Tuesday, July 10, 2012

ಕಲಿಯುಗ - ಭಾವನಾ ಲೋಕದ ಚಿತ್ರ (1984)


ಸಾವಿತ್ರಿ..ತನ್ನ ಗಂಡನ್ನ ಉಳಿಸಿಕೊಳ್ಳಲು ಯಮರಾಜನ ಜೊತೆ ವಾಗ್ವಾದ ನಡೆಸಿ ಗೆದ್ದಳು..ಇದಕ್ಕೆ ಸ್ವಲ್ಪ ಅಪವಾದ ಎನ್ನುವಂತೆ ತಾಯಿ ಹೃದಯ ಮಕ್ಕಳಿಗೋಸ್ಕರ ಮಿಡಿಯುತ್ತೆ ಅನ್ನುವ ವಿಷಯವನ್ನು ಹಿಡಿದು ಮಾಡಿದ ಚಿತ್ರ "ಕಲಿಯುಗ"

ನನ್ನ ಅಮ್ಮ ನನ್ನನ್ನು  ಹನುಮಂತನಗರದ ರಾಜಲಕ್ಷ್ಮಿ ಎನ್ನುವ ಟಾಕಿಸ್ಗೆ(ಟೆಂಟ್) ಕರೆದು ಕೊಂಡು ಹೋದ ಏಕೈಕ ಚಿತ್ರ...

ಒಂದು ಸುಂದರ ಜಗತನ್ನು ನನಗೆ ಪರಿಚಯ ಕೊಟ್ಟರು..ನಾನು ಭಾವನಾ    ಲೋಕದಲ್ಲಿ ತೇಲಲು ಶುರು ಮಾಡಿದ್ದೂ ಬಹುಶಃ ಇಲ್ಲಿಂದಲೇ..

ನನ್ನ ಮೆಚ್ಚಿನ ನಟ ರಾಜೇಶ್ ಅಭಿನಯಿಸಿದ ನನಗೆ ಇಷ್ಟವಾದ ಕೆಲವು ಚಿತ್ರಗಳಲ್ಲಿ ಕಲಿಯುಗ ಮತ್ತು  ದೇವರ ದುಡ್ಡು ಒಂದು... 
http://moved-movies.blogspot.in/2012_01_01_archive.html
ದೇವರ ದುಡ್ಡು ಚಿತ್ರದ ಬಗ್ಗೆ ಬರೆದಿದ್ದೆ..

ಈಗ ಕಲಿಯುಗ ಚಿತ್ರದ ಬಗ್ಗೆ ಬರೆಯೋಣ ಅನ್ನಿಸಿತು.

ರಾಜೇಶ್  - ಕನ್ನಡ ನಟ 
ಇದು ರಿಮೇಕ್ ಚಿತ್ರವಾದರೂ, ಅಮೋಘ ಅಭಿನಯ ನೀಡಿದ ಚಿತ್ರ..ನನ್ನ ನೆಚ್ಚಿನ ಆರತಿ ಕೂಡ ಅದ್ಭುತ ಎನ್ನುವ ರೀತಿಯಲ್ಲಿ ಪೈಪೋಟಿ ಕೊಟ್ಟು ಅಭಿನಯಿಸಿದ ಚಿತ್ರ ಇದು.
ಆರತಿ.ಆಗಿನ ಎಲ್ಲ ಹೆಸರಾಂತ ನಾಯಕರ ಜೊತೆ  ಅಭಿನಯ 
ಕಥೆ ಮಾಮೂಲಿ..ತಂದೆ ತಾಯಿ ಮಕ್ಕಳಿಗೋಸ್ಕರ ಜೀವ ತೇಯ್ದು ಸಾಕುತ್ತಾರೆ..
ರೆಕ್ಕೆ ಬಲಿತ ಹಕ್ಕಿಗಳು ಗೂಡು ಬಿಟ್ಟು ಹೋಗುವಂತೆ ಹಾರಿ ಹೋಗುತ್ತಾರೆ..
ಒಂದು ಚೂರು ರೊಟ್ಟಿ ಕೊಟ್ಟರೆ ಜೀವನವಿಡಿ ಹಿಂದೆ ಬರುವ ಶ್ವಾನದಂತೆ ರಕ್ತ ಸಂಬಂಧವಿಲ್ಲದಿದ್ದರು ನೆರಳಾಗಿ ಸಾಕುವ ಸಾಕು ಮಗ...

ಕಡೆಗೆ ಮಕ್ಕಳಿಗೆ ತಾವು ಜೀವನದಲ್ಲಿ ಎಡವಿ ಬಿದ್ದು..ಮತ್ತೆ ಶರಣು ಅಂತ ಬಂದಾಗ ಅಪ್ಪ ಮಕ್ಕಳಿಗೆ ಶಿಕ್ಷೆ ಕೊಡಬೇಕು ಅಂತ ಬಯಸುತ್ತಾನೆ.

ಆದ್ರೆ ತಾಯಿ ಹೃದಯ ತಾನು ಗಂಡನ ಕಷ್ಟದಲ್ಲಿ ನೆರಳಾಗಿ ಜೊತೆಯಿದ್ದು..ಹೆಗಲಿಗೆ ಹೆಗಲು ಕೊಟ್ಟು ನಿಂತರು..ಕಡೆಗೆ ಬಯಸುವುದು ಮಕ್ಕಳ ಸಾನಿಧ್ಯ

ಕಡೆಗೆ ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಂಡಿದ್ದರು ಕೂಡ, ಮಕ್ಕಳ ಮೇಲಿನ ಕೋಪಕ್ಕೆ ದೂರ ನಿಲ್ಲಲು ನಿರ್ಧಾರ ಮಾಡಿ..ಹೆಂಡತಿಯ ದುಡುಕು ಮಾತುಗಳಿಂದ ನೊಂದು ಹೃದಯಾಘಾತವಾಗಿ ಮಡಿಯುತ್ತಾನೆ..ಮತ್ತು ಉಯಿಲು ಪತ್ರದಲ್ಲಿ ತನ್ನ ಎಲ್ಲ ಆಸ್ತಿಯ ಬಹು ಭಾಗವನ್ನು ತನ್ನ ಸಾಕು ಮಗನಿಗೆ ಬಿಟ್ಟು, ಮಡದಿಯ ಪುತ್ರ ಮೋಹಕ್ಕೆ ಕೆಲವು ಲಕ್ಷ ರುಪಾಯಿಗಳನ್ನು ಕೊಡುವುದು ಎಂದು ಬರೆದಿರುತ್ತಾನೆ

ಮಕ್ಕಳಿಗೆ ತಮ್ಮ ತಪ್ಪು ಅರಿವಾಗುವಷ್ಟರಲ್ಲಿ ಪಿತನ ಕಳೆದುಕೊಂಡು ಅನಾಥವಾಗುತ್ತಾರೆ..

ರಾಜೇಶ್ ಜೀವಮಾನದ ಶ್ರೇಷ್ಠ ನಟನೆ..ಪ್ರತಿಯೊಂದು ಸನ್ನಿವೇಶವನ್ನು ಅನುಭವಿಸಿ ಅಭಿನಯಿಸಿದ್ದಾರೆ..ಅವರು ಹೇಳುವ ಸಂಭಾಷಣೆ.."ಸಾವು ತಾನಾಗೆ ಬರುವವರೆಗೆ ಸಾಯಲು ಇಷ್ಟ ಪಡುವುದಿಲ್ಲ..ಸತ್ತ ಮೇಲೂ ಬದುಕಲು ಇಷ್ಟ ಪಡುತ್ತೇನೆ.." ಅದ್ಭುತ ಸಾಲುಗಳು..ರಾಜೇಶ್ ಪ್ರತಿಯೊಂದು ಸಂಭಾಷಣೆಯು ಕರತಲಾಮಲಕ ಎನ್ನುವಷ್ಟು ಸಲೀಸಾಗಿ ಹೇಳಿದ್ದಾರೆ..

ಆರತಿ ಕಣ್ಣಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುತ್ತಾ..ತನ್ನ ಮಕ್ಕಳೆಲ್ಲ ಮೋಸ ಮಾಡಿ ಬಿಟ್ಟು ಹೋದಾಗ ತನ್ನ ಸಾಕು ಮಗನನ್ನು ಕರೆದು "ನಂದೀಶ ಯಾಕೋ ನನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲ?" ಎಂದು ಹೇಳುವ ದೃಶ್ಯ ನಿಜಕ್ಕೂ ಕಣ್ಣೇರು ತರಿಸುತ್ತೆ ...

ಆರತಿಯಾ ಅಭಿನಯ ಮೆಚ್ಚಿದ ಕೆಲವು ಚಿತ್ರಗಳ ದೃಶ್ಯಗಳಲ್ಲಿ  ಇದು ಒಂದು.. ಕಡೆಗೆ ಮಕ್ಕಳ ಮೇಲಿನ ಪ್ರೀತಿಯಿಂದ ಗಂಡನಿಗೆ "ನಿಮ್ಮ ಹೃದಯ ಕಲ್ಲು..ಕಲ್ಲು" ಎಂದು ಹೇಳುವ ದೃಶ್ಯ..ತಾಯಿ ಪ್ರೇಮವನ್ನು ಸಾರಿ ಸಾರಿ ಹೇಳುತ್ತದೆ...ಅಮೋಘ ಅಭಿನಯ..

ನನ್ನ ಅಚ್ಚು ಮೆಚ್ಚಿನ ಹಾಗು ನಾನು ಆರಾಧಿಸುವ ಬಾಲಣ್ಣ ಈ ಚಿತ್ರದಲ್ಲಿ ಹೇಳುವ ಸಂಭಾಷಣೆ "ನಾನು ಹೋಗೋಲ್ಲ..ನನ್ನ ಈ ಮನೆಯಿಂದ ಹೊರಗೆ ಹಾಕಬೇಡಿ.." ಎಂದು ಮಳೆಯಲ್ಲಿ ತೋಯುತ್ತ ಹೇಳುವ ಅಭಿನಯ..ಮಳೆಯಲ್ಲೂ ಕಣ್ಣೀರು ತರಿಸುತ್ತೆ.... 
ಅಭಿನಯದ ವಿಶ್ವ ಕೋಶ...ನಮ್ಮ ಬಾಲಣ್ಣ 
ಗಂಡನ ಮೇಲೆ ಪ್ರೀತಿ ಮಮಕಾರ ಎಷ್ಟೇ ಇದ್ದ್ದರು.. ತಾನು ಜನ್ಮ ನೀಡಿದ ಕಂದಮ್ಮಗಳು ಏನೇ ತಪ್ಪು ಮಾಡಿದರು ಅದನ್ನು ಕ್ಷಮಿಸುವ ಉದಾರ ಗುಣ ತಾಯಿಯಲ್ಲಿ ತೋರುವ ಕಥೆಯಲ್ಲಿ ಪ್ರತಿಯೊಬ್ಬರ ಅಭಿನಯ ಸ್ಮರಣೀಯ...

ಸಾವಿರ ಜನುಮ ಬರಲೇನು..ನೀನು ಇರುವಾಗ ನನಗೆ ಭಯವೇನು..
ನಿಮ್ಮ ತೊಳಲ್ಲಿ ನಾ ಸೇರೆಯಾದಾಗ ಸಾವು ಕೂಡ ಹಿತವೇನು
ಜೀವನ ನನಗೆ ಸಿಹಿಯಾಯ್ತು ..ಕಹಿ ನೀ ಬಂದು ಬಾಳಿಂದ ದೂರಾಯ್ತು.. 
ಎಂತಹ ಸೊಗಸಾದ ಸಾಲುಗಳು..ದಾಂಪತ್ಯ ಅಂದ್ರೆ ಇದೆ ಅಲ್ಲವೇ...

ತಾಯಿ ಜನ್ಮ ಕೊಡುತ್ತಾಳೆ
ತಂದೆ ಬಾಳು ಕೊಡುತ್ತಾನೆ..
ತಾಯಿ ಕ್ಷಮಿಸುತ್ತಾಳೆ
ತಂದೆ ಶಿಕ್ಷಿಸಿ ದಾರಿ ತೋರುತ್ತಾನೆ..
ಆದರೆ ಪ್ರೀತಿಸಿ, ಶಿಕ್ಷಿಸಿ, ಕ್ಷಮಿಸುವ ಉದಾರಿಗಳು 
ಅವರು ಯಾರು ಎಂದರೆ...
ತಂದೆ ತಾಯಿ ಮಾತ್ರ..
ಅದು ಸಾರ್ವಕಾಲಿಕ ಸತ್ಯ..

4 comments:

  1. ನಮಗಿಷ್ಟವಾದುದ್ದನ್ನ ಮುಕ್ತವಾಗಿ ವ್ಯಕ್ತಪಡಿಸೋದು ನಿಜಕ್ಕೂ ಒಂದು ಸಂಸ್ಕಾರ. ಕೆಲವರಿಗೆ ರಕ್ತದಿಂದ ಬಂದಿದ್ದರೆ, ಕೆಲವರಿಗೆ ಕಲಿಕೆಯಿಂದ ದೊರಕುತ್ತದೆ. ಹೇಗೆ ಸಿದ್ಧಿಸಿದ್ದರೂ ಅದು ಬೀರುವುದೂ ಪರಿಮಳವನ್ನೇ.

    ಶ್ರೀಕಾಂತ ನಿನ್ನ blogಗಳ ಮೂಲಕ ಸುವಾಸನೆಯನ್ನೇ ಪಸರಿಸುತ್ತಿರುವೆ.
    ಹಾಗಾಗಿಯೇ ಅಣ್ಣ ನಿನ್ನ ’ಗುಣಗ್ರಾಹಿ ಕಣಯ್ಯ’ ಎಂದಿದ್ದು. We mean it!

    ರಜನೀಶ

    ReplyDelete
  2. ನಿಮ್ಮ ಈ ಬ್ಲಾಗನ್ನು ನಾನು ಸಂಪೂರ್ಣ ಓದಬೇಕಿದೆ. ತುಂಬಾ ಅಪೂರ್ವ ಪ್ರಯತ್ನ. ಬುಕ್ ಮಾರ್ಕ್ ಹಾಕಿಟ್ಟೆ.

    ಇರತ ಭಾಷೆ ಹೆಸರು ಹಾಕಿದ ಕೂಡಲೆ ಹುಡುಕಿಕೊಡುವ ಗೂಗಲ್ ಸಹ ಕನ್ನಡ ಸಿನಿಮಾಗಳ ಬಗ್ಗೆ ದಿವ್ಯ ಮೌನ.

    ಇರಿ, ನನಗೆ ಇನ್ನು ಬಿಡುವಿನಲ್ಲಿ ಕನ್ನಡ ಸಿನಿಮಾಗಳ ತಾರಾಂಗಣ, ತೆರೆಕಂಡ ವರ್ಷ ಮತ್ತು ಪ್ರಶಸ್ತಿಗಳನ್ನು ಹುಡುಕುವ ಕೆಲಸ.

    ReplyDelete
  3. ಧನ್ಯವಾದಗಳು ಬದರಿ ಸರ್...ಸಿನಿಮಾಗಳು ನನ್ನ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲೆ....ನೀವು ನನ್ನ ಲೋಕಕ್ಕೆ ಕಾಲಿಟ್ಟಿದ್ದು..ಸಂತೋಷವಾಯಿತು...

    ReplyDelete
  4. ಧನ್ಯವಾದಗಳು ರಜನೀಶ...ಸಿನಿಮಾಗಳು ಕೊಡುವ ಪಾಠ..ಸಂದೇಶ..ಯಾವಾಗಲು ಮನಸನ್ನು ಕೊರೆಯುತ್ತೆ...ಅಂತ ಕೊರೆತ ಜಾಸ್ತಿ ಆದಾಗ..ಒಂದು ಸಿನಿಮಾ ಬಗ್ಗೆ ಬರೆದು ಜಾಗ ಖಾಲಿ ಮಾಡಿಕೊಳ್ತೀನಿ...ಹೀಗೆ ಹಲವಾರು ಸಿನಿಮಾಗಳು ಬರುತ್ತವೆ..ಈ ಬ್ಲಾಗಿನಲ್ಲಿ..ಯಾವಾಗ ಅದು ದೇವರಿಗೆ ಹಾಗು ನನಗೆ ಮಾತ್ರ ಗೊತ್ತು..

    ReplyDelete