಇಂದು ನಾ ಬರೆಯುವ ಲೇಖನಗಳಲ್ಲಿ ಚಲನಚಿತ್ರ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಅಂದರೆ ಅದಕ್ಕೆ ಕಾರಣ ಈ ಮೇಲೆ ಹೇಳಿದ ಮೂವರು..
ಚಲನಚಿತ್ರಗಳ ಕನಸಿನ ಲೋಕವನ್ನು ಇನ್ನಷ್ಟು ಅದ್ದೂರಿಯಾಗಿ ತೆರೆಯ ಮೇಲೆ ತಂದದ್ದು ಕನಸುಗಾರ ರವಿಚಂದ್ರನ್.. ಇವರ ಆರಂಭಿಕ ಚಿತ್ರಗಳಿಂದಲೂ ಇವರ ಚಿತ್ರಗಳಲ್ಲಿ ತೋರುತ್ತಿದ್ದ ಸೆಟ್ಟುಗಳು, ಹಾಡುಗಳು, ನೃತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ತುಸು ಭಿನ್ನವಾಗಿರುತ್ತಿತ್ತು.. ಪ್ರೇಕ್ಷಕರ ಪಾಲಿಗೆ ಕನಸುಗಾರನೆ ಆಗಿದ್ದು ವಿಶೇಷ..
ಈ ಪೀಠಿಕೆಗೆ ಕಾರಣ... "ದೃಶ್ಯ" ಎನ್ನುವ ಚಿತ್ರ.. ರವಿ ವಿಭಿನ್ನ ಅನಿಸುವ ಚಿತ್ರಗಳೆಲ್ಲ ನನಗೆ ಬಹು ಹಿಡಿಸಿದ್ದವು.. ಏಕಾಂಗಿ, ಕಲಾವಿದ, ಇತ್ತೀಚಿನ ದಶಮುಖ.. ಕಾರಣ ಗ್ಲಾಮರ್ ಲೋಕದಿಂದ ಹೊರಗೆ ಬಂದು ತನ್ನ ಛಾಪನ್ನು ಮೂಡಿಸಲು ಪ್ರಯತ್ನಿಸಿದ ಚಿತ್ರಗಳು ಇವು.
ದೃಶ್ಯ ಹೆಸರಿಗೆ ತಕ್ಕ ಹಾಗೆ ಒಂದು ವಿಭಿನ್ನ ಚಿತ್ರ. ಇದು ರಿಮೇಕ್ ಚಿತ್ರವಾದರೂ ರವಿ ಇಷ್ಟವಾಗುತ್ತಾರೆ.. ಅಬ್ಬರವಿಲ್ಲದ ಸಂಭಾಷಣೆ, ಹಿತಮಿತ ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಸರಳವಾಗಿದೆ..
ರವಿ ಪಾತ್ರ ತುಂಬಾ ಇಷ್ಟವಾಗುತ್ತದೆ. ಸದ್ದಿಲದೆ, ನಾಯಕ ಎನ್ನುವ ಹಮ್ಮು ಬಿಮ್ಮು ಇಲ್ಲದೆ ಇಮೇಜ್ ಹಂಗು ತೊರೆದು ನಟಿಸಿರುವ ಚಿತ್ರ. ವಯಸ್ಸಾಗಿದೆ ಎನ್ನುವುದಾದರೂ ನಾಯಕ ಎನ್ನುವ ಅಹಂ ಅಷ್ಟು ಸುಲಭವಾಗಿ ಮರೆಯುವುದು ಅಲ್ಲಾ ಮೆರೆಯುವುದು ಇಲ್ಲಾ.. ಆದರೂ ಆ ಅಹಂ ಏನೂ ತೋರದೆ ನಟಿಸಿರುವುದು ಸಂಭಾಷಣೆ ಹೇಳುವಾಗ ತೋರುವ ತಾಳ್ಮೆ ಇಷ್ಟವಾಗುತ್ತದೆ.
ಅರೆ ರವಿ ಯಾಕೆ ಹೀಗೆ ತಾಳ್ಮೆಯಿಂದ ನಟಿಸುತ್ತಿದ್ದಾರೆ ಕೊಂಚ ಕೋಪ ತಾಪ ತೋರಿಸಿ ಮಣ್ಣು ಮುಕ್ಕಿಸಬಾರದೆ ಎನ್ನಿಸುವಷ್ಟು ನಮ್ಮೊಳಗೇ ಆವರಿಸಿಕೊಳ್ಳುತ್ತಾರೆ.. ಇಡಿ ಚಿತ್ರದುದ್ದಕ್ಕೂ ತಮ್ಮ ಹೆಗಲ ಮೇಲೆ ಈ ಚಿತ್ರವನ್ನು ಹೊತ್ತು ಸಾಗಿದ್ದಾರೆ ಎನ್ನುವ ಮಾತು ಸುಳ್ಳಲ್ಲ.
ರವಿಯ ಚಿತ್ರದಲ್ಲಿ ಯಾವಾಗಲೂ ಒಂದು ತೂಕ ನಾಯಕಿಯದ್ದು ಗ್ಲಾಮರ್, ಅಂದ ಚಂದ ತೋರುವುದರಲ್ಲಿ ರವಿ ಎತ್ತಿದ ಕೈ. ಆದರೆ ಗಂಭೀರ ಗೃಹಿಣಿ ಪಾತ್ರದಲ್ಲಿ ಮನದಾಳಕ್ಕೆ ಇಳಿಯುವುದು ನವ್ಯ ನಾಯರ್ ಎನ್ನುವ ಚೆಲುವೆ. ಹಣೆಯಲ್ಲಿ ಕುಂಕುಮ, ತುಟಿಯಲ್ಲಿ ಕಿರು ನಗೆ, ಹಣೆಯ ಕುಂಕುಮದ ಮೇಲೆ ಅಥವಾ ಕೆಳಗೆ ಇನ್ನೊಂದು ಬೊಟ್ಟು.. ಆಹಾ ಹೆಣ್ಣು ಮಕ್ಕಳ ಚೆಲುವು ಹಣೆಯ ಮೇಲೆ ನೋಡು ಎನ್ನುವ ಮಾತಿನಂತೆ ಇಷ್ಟವಾಗುತ್ತಾರೆ. ಕೊಂಚ ತುಸು ನಗೆ, ಹುಸಿ ಮುನಿಸು, ಉತ್ತಾರರ್ಧದಲ್ಲಿ ತೋರುವ ಆತಂಕ, ತಳಮಳ ಎಲ್ಲವೂ ನವ್ಯಳನ್ನು ಇನ್ನೊಮ್ಮೆ ನೋಡಬೇಕು ಎನ್ನಿಸುತ್ತದೆ. ನವ್ಯ ನಿಜವಾಗಿಯೂ ಚೆಲುವೆ ಎಂಬ ಮಾತು ಹೃದಯಕ್ಕೆತಾಗುತ್ತದೆ.. ಕಣ್ಣಿನ ಸೌಂದರ್ಯಕ್ಕಿಂತ ಹೃದಯಕ್ಕೆ ತಾಕುವ ಸೌಂದರ್ಯ ಸದಾ ಮನದಲ್ಲಿ ಉಳಿಯುತ್ತದೆ ಎನ್ನುವ ಮಾತು ಅಕ್ಷರಶಃ ನಿಜಾ..
ರವಿ ಮಗಳ ಪಾತ್ರಧಾರಿ ಕೂಡ ಮನಸ್ಸಿಗೆ ಹತ್ತಿರವಾಗುವುದು ಆ ತಾರುಣ್ಯದ ಆತಂಕ, ಅಪ್ಪ ಅಮ್ಮನ ಮೇಲಿನ ಪ್ರೀತಿ ನಂಬಿಕೆ ಅಚಲ ವಿಶ್ವಾಸ ಇವೆಲ್ಲವನ್ನೂ ಹೊತ್ತುಕೊಂಡು ನಟಿಸಿದ್ದಾರೆ.. ಕಾಲೇಜ್ ನಲ್ಲಿ ಕೇಳುವ ಪ್ರಶ್ನೆಗೆ ತಡಬಡಾಯಿಸದೆ ಉತ್ತರ ಕೊಡುವ ದೃಶ್ಯ ಇಷ್ಟವಾಗುತ್ತದೆ..
ಇನ್ನೂ ಪುಟಾಣಿ.. ಭಯ, ದುಗುಡ, ಆತಂಕ ಅಪ್ಪನಿಗೆ ಏನಾಗುತ್ತದೆ ಅಮ್ಮನಿಗೆ ಏನಾಗುತ್ತದೆ ಎನ್ನುವ ಮುಖಭಾವ ಹೊಮ್ಮಿಸುವ ತಾಕತ್ ಖುಷಿ ನೀಡುತ್ತದೆ .. ಅದರಲ್ಲೂ ಅಪ್ಪಾ ನಾ ತಪ್ಪು ಮಾಡಿದೆನಾ ಎಂದು ಕೇಳುವ ದೃಶ್ಯ ಮನಕಲುಕುತ್ತದೆ...
ಅಚ್ಯುತ್ ಕುಮಾರ್ ಅಬ್ಬರ ಪಾತ್ರ, ಆ ದ್ವೇಷ, ಕೋಪ ಸಿಟ್ಟು ಎಲ್ಲವನ್ನು ಒಂದೇ ಪಾತ್ರೆಯಲ್ಲಿ ಹಾಕಿ ಕಲಸಿ ಅಭಿನಯಿಸಿದ್ದಾರೆ.. ಇನ್ನುಳಿದ ಪಾತ್ರಗಳು ತಮ್ಮ ತಮ್ಮ ತೂಕವನ್ನು ಚಿತ್ರದಲ್ಲಿ ತುಂಬಿದ್ದಾರೆ..
ಇಡಿ ಚಿತ್ರದಲ್ಲಿ ಕಾಣುವುದು ರವಿ.. ದೇಹದ ತೂಕ ಹೇಗೆ ಇದ್ದರೂ ಪಾತ್ರಕ್ಕೆ ತೂಕ ಒದಗಿಸಿದ್ದಾರೆ.. ಒಂದು ಒಳ್ಳೆ ಚಿತ್ರವನ್ನು ಕೊಟ್ಟ ಕೀರ್ತಿ ನಿರ್ದೇಶಕ ಪಿ. ವಾಸು ಅವರಿಗೆ ಸಲ್ಲುತ್ತದೆ.. ಚಿತ್ರವನ್ನು ಇನ್ನಷ್ಟು ಬಿಗಿಗೊಳಿಸಬಹುದಿತ್ತು ಎನ್ನಿಸಿದರೂ.. ಸಂಗೀತ ಪ್ರಚಂಡ ಶ್ರೀ ಇಳಯರಾಜ ಅವರ ಸಂಗೀತಕ್ಕೆ ಇನ್ನಷ್ಟು ಹೊಳಪು ಬೇಕಿತ್ತು ಎನಿಸಿದರೂ ಇಡಿ ಚಿತ್ರದ ಓಟಕ್ಕೆ ಇದು ಯಾವುದು ದಕ್ಕೆ ಬಾರದಿರುವುದು ಈ ಚಿತ್ರದ ವಿಶೇಷ..
ಚಲನಚಿತ್ರವನ್ನೇ ಉಸಿರಾಗಿಸಿಕೊಂಡು ಬದುಕಿರುವ ರವಿ ಈ ಚಿತ್ರದಲ್ಲಿ ಚಿತ್ರಗಳ ದೃಶ್ಯಗಳ ಮೂಲಕವೇ ಇಡಿ ಚಿತ್ರವನ್ನು ಕಟ್ಟಿಕೊಂಡಿರುವುದು ಒಂದು ವಿಭಿನ್ನ ಪ್ರಯೋಗ ಮತ್ತು ವಿಶೇಷ.
ರವಿ ನಿಜಕ್ಕೂ ಒಬ್ಬ ಕನಸುಗಾರ.. ಅವರ ಬದಲಾದ ವಯೋಮಾನಕ್ಕೆ ತಕ್ಕಂತೆ ಒಂದು ಸುಂದರ ಚಿತ್ರವನ್ನು ನೀಡಿದ ಇಡಿ ತಂಡಕ್ಕೆ ಅಭಿನಂದನೆಗಳು..
ಚಲನಚಿತ್ರಗಳನ್ನು ಬರಿ ಮಾಧ್ಯಮ ಅಂತ ನೋಡದೆ ಅದರಲ್ಲಿ ಸಿಗುವ ಒಳ್ಳೆಯ ಅನುಭವಗಳು, ಕಲಿಸುವ ಪಾಠಗಳು, ಸಿಗುವ ದಾರಿ ಸೂಚಿಗಳನ್ನು ನೋಡುತ್ತಾ ಕಲಿಯುವ ಪರಿ ಪಾಠವನ್ನು ನನಗೆ ಅರಿಯದೆ ಕಲಿಸಿದ್ದು ನನ್ನ ಜನುಮದಾತ, ನನ್ನ ಸೋದರ ಮಾವ ಶ್ರೀಕಾಂತ ಹಾಗೂ ನನ್ನ ಅತ್ತೆಯ ಮಗಳು ವೀಣಾ.
ಇವರೆಲ್ಲ ಚಲನಚಿತ್ರವನ್ನು ನೋಡುವ ಧಾಟಿಯನ್ನೇ ಬದಲಿಸಿದರು. ಅದರೊಳಗಿನ ಹೂರಣ, ಸಂಗೀತ, ಸಾಹಿತ್ಯ ಇವೆಲ್ಲ ಕಲಿಕಾ ಮಾಧ್ಯಮವಾಗಿ ಬದಲಾದದ್ದು ಸೋಜಿಗ.. ಇಂದು ನಾ ಬರೆಯುವ ಲೇಖನಗಳಲ್ಲಿ ಚಲನಚಿತ್ರ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಅಂದರೆ ಅದಕ್ಕೆ ಕಾರಣ ಈ ಮೇಲೆ ಹೇಳಿದ ಮೂವರು..
ಚಲನಚಿತ್ರಗಳ ಕನಸಿನ ಲೋಕವನ್ನು ಇನ್ನಷ್ಟು ಅದ್ದೂರಿಯಾಗಿ ತೆರೆಯ ಮೇಲೆ ತಂದದ್ದು ಕನಸುಗಾರ ರವಿಚಂದ್ರನ್.. ಇವರ ಆರಂಭಿಕ ಚಿತ್ರಗಳಿಂದಲೂ ಇವರ ಚಿತ್ರಗಳಲ್ಲಿ ತೋರುತ್ತಿದ್ದ ಸೆಟ್ಟುಗಳು, ಹಾಡುಗಳು, ನೃತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ತುಸು ಭಿನ್ನವಾಗಿರುತ್ತಿತ್ತು.. ಪ್ರೇಕ್ಷಕರ ಪಾಲಿಗೆ ಕನಸುಗಾರನೆ ಆಗಿದ್ದು ವಿಶೇಷ..
ಈ ಪೀಠಿಕೆಗೆ ಕಾರಣ... "ದೃಶ್ಯ" ಎನ್ನುವ ಚಿತ್ರ.. ರವಿ ವಿಭಿನ್ನ ಅನಿಸುವ ಚಿತ್ರಗಳೆಲ್ಲ ನನಗೆ ಬಹು ಹಿಡಿಸಿದ್ದವು.. ಏಕಾಂಗಿ, ಕಲಾವಿದ, ಇತ್ತೀಚಿನ ದಶಮುಖ.. ಕಾರಣ ಗ್ಲಾಮರ್ ಲೋಕದಿಂದ ಹೊರಗೆ ಬಂದು ತನ್ನ ಛಾಪನ್ನು ಮೂಡಿಸಲು ಪ್ರಯತ್ನಿಸಿದ ಚಿತ್ರಗಳು ಇವು.
ಚಿತ್ರ ಕೃಪೆ : ಅಂತರ್ಜಾಲ |