Tuesday, November 1, 2011

ನಮ್ಮ ಅಣ್ಣ ಬಾಲಣ್ಣ ಜನ್ಮ ಶತಮಾನೋತ್ಸವ (2011)

ಹೆಮ್ಮೆಯ ಬಾಲಣ್ಣ
ಬಾಲಣ್ಣ ನಮ್ಮ ಜೊತೆ ಇದ್ದರು.....ಛೆ ಎಂಥ ಮಾತು...ನಮ್ಮ ಜೊತೆ ಸದಾ ಇರುವ ಅಪರೂಪದ ವ್ಯಕ್ತಿತ್ವ...


ಜೀವನದಲ್ಲಿ ಅನೇಕ ಪುಸ್ತಕಗಳನ್ನು ಓದುವುದಕ್ಕಿಂತ...ಬಾಲಣ್ಣನ ಸಿನಿಮಾಗಳು ಕೊಡುವ ಜ್ಞಾನ ಅದಕ್ಕಿಂತ ಅಧಿಕ...
ಇಂದಿಗೆ ಬಾಲಣ್ಣ ನಮ್ಮ ಕರುನಾಡ ಭೂಮಿಯನ್ನು ಬೆಳಗುವುದಕ್ಕೆ ಬಂದು ನೂರು ವರ್ಷಗಳಾದವು..
ನೂರು ಸಂಖ್ಯೆ ಬರಿ ಸಂಖ್ಯೆ ಮಾತ್ರ...ಆದ್ರೆ ಬಾಲಣ್ಣ ನಮ್ಮ ಬಾಳಿನ ಮೇಲೆ ಮಾಡಿರುವ ಹೆಗ್ಗುರುತು ಅಪಾರ..ಅವರ ಬಾಲ್ಯದ ಬಗ್ಗೆ, ಕಿವುಡುತನದ ಬಗ್ಗೆ, ಅಭಿಮಾನ್ ಸ್ಟುಡಿಯೋ ಕಟ್ಟಲು ಸಾಹಸ ಮಾಡಿದರ ಬಗ್ಗೆ ಸಾವಿರಾರು ಪುಟಗಳು ಸಿಗುತ್ತವೆ...

ಆದ್ರೆ ಅವರ ಚಿತ್ರ ಬದುಕಿನಲ್ಲಿ ಸಾಧಿಸಿದ ಪಟ್ಟ, ಸಣ್ಣ ಪಾತ್ರದಿಂದ ತ್ರಿವಿಕ್ರಮನಂತೆ ಬೆಳೆದ ಪರಿ ಎಂಥವರನ್ನು ಮಂತ್ರ ಮುಗ್ಧರನ್ನಾಗಿಸುತ್ತೆ 
ಅವರ ಪ್ರತಿ ಸಂಭಾಷಣೆಯಲ್ಲೂ ಇರುತಿದ್ದ ಶ್ರದ್ಧೆ, ಅನುಭವಿಸಿ ಮಾತಾಡುತ್ತಿದ್ದ ರೀತಿ, ರಾಗವಾಗಿ ಹೇಳುತಿದ್ದ ರೀತಿ...ಅವರಿಗೆ ಅವ್ರೆ ಸಾಟಿ...

ಬಂಗಾರದ ಮನುಷ್ಯ ಚಿತ್ರದ ರಾಚೂಟಪ್ಪ ಅಣ್ಣಾವ್ರ ರಾಜೀವನ ಪಾತ್ರದಷ್ಟೇ ಪರಿಣಾಮಕಾರಿ..ಈ ಚಿತ್ರ ಬಿಡುಗಡೆ ಆದ ಮೇಲೆ ಅನೇಕ ಧನವಂತರು ದಾನಶೀಲ  ಗುಣಗಳನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಅನ್ನುವ ಮಾತಿದೆ..
ಗಂಧದಗುಡಿ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯ ತಣ್ಣಗಿನ ಕ್ರೌರ್ಯ ತೋರಿಸುತ್ತೆ..
ಕಣ್ತೆರೆದು ನೋಡು ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಬೆಣ್ಣೆ ಮೇಲಿನ ಕೂದಲು ತೆಗೆಯುವಷ್ಟೇ ಸಲಿಸಾಗಿ ಮೋಸ ಮಾಡುತ್ತ ಹೋಗುತ್ತೆ..
ಚಂದವಳ್ಳಿಯ ತೋಟದಲ್ಲಿ ಅಣ್ಣ ತಮ್ಮನ ಮಧ್ಯೆ ತಂದು ಹಾಕಿ ಮನೆ ಮುರುಕನ  ಪಾತ್ರ ಕಣ್ಣಲ್ಲಿ ಕೋಪ ತರಿಸುತ್ತೆ..
ಗಾಂಧಿನಗರದ ಚಿತ್ರದಲ್ಲಿ ಬೇಜವಬ್ಧಾರಿ ತಂದೆಯ ಪಾತ್ರ..
ಭೂತಯ್ಯನ ಮಗ ಅಯ್ಯು ಚಿತ್ರದ ಸಂಸಾರದಲ್ಲಿ ಇದ್ದುಕೊಂಡು ಅವರಿಗೆ ಒಂದು ಗತಿ ತೋರಿಸುವ ಶಕುನಿ ಪಾತ್ರ..
ಒಂದೇ ಎರಡೇ..ಪ್ರತಿ ಪಾತ್ರದಲ್ಲೂ ಅವರ ಪಾತ್ರ ಜೀವನಕ್ಕೆ ಒಂದು ಪಾಠ...

ಕನ್ನಡಕ್ಕೆ ಇಬ್ಬರೇ ಅಣ್ಣ ಒಂದು ರಾಜಣ್ಣ ..ಇನ್ನೊದು ಬಾಲಣ್ಣ...
ಬಾಲಣ್ಣ ರಾಜಣ್ಣನಿಗೆ ಸಂಭಾಷಣೆ ತಿದ್ದುವ ಮೇಷ್ಟ್ರು ಆಗಿದ್ದರೆನ್ನುವುದು ಅತಿಶಯ ಅಲ್ಲ...ರಾಜಣ್ಣ ಅವ್ರೆ ಇದನ್ನು ಹಂಚಿಕೊಂಡಿದ್ದರು..

ಇಂತಹ ಮಹಾನ್ ಕಲಾವಿದ ನಮ್ಮ ನಾಡಿನಲ್ಲಿ ಇದ್ದರು ಎನ್ನುವುದೇ ನಮಗೆ ಹೆಮ್ಮೆ...
ನಾವು ಅವರ ಬದುಕಿಗೆ ಏನು ಮಾಡಲಿಲ್ಲ...ಆದ್ರೆ ಅದಕ್ಕಾಗಿ ಕೊರಗುವ ಬದಲು ....ಅವರ ಅಭಿನಯದ ಚಿತ್ರಗಳಿಂದ ನಮ್ಮ ಜೀವನ ಸುಧಾರಿಸಿಕೊಂಡರೆ...ನಾವು ಅವರ ಈ ಶತಮಾನೋತ್ಸವಕ್ಕೆ ಕೊಡುವ ದೊಡ್ಡ ಸನ್ಮಾನ ಅನ್ನುವ ಮಾತು ಹಾಗು ಇಂಗಿತ ನನ್ನದು...