Monday, January 9, 2012

ದೇವರ ದುಡ್ಡು - ಭಗವದ್ಗೀತೆ ಕೊಡುವ ಭಾವ ಎರಡು ಘಂಟೆಗಳ ಕಾಲದಲ್ಲಿ (1976)

ದೇವರ  ದುಡ್ಡು 



ಒಂದು ಸುಂದರವಾದ ಕಥೆಯನ್ನು  ಎಷ್ಟು ಚೆನ್ನಾಗಿ ಯಾವ ಭಾಷೆಯಲ್ಲಾದರು  ಸರಿ ಚಿತ್ರಿಸಬಹುದು ಎನ್ನುವದಕ್ಕೆ ಅತ್ಯುತ್ತಮ ಉದಾಹರಣೆ ಈ ಸಿನಿಮಾ...


ಮೊದಲ ಪುಟದಲ್ಲೇ ಈ ಸಿನಿಮಾ ಗಮನ ಸೆಳೆಯುತ್ತದೆ. ಎಲ್ಲರ ಕಲಾವಿದರ, ತಂತ್ರಜ್ಞರ ಹೆಸರು ತೋರಿಸುವದರ ಬದಲು ಇದು ಕೆ.ಎಸ.ಎಲ್. ಸ್ವಾಮಿ ಚಿತ್ರತಂಡದಿಂದ ಎನ್ನುವುದು ಖುಷಿಕೊಡುತ್ತದೆ.


ಎಲ್ಲರು ಒಂದೇ ಅನ್ನುವ ಭಾವ ಬಂದ್ರೆ ಅದರ ಚೌಕಟ್ಟು ಕೂಡ ಸುಂದರವಾಗಿ ಇರುತ್ತದೆ.


ಈ ಸಿನಿಮಾ ಆಹಾ ಓಹೋ ಅನ್ನುವ ಮಟ್ಟಕ್ಕಿಂತ ಮೇಲೆ ನಿಲ್ಲುತ್ತದೆ. ಸಮಗ್ರ ಭಗವದ್ಗೀತೆ ಕೊಡುವ ಭಾವವನ್ನು ಸುಮಾರು ಎರಡು ಘಂಟೆಗಳ ಕಾಲದಲ್ಲಿ ಕೊಡುವ ಶಕ್ತಿ ಈ ಚಿತ್ರದಲ್ಲಿದೆ ಎನ್ನುವುದು ಇದರ ಹೆಗ್ಗಳಿಕೆ.


ಉತ್ತಮ ಸಂಭಾಷಣೆ, ಉತ್ತಮ ಹಾಡುಗಳು, ಸಂಗೀತ ಮನಸು ಸೆಳೆಯುತ್ತದೆ.

  • ರಾಜೇಶ್ ಅವರ ವೃತ್ತಿ ಜೀವನದ ಒಂದು ಮೈಲಿಗಲ್ಲು ಎನ್ನಬಹುದು. ಸುಲಲಿತವಾದ ನಟನೆ, ಸಂಭಾಷಣೆ ಹೇಳುವ ಧಾಟಿ, ಆಂಗಿಕ ಅಭಿನಯ ಎಲ್ಲವು ಅತಿ ಸುಂದರ.
  • ಶ್ರೀನಾಥ್ ಕೃಷ್ಣನಾಗಿ ಉತ್ತಮ ಅಭಿನಯ, ತಾಳಬದ್ದವಾದ ಸಂಭಾಷಣೆ, ಏರಿಳಿತ, ಹದವಾದ ಧಾಟಿಯಲ್ಲಿ ಮುಟ್ಟಿಸಬೇಕಾದ ವಿಷಯವನ್ನು ಹೇಳುವ ಚತುರತೆ ಎಲ್ಲವು ಅಭಿನಯದಲ್ಲಿ ಮೇಳೈಸಿದೆ.
  • ರಾಜೇಶ್ ಮತ್ತು ಶ್ರೀನಾಥ್ ಇಬ್ಬರು ನಡೆಸುವ ಜುಗಲ್-ಬಂದಿ ಇಡಿ ಚಿತ್ರದ ಅತ್ಯುತ್ತಮ ದೃಶ್ಯಗಳು
  • ಜಯಂತಿಯ  ಪ್ರೌಡ ಅಭಿನಯ, ಆ ವಯಸ್ಸಿನಲ್ಲೂ ಮುದ್ದಾಗಿ, ಅಮ್ಮನಾಗಿ ತೋರುವ ಅಭಿನಯ ಮನಸನ್ನು ಸೂರೆಗೊಳ್ಳುತ್ತದೆ
  • ಎಡಕಲ್ಲು ಗುಡ್ಡದ ಚಂದ್ರಶೇಖರ್ ಆ ಸಿನಿಮಾದಲ್ಲಿ ಎಷ್ಟು ತುಂಟ, ಪುಂಡನಾಗಿ ಅಭಿನಯಿಸಿದ್ದರೋ ಇಲ್ಲಿ ಅಷ್ಟೇ ಸಂಯಮ ಅಭಿನಯ, ಅದರಲ್ಲೋ ಕಡೆಗೆ ಅವರ ತಾಯಿ ಪಾತ್ರದಾರಿ ಜಯಂತಿಗೆ ಹೇಳುವ "ಅಮ್ಮ, ದೇವರು ನನಗೆ ಸಿಕ್ಕರೆ"  ಜಯಂತಿ ಹೇಳುತ್ತಾರೆ "ಅಪ್ಪನಿಗೆ ಬೇಗ ಕಾಯಿಲೆ ವಾಸಿ ಮಾಡು ಅಂತ ಕೆಳ್ಕೊತೀಯೇನೋ" ಅಂದಾಗ ಚಂದ್ರು ಹೇಳುವ ಮಾತು "ಅಮ್ಮ ಅದಕ್ಕೆ ನೀನು ಇದ್ದೀಯ...ಪ್ರತಿ ಜನುಮದಲ್ಲೋ ನೀನೆ ನನ್ನ ತಾಯಿಯಾಗಿರು ಅಂತ ಕೆಳ್ಕೊತೀನಿ" ಅಂತ ಹೇಳಿದಾಗ ಕಣ್ಣಂಚಲಿ ಭಾಷ್ಪ ಜಿನುಗತ್ತದೆ 
  • ಬಾಲಣ್ಣ ಗಮನಸೆಳೆಯುತ್ತಾರೆ. ಬಾಲಣ್ಣ-ರಾಜೇಶ್ ಇಬ್ಬರು ಇರುವ ದೃಶ್ಯಗಳು ಖುಷಿಕೊಡುತ್ತದೆ
  • ಪಿ. ಬಿ.ಎಸ. "ನಾನೇ ಎಂಬ ಭಾವ" ಹಾಡಿನಲ್ಲಿ ಒಳಗಿನ ಕಣ್ಣು ತೆರೆಸಿದರೆ, ಎಸ.ಪಿ.ಬಿ. "ತರಿ ಕೆರೆ ಏರಿ ಮೇಲೆ " ಹಾಡಿನಲ್ಲಿ  ನಮ್ಮ ದೇಹವನ್ನು ಕುಣಿಸುತ್ತಾರೆ.  http://www.youtube.com/watch?v=T3fsV5yUeVg
  • ರಾಜನ್-ನಾಗೇಂದ್ರ ಅವರ ಸಂಗೀತ ಪ್ರತಿ ದೃಶ್ಯವನ್ನು ಕಾವ್ಯವನ್ನಾಗಿ ಮಾಡಿದ್ದಾರೆ
ನನ್ನ ಅಪ್ಪನಿಗೆ ತುಂಬಾ ಪ್ರಿಯಾವಾದ ಸಿನಿಮಾ. ನಾನು ಎಷ್ಟು ಬಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ..ಪ್ರತಿ ಬಾರಿ ನೋಡಿದಾಗಲು ಹೊಸ ಅನುಭವ ಕೊಡುವಂತ ಉತ್ತಮ ಚಿತ್ರಕೊಟ್ಟ ಕೆ.ಎಸ.ಎಲ್ ಸ್ವಾಮಿ ತಂಡಕ್ಕೆ ನನ್ನ ನಮನಗಳು