ಎ ಎಲ್ ಎಸ್ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ಎ ಎಲ್ ಶ್ರೀನಿವಾಸ್ ನಿರ್ಮಿಸಿದ್ದಾರೆ. ನಿರ್ದೇಶಕ ಪೆಕೇಟಿ ಶಿವರಾಂ ಅವರ ಮೂಸೆಯಲ್ಲಿ ಮೂಡಿಬಂದ ಚಿತ್ರವಿದು. ಕು ರ ಸೀ ಅವರ ಸಂಭಾಷಣೆ ಈ ಚಿತ್ರಕ್ಕೆ.. ಹಾಡುಗಳು ಕು ರ ಸೀ ಮತ್ತು ವಿಜಯನಾರಸಿಂಹ ಅವರ ಹಾಡುಗಳು.. ಪಿ ಬಿ ಶ್ರೀನಿವಾಸ್, ಪಿ ಸುಶೀಲ ಮತ್ತು ಜೇಸುದಾಸ್ ಅವರ ಗಾಯನ.. ಜಿ ಕೆ ವೆಂಕಟೇಶ್ ಅವರ ಸಂಗೀತವಿದೆ. ಛಾಯಾಗ್ರಹಣ ವಿ ಸೆಲ್ವರಾಜ್ ಅವರದ್ದು,
ಈ ಸಿನೆಮಾ ಬಂಗಾಳಿ ಕಥೆಯಾಧಾರಿತವಾಗಿದ್ದು ವಿಶೇಷ,. ಆಶಾಪೂರ್ಣ ದೇವಿ ಅವರ ಜೋಗ್ ಬಿಯೊಗ್ ಕಥೆಯನ್ನು ಕನ್ನಡಕ್ಕೆ ತಕ್ಕ ಹಾಗೆ ಅಳವಡಿಸಿಕೊಂಡು ಅದನ್ನು ಮೂಡಿಸಿದ್ದಾರೆ.
ಇಲ್ಲಿ ರಾಜಕುಮಾರ್ ಒಬ್ಬ ಮುಗ್ಧ ಮಗನಾಗಿ ಅಭಿನಯಿಸಿದ್ದಾರೆ.. ಒಬ್ಬ ಅನಾಥನನ್ನು ಸಂಪತ್ ಮತ್ತು ಜಯಶ್ರೀ ದಂಪತಿಗಳು ಸಾಕಿರುತ್ತಾರೆ.. ಆತ ಮನೆಯ ಹಿರಿಮಗನಂತೆ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಂಡು.. ಮನೆಯಾಳಿನ ರೀತಿಯಲ್ಲಿ ದುಡಿಯುತ್ತಿರುತ್ತಾರೆ..
ಇಲ್ಲಿ ಅವರ ಮುಗ್ಧ ಅಭಿನಯ ನೋಡಬೇಕು.. ತಾನು ಆ ಪಾತ್ರದೊಳಗೆ ಇಳಿದು ತನ್ಮಯತೆಯಿಂದ ಅಭಿನಯಿಸಿರುವುದು ನೋಡೋಕೆ ಚಂದ.. ತನ್ನನ್ನು ಸಾಕಿದವರು ದೇವರೇ ಎನ್ನುವಷ್ಟು ಭಕ್ತಿ ತೋರುವ ಅಭಿನಯ..
ಸಿನಿಮಾ ಮುಂದುವರಿದಂತೆಲ್ಲ ಅವರ ಮುಗ್ಧತನ.. ಅವರಿಗೆ ಮುಳುವಾಗಿ ಮನೆಯಿಂದ ಹೊರಬರುವಂತೆ ಮಾಡುತ್ತದೆಯಾದರೂ.. ಅವರ ಸಾಕು ತಂದೆಯರ ಮೇಲಿನ ಮಮಕಾರ ಕಡಿಮೆಯಾಗುವುದಿಲ್ಲ..
ತನ್ನ ಸಾಕು ತಾಯಿ ತನ್ನ ಗೆಳತಿಗೆ ಮಾತುಕೊಟ್ಟಿದ್ದು, ಆಕೆಯ ಮಗಳನ್ನು ತನ್ನ ಮಗನಿಗೆ ತಂದು ಕೊಳ್ಳುವ ಮಾತು ನೀಡಿರುತ್ತಾಳೆ.. ಆದರೆ ಆಕೆಯ ಮಗ ಅದನ್ನು ತಿರಸ್ಕರಿಸಿ, ತಾನು ಇನ್ನೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ನಿರಾಕರಿಸಿದಾಗ.. ಹಿಂದೆ ಮುಂದೆ ಯೋಚಿಸದೆ ತಾನು ಮದುವೆಯಾಗುತ್ತೇನೆ ಎಂದು ಹೇಳುವ ದೃಶ್ಯ ಸೊಗಸಾಗಿದೆ..
ಅವರ ಮುಗ್ಧತೆಯ ಅಭಿನಯವೇ ಈ ಚಿತ್ರಕ್ಕೆ ಶ್ರೀ ರಕ್ಷೆ. ಪ್ರತಿ ಹಂತದಲ್ಲೂ ತಂದೆತಾಯಿಯ ಮೇಲಿನ ಪ್ರೀತಿ.. ಒಡಹುಟ್ಟಿದವರೇ ಆಗದಿದ್ದರೂ, ಅವರನ್ನು ತನ್ನ ಸ್ವಂತ ತಮ್ಮಂದಿರು ಎಂದು ನೋಡಿಕೊಳ್ಳುವತ್ತ ಅವರ ಗಮನ.. ಈ ದೃಶ್ಯಗಳಲ್ಲಿ ಅವರ ಅಭಿನಯ ಸೊಗಸು..
ಅದಕೆ ಪೈಪೋಟಿ ನೀಡುವಂತೆ.. ಜಯಂತಿ..ಕಣ್ಣುಗಳಲ್ಲಿ ಅವರ ಅಭಿನಯ ಸೊಗಸು.. ಕಪ್ಪು ಬಿಳುಪು ವರ್ಣದಲ್ಲಿ ಮುದ್ದಾಗಿ ಕಾಣುವ ಅವರು.. ಅಭಿನಯ, ಸಂಭಾಷಣೆ ಹೇಳುವ ವೈಖರಿ ಸೊಗಸಾಗಿದೆ..
ಜಯಶ್ರೀ ಸಂಪತ್ ದಂಪತಿಗಳಾಗಿ ತೂಕಬದ್ಧ ಅಭಿನಯ..
ಹಾಸ್ಯಕ್ಕಾಗಿ ದ್ವಾರಕೀಶ್ ಮತ್ತು ಜಯ ಜೊತೆಯಲ್ಲಿ ಕಿಲಾಡಿಯಾಗಿ ಬಾಲಣ್ಣ ಅಭಿನಯ ಸೂಪರ್..
ಬೆಂಗಳೂರು ನಾಗೇಶ್, ವಜ್ರಮುನಿ, ರಾಘವೇಂದ್ರ ರಾವ್, ಗಣಪತಿ ಭಟ್, ಮಹದೇವಪ್ಪ, ಶ್ಯಾಮ್, ಕುಪ್ಪುರಾಜ್, ಲಕ್ಷ್ಮೀದೇವಿ, ಇಂದಿರಾ ಜಾರ್ಜ್ ಇವೆಲ್ಲರೂ ಒಬ್ಬರಿಗೊಬ್ಬರು ಮೀರಿಸುವಂತೆ ಕಥೆ ತಕ್ಕ ಹಾಗೆ ನಟಿಸಿದ್ದಾರೆ..
ಹಾಡುಗಳು ಗಮನಾರ್ಹವಾಗಿವೆ.. ಅದರಲ್ಲಿಯೂ ಒಂದು ರಾಜನ ಕಥೆಯನ್ನು ಹೇಳುತ್ತಾ.. ಅದು ತಮ್ಮ ಸಾಕು ತಂದೆಯರ ಕತೆಯನ್ನೇ ಹೇಳುವ "ಚಿನ್ನದಂಥ ರನ್ನದಂಥ ರಾಜ" ಸೊಗಸಾಗಿದೆ..
ಇದೊಂದು ವಿಭಿನ್ನ ಅನಿಸುವ ಚಿತ್ರ.. ಕಾರಣ ರಾಜಕುಮಾರ್ ಮತ್ತು ಸಹನಟ ನಟಿಯರ ಅಭಿನಯ ಚಿತ್ರಕ್ಕೆ ಹೆಚ್ಚಿನ ತೂಕ ತಂದಿರುವುದು ನಿಜ.. ಆ ಚಿತ್ರದ ಕೆಲವು ದೃಶ್ಯ ಚಿತ್ರಗಳು ಕೆಳಗಿವೆ..

No comments:
Post a Comment