ಮೂಲಕಥೆ ಅಬ್ದುಲ್ ಮುತ್ತಲಿಬ್
ಸಂಭಾಷಣೆ ಎಂ ನರೇಂದ್ರಬಾಬು
ಹಾಡುಗಳು ಆರ್ ಎನ್ ಜಯಗೋಪಾಲ್ ಮತ್ತು ಎಂ ನರೇಂದ್ರಬಾಬು
ಗಾಯಕರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ ಮತ್ತು ಎಲ್ ಆರ್ ಈಶ್ವರಿ
ಛಾಯಾಗ್ರಹಣ ಆರ್ ಎನ್ ಕೆ ಪ್ರಸಾದ್
ಸಂಗೀತ ಎಂ ರಂಗರಾವ್
ನಿರ್ಮಾಪಕರು ಶ್ರೀಕಾಂತ್ ನಹತ & ಶ್ರೀಕಾಂತ್ ಪಟೇಲ್
ಬ್ಯಾನರ್ ಶ್ರೀಕಾಂತ್ & ಶ್ರೀಕಾಂತ್ ಎಂಟರ್ಪ್ರೈಸಸ್
ಚಿತ್ರಕತೆ , ಸಂಕಲನ ಮತ್ತು ನಿರ್ದೇಶನ ಎಸ್ ಪಿ ಎನ್ ಕೃಷ್ಣ
ತಾರಾಗಣದಲ್ಲಿ ರಾಜಕುಮಾರ್, ಭಾರತಿ, ಕೆ ಎಸ್ ಅಶ್ವಥ್, ದಿನೇಶ್, ದ್ವಾರಕೀಶ್, ನಿರಂಜನ್, ಬಿ ರಾಘವೇಂದ್ರ ರಾವ್, ಪಂಡರಿ ಬಾಯಿ, ಆದವಾನಿ ಲಕ್ಷ್ಮೀದೇವಿ, ಜ್ಯೋತಿ ಲಕ್ಸ್ಮಿ ಮತ್ತು ವಿಜಯಶ್ರೀ ಮತ್ತಿರರು
ಕಾವೇರಿ ತೀರದಲ್ಲಿ ಒಂದು ಕಾಡು - ಮಕ್ಕಳ ನೃತ್ಯ ಗೀತೆ
ಬೀಸೋ ಗಾಳಿಯಲಿ ಅಲೆವ ನೀರಾಲೆ - ಪ್ರಣಯ ಗೀತೆ
ಕಣ್ಣಂಚಲಿ - ಕ್ಲಬ್ ಗೀತೆ
ದುಮ್ಮಾನ ಏಕೆ - ಕ್ಲಬ್ ಗೀತೆ
ಸಾಹಸಗಾರ ಶಾಮಣ್ಣ - ಛೇಡಿಸುವ ಗೀತೆ
ಇಲ್ಲೊಂದು ವಿಚಿತ್ರ ಕಥೆ..
ಸಮಾಜದ್ರೋಹಿಯ ಮಗ ಸಮಾಜವನ್ನು ಕಾಪಾಡುವ ಅಧಿಕಾರಿಯಾದರೆ..
ನ್ಯಾಯಾಧೀಶನ ಮಗ ಸಮಾಜದ್ರೋಹಿಯಾಗುತ್ತಾನೆ..
ಈ ಎರಡು ವೈರುಧ್ಯಗಳ ನಡುವಿನ ಸಂಘರ್ಷವೇ ಚಿತ್ರಕಥೆ.. ಅದರ ಜೊತೆಯಲ್ಲಿ ನಾಯಕನ ಹೆಂಡತಿಯ ಅಪ್ಪ ಕೂಡ ಸಮಾಜದ್ರೋಹಿಯೇ.. ಕರ್ತವ್ಯವೇ ಮುಖ್ಯ ಎಂದು ನಂಬಿದ ನಾಯಕ ಅದಕ್ಕೆ ತಕ್ಕ ಹಾಗೆ ಬೆಳೆಯುತ್ತಾನೆ.. ಮತ್ತು ಅಪರಾಧಿಗಳನ್ನು ಹಿಡಿದು ಆ ಗುಂಪಿನ ಮುಖಂಡ ತನಗೆ ಜನುಮ ನೀಡಿದ ಅಪ್ಪಣೆ ಆದರೂ ದಾಕ್ಷಿಣ್ಯಕ್ಕೆ ಒಳಗಾಗದೆ ಸೆರೆಗೆ ಕಳಿಸುತ್ತಾನೆ..
ಅಶ್ವಥ್ ಇಲ್ಲಿ ವಿಭಿನ್ನ ಪಾತ್ರ.. ಅವರ ಮೇಲೆ ಕಾಣದ ತೊಳಲಾಟ ಕೆಲವು ಸಂಭಾಷಣೆಗಳಲ್ಲಿ ವ್ಯಕ್ತವಾಗುತ್ತದೆ..
ರಾಘವೇಂದ್ರ ರಾವ್ ಅವರದ್ದು ಕೂಡ ಇದೆ ರೀತಿಯ ಪಾತ್ರ..
ದಿನೇಶ್ ಯಥಾಪ್ರಕಾರ ಖಳನಟ
ನಿರಂಜನ್ ನ್ಯಾಯಾಧೀಶನ ಪಾತ್ರ ಮತ್ತೆ ತಂದೆಯಾಗಿ ಇಷ್ಟವಾಗುತ್ತಾರೆ
ಆದವಾನಿ ಲಕ್ಷ್ಮೀದೇವಿ ಕರುನಾಡಿನ ಮಾತೃ ಸ್ವರೂಪಿ
ಪಂಡರಿಬಾಯಿ ಅವರ ಬಗ್ಗೆ ಹೇಳೋದೇನಿದೆ.. ತಾಯಿ ಪಾತ್ರದಲ್ಲಿ ಅವರಷ್ಟು ಪರಿಣಾಮಕಾರಿಯಾಗಿ ಇರಲು ಸಾಧ್ಯವೇ ಇಲ್ಲ..
ದ್ವಾರಕೀಶ್ ಹಾಸ್ಯಕ್ಕೆ ಒದಗಿದ್ದಾರೆ
ಭಾರತಿ.. ಇತ್ತ ನಾಯಕನ ಮಡದಿಯಾಗಿ ಪ್ರೀತಿ ತೋರಿದರೆ.. ಅತ್ತ ತನ್ನ ಮೈದುನನೇ ಖಳ. ಅವನನ್ನು ನೋಡಿದ್ದು ಹೇಳೋಕಾಗದೆ. ಹೇಳದಿರಲು ಆಗದೆ ತೊಳಲಾಡುವ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ..
ರಾಜಕುಮಾರ್ ಕರ್ತವ್ಯವೇ ದೇವರು ಎನ್ನುವ ಮಾತನ್ನು ಮೈಮೇಲೆ ಹಾಕಿಕೊಂಡು ಖಳರನ್ನು ಹಿಡಿಯಲು ನಾನಾವೇಷಗಳನ್ನು ತೊಟ್ಟು ಲವಲವಿಕೆಯಿಂದ ನಟಿಸಿದ್ದಾರೆ.. ಹಲವಾರು ದೃಶ್ಯಗಳಲ್ಲಿ ಅವರ ವೇಷಭೂಷಣಗಳಲ್ಲಿ ಮುದ್ದಾಗಿ ಕಾಣುವ ಅವರನ್ನು ನೋಡುವುದೇ ಒಂದು ಚಂದ.. ಇಬ್ಬರು ತಾಯಂದಿರ ಮಧ್ಯೆ ಅವರ ಒದ್ದಾಡುವ ದೃಶ್ಯದ ಅಭಿನಯ ಅದ್ಭುತ.. ಸಾಹಸ ದೃಶ್ಯಗಳಲ್ಲಿ ಮಿಂಚುತ್ತಾರೆ.. ಒಂದು ಕತೆಗೆ ಬೇಕಾದ ವೇಗವನ್ನು.. ತೂಕವನ್ನು ಅವರ ಅಭಿನಯ ನೀಡಿದೆ..
ನಾಯಕಿ ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂದು ಗೊತ್ತಿದ್ದರೂ.. ಅದನ್ನು ಪರಾಮರ್ಷೆ ಮಾಡುವ ಸಲುವಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರು ತೋರುವ ಅಭಿನಯ ನೆನಪಲ್ಲಿ ಉಳಿಯುತ್ತದೆ... ಚಿತ್ರಕತೆ ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿರುವುದರಿಂದ ಚಿತ್ರದ ಆರಂಭದಿಂದ ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತದೆ. ಕುತೂಹಲ ಹುಟ್ಟಿಸುತ್ತಾ ಹೋಗುತ್ತದೆ.. ಇದಕ್ಕೆ ಕಾರಣ ರಾಜಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್...
No comments:
Post a Comment