ಜನಪ್ರಿಯ ಸಿನಿಮಾ ನಟರ ಹೆಸರು ಹೇಳಿಕೊಂಡು...ಕಳಪೆ ಗಿಮ್ಮಿಕ್ ಮಾಡುತ್ತಾ...ದುಡ್ಡು ಮಾಡೋರ ಮಧ್ಯೆ ನಮ್ಮ ಸಾಹಸಿ ದ್ವಾರಕೀಶ್ ಭಿನ್ನವಾಗಿ ನಿಲ್ತಾರೆ...
ಹೆಸರು ಉಪಯೋಗಿಸಿಕೊಂಡಿರುವುದು ಬರಿ ತನ್ನ ಆಪ್ತಮಿತ್ರನಿಗೆ ಒಂದು ನಮನ ಸಲ್ಲಿಸುವುದಕ್ಕೆ ಮಾತ್ರ ಎಂದು ಸಿನಿಮಾ ಶುರುವಾದ ಕೆಲವೇ ಕ್ಷಣಗಳಲ್ಲಿ ತಿಳಿಯುತ್ತೆ..
ಹಂಗಾಗಿ ಹೆಸರಿನ ಸುತ್ತ ಸುತ್ತಿಕೊಂಡಿದ್ದ ಅರ್ಥವಿಲ್ಲದ ವಿವಾದಗಳು ಕೇವಲ ವಿವಾದಗಳು...ಅಷ್ಟೇ...
ಒಂದು ಮಾತೆಂದರೆ..ಹೆಸರಿಡುವದಕ್ಕೆ ಮುನ್ನ ವಿವಾದ ಬಗೆಹರಿಸಿ ಕೊಂಡಿರಬಹುದಿತ್ತು ಆದ್ರೆ ದ್ವಾರಕೀಶ್ ರವರಿಗೆ ಕಥೆ, ಮತ್ತು ಚಿತ್ರಕಥೆಯ ಬಗ್ಗೆ ಹಾಗು ತಾನು ಮಾಡಬೇಕಾಗಿರುವ ಕೆಲಸದ ಬಗ್ಗೆ ನಂಬಿಕೆ ಬಲವಾಗಿತ್ತು ಅಂತ ಅನ್ನಿಸುತ್ತೆ ಹಾಗಾಗಿ ಅವರು ತನ್ನ ಕೆಲಸದ ಬಗ್ಗೆ ಮಾತ್ರ ಗಮನಿಸಿದ್ದಾರೆ..ಅದು ಶ್ಲಾಘನೀಯ
ಚಿತ್ರದ ಬಗ್ಗೆ ಧನಾತ್ಮಕ ಮಾತುಗಳು..
- ಸುಮಾರು ಐದು ದಶಕ ಸಿನಿಮಾರಂಗದಲ್ಲಿ ತ್ರಿವಿಕ್ರಮ ಸಾಧಿಸಿರುವ ನಟ, ತನ್ನ ಆಪ್ತಮಿತ್ರನಿಗೆ ಎರಡು ಸಾಲು ಶ್ರದ್ದಾಂಜಲಿ ಗಮನ ಸೆಳೆಯುತ್ತೆ..
- ತಾಂತ್ರಿಕವಾಗಿ ದ್ವಾರಕೀಶ್ ರವರ ಉತ್ತಮ ಚಿತ್ರ
- ಕಥೆ, ಚಿತ್ರಕಥೆ ಮೊನಚಾಗಿದೆ..ಹೇಳಬೇಕಾದಷ್ಟು ಮಾತ್ರ ಸೂಚ್ಯವಾಗಿ ಹೇಳಿದ್ದಾರೆ
- ಹೊಡೆದಾಟದ ದೃಶ್ಯಗಳು ಚೆನ್ನಾಗಿವೆ
- ನೃತ್ಯ ಸಂಯೋಜನೆ ಚೆನ್ನಾಗಿ ಮೂಡಿ ಬಂದಿದೆ
- ಸುದೀಪ್ ಮುದ್ದಾಗಿ ಕಾಣುತ್ತಾರೆ..ವಸ್ತ್ರವಿನ್ಯಾಸ ಸೊಗಸಾಗಿದೆ..ಮೊದಲ ಬಾರಿಗೆ ಸುದೀಪ್ ನನಗೆ ಈ ಚಿತ್ರದಲ್ಲಿ ಇಷ್ಟವಾಗಿದ್ದಾರೆ
- ಪ್ರಿಯಾಮಣಿ ತನ್ನ ಸ್ನಿಗ್ಧ ಸೌಂದರ್ಯದಿಂದ ಗಮನ ಸೆಳೆಯುತ್ತಾರೆ
- ಸೋನು ಸೂದ್ ಖಳನಟನಾಗಿ ಉತ್ತಮ ಸಾಮರ್ಥ್ಯ ತೋರಿದ್ದಾರೆ
- ಆಪ್ತಮಿತ್ರ ಸಿನಿಮಾದ ಮೊದಲ ಹೊಡೆದಾಟದ ದೃಶ್ಯದ ನಕಲು ನಿಜವಾದ ಸಾಹಸಸಿಂಹ ಯಾರು ಅನ್ನುವ ಪ್ರಶ್ನೆಗೆ ಸೊಗಸಾದ ಉತ್ತರ
ಇನ್ನು ಉತ್ತಮ ಪಡಿಸಬಹುದಾಗಿದ್ದ ಸಾಧ್ಯತೆಗಳು
- ಅರುಣ್ ಸಾಗರ್ ಪಾತ್ರ ಪೋಷಣೆ ಪೇಲವ
- ಭಾವನ ಪಾತ್ರ ಗಟ್ಟಿತನ ಇಲ್ಲದಿರುವುದು
- ಸಂಗೀತ ನಿರಾಸೆ ಮೂಡಿಸುತ್ತದೆ...ದ್ವಾರಕೀಶರವರ ಚಿತ್ರ ಎಂದರೆ ಸಂಗೀತ ಸಂಯೋಜಕರಿಗೆ ಹಬ್ಬ..ಆದ್ರೆ ಹರಿಕೃಷ್ಣ ನಿರಾಸೆ ಮೂಡಿಸಿದ್ದಾರೆ
- ಕ್ಲೈಮಕ್ಷ್ ಅವಸರವಾಯಿತೆನೂ ಅನ್ನುವ ಭಾವ ಕಾಡುತ್ತದೆ..ಇನ್ನು ಒಂಚೂರು ಪ್ರಯತ್ನ ಪಟ್ಟು ಉತ್ತಮ ಪಡಿಸಬಹುದಿತ್ತು
- ದ್ವಾರಕೀಶ್ ಪಾತ್ರ ಸಿನಿಮಾದ ಕತೆ ಒಳಗೆ ಪ್ರವೇಶ ಪಡೆಯದೇ ಇರುವುದು
- ಹಾಡಿನ ಚಿತ್ರೀಕರಣದಲ್ಲಿ ಕನಿಷ್ಠ ಉಡುಪು ಧರಿಸಿ ಕುಣಿಯುವ ಸುಂದರಿಯರು - ಒಳ್ಳೆ ಸದಭಿರುಚಿ ಅನ್ನಿಸುವುದಿಲ್ಲ
ಒಟ್ಟಾರೆ ಕನ್ನಡದ ಹಿರಿಯ ನಟ (ಬದುಕಿರುವವರಲ್ಲಿ) ನಿರ್ಮಾಪಕ ಒಂದು ಒಳ್ಳೆಯ ಚಿತ್ರ ನೀಡಲು ಪಟ್ಟ ಶ್ರಮ ಪ್ರತಿಯೊಂದು ಅಂಕಣದಲ್ಲೂ ಕಾಣುತ್ತದೆ..ಇಂತಹ ಕನ್ನಡಪರ, ನಾಡಿನಪರ ಕಾಳಜಿ ಇರುವ, ಕರುನಾಡಿನಲ್ಲಿ ಸಾಹಸಗಳನ್ನು ಮಾಡಿರುವ ದ್ವಾರಕೀಶ್ ಅವರಿಗೆ ನಮ್ಮ ಸಣ್ಣ ಬೆಂಬಲ ಎಂದರೆ ಒಂದು ಬಾರಿ ಸಿನಿಮಾ ನೋಡುವುದು...ಖಂಡಿತ ನಿರಾಸೆ ಮೂಡಿಸುವುದಿಲ್ಲ...ಇದರಿಂದ ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಶಕ್ತಿ, ಹುಮ್ಮಸ್ಸು ಬರುತ್ತೆ...
ದ್ವಾರಕೀಶ್ ರವರಿಗೆ (ಅವರೇ ಹೇಳಿದಂತೆ) ಮರುಜನ್ಮ ನೀಡಿದ ಆಪ್ತಮಿತ್ರ ವಿಷ್ಣು ನೆನಪು ದ್ವಾರಕೀಶ ಅವರು ಹೇಳುವ ಒಂದು ಸಂಭಾಷಣೆ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ...
ಜೈ ದ್ವಾರಕೀಶ್ ನಿಮ್ಮ ಸಾಧನೆಯ ಸ್ಪೂರ್ತಿ ಫೀನಿಕ್ಷ್ ಪಕ್ಷಿಯನ್ನೋ ಮೀರಿಸುತ್ತೆ...ನಿಮ್ಮಿಂದ ಇನ್ನೂ ಹೆಚ್ಚಿನ ಚಿತ್ರಗಳನ್ನ ನಿರೀಕ್ಷಿಸುವ ಕರುನಾಡಿನ ಜನತೆಯಲ್ಲ್ಲಿ ಒಬ್ಬ!!!!!!!!!!!!!!