Saturday, October 3, 2026

ಪ್ರತಿಷ್ಠೆ ಎಂದುಕೊಂಡು ನರಳುವ ಕುಲಗೌರವ 1971 (ಅಣ್ಣಾವ್ರ ಚಿತ್ರ ೧೩೦/೨೦೭)

ಒಂದು ಮಾತು ಒಂದು ಮಾತು ನಾನು ಹೇಳಲಿ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ನಾ ಹಾಡಬೇಕೆ ನೀವು ಕೇಳಬೇಕೆ - ಪಿ ಬಿ ಶ್ರೀನಿವಾಸ್ 
ಏ ಹುಡುಗಿ ಏ ಬೆಡಗಿ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಯಾರೇ ಬಂದವರು - ಪಿ ಸುಶೀಲ 
ರಾಗ ನಿನ್ನದು ತಾಳ ನನ್ನದು - ಪಿ ಸುಶೀಲ 
ನಾವಿಕನಾರೋ - ಪಿ ನಾಗೇಶ್ವರ ರಾವ್ 

ಟಿಜಿಲಿಂಗಪ್ಪ ನವರ ಸಂಗೀತದಲ್ಲಿ ಸುಮಧುರ ಹಾಡುಗಳಿವು. 

ಹಾಡುಗಳನ್ನು ಚಿ ಉದಯಶಂಕರ್, ಆರ್ ಎನ್ ಜಯಗೋಪಾಲ್ ಮತ್ತು ವಿಜಯನಾರಸಿಂಹ ರಚಿಸಿದ್ದಾರೆ.. 

ಸಂಭಾಷಣೆ ಚಿ ಉದಯಶಂಕರ್ ಅವರದ್ದು 

ಕಥೆ ಚಿತ್ರಕಥೆ - ಜಿ ಬಾಲಸುಬ್ರಮಣ್ಯಂ ಅವರದ್ದು 

ಛಾಯಾಗ್ರಹಣ ಪಿ ಎಸ್ ಪ್ರಕಾಶ್..  ರಾಜಕುಮಾರ್ ಅವರ ತ್ರಿಪಾತ್ರವನ್ನು ಆಗಿನ ಕಾಲದ ತಂತ್ರಜ್ಞಾನ ಉಪಯೋಗಿಸಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.. ನಿಜಕ್ಕೂ ಮೂರು ರಾಜಕುಮಾರ್ ಇದ್ದಾರೆ ಅನ್ನುವಂತೆ ಚಿತ್ರೀಕರಿಸಿರುವುದು ಈ ಚಿತ್ರದ ವಿಶೇಷ

ಕಥೆ ಒಂದು ಕುಟುಂಬದ ಮೂರು ತಲೆಮಾರಿನ ಏಳು ಬೀಳುಗಳ ಘಟನಾವಳಿಗಳು.. ಕುಟುಂಬದ ಗೌರವ ಮುಖ್ಯ ಎನ್ನುವ ಮೊದಲ ಪಾತ್ರ.. ಆದರೆ ಸಂದರ್ಭಕ್ಕೆ ಅನುಗುಣವಾಗಿ ಬದಲಾದ ಕಾಲಘಟ್ಟಗಳು ತಾಯಿ ಮತ್ತು ತಂದೆ ಮಗನನ್ನು ದೂರ ಮಾಡುತ್ತದೆ.. ಮೊಮ್ಮಗನ ಕಾಲಕ್ಕೆ ಎಲ್ಲರೂ ಒಂದುಗೂಡಿಸುವ ಮಟ್ಟಕ್ಕೆ ಬಂದು ನಿಲ್ಲುತ್ತದೆ.. 



ಭಾವನೆಗಳ ಮಹಾಪೂರ.. ಸಿಟ್ಟು.. ಅಂದುಕೊಂಡು ಬಂದಿದ್ದ ತಲೆಮಾರುಗಳ ನೀತಿ ಸಂಸ್ಕಾರ.. ಇದೆಲ್ಲವನ್ನು ದಿಕ್ಕರಿಸಿ ಪ್ರೀತಿಯ ಹಿಂದೆ ಹೋಗೋದು.. ಅಲ್ಲಿ ಬೇಡದ ಅನುಮಾನ.. ಅದರಿಂದ ದೂರ ದೂರವಾದ ಸಂಸಾರ.. ಮತ್ತೆ ಅದೇ ತಲೆಮಾರಿನ ಮುಂದಿನ ಕತೆ ಎನ್ನುವಂತೆ ಮತ್ತೆ ಮೊಮ್ಮಗನ ಪ್ರೀತಿ.. ಹೇಗೆ ಒಂದು ವೃತ್ತದಂತೆ ಪೂರ್ಣ ಸುತ್ತಿ ಬರುವ ಕತೆಯಲ್ಲಿ ಹಲವಾರು ಪಾತ್ರಗಳು ಬರುತ್ತವೆ.. 

ಪ್ರಮುಖವಾಗಿ ಇಲ್ಲಿ ಉಲ್ಲೇಖಿಸ ಬೇಕಾದ್ದು ರಾಜಕುಮಾರ್ ಅವರ ಮೂರು ಪಾತ್ರ.. ಮೂರು ತಲೆಮಾರಿನ ಪ್ರತಿನಿಧಿಯಾಗಿ ನಿಂತಿರುವ ಪಾತ್ರಗಳು.. ಅದರ ಅಂಗೀಕಾ ಅಭಿನಯ, ಧ್ವನಿಯಲ್ಲಿ ಏರಿಳಿತ, ನೆಡೆಯುವ ಭಂಗಿ.. ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.. ಒಂದು ಪಾತ್ರದ ಅಭಿನಯ ಇನ್ನೊಂದರ ಮೇಲೆ ತನ್ನ ಛಾಯೆಯನ್ನು ಮೂಡಿಸುವುದಿಲ್ಲ.. ಅದು ಇಲ್ಲಿ ಮುಖ್ಯ.. ಮೂರು  ಪಾತ್ರಗಳು ಮತ್ತೆ ಮೂವರು ರಾಜಕುಮಾರ್ ಇದ್ದಾರೆ ಅನ್ನಿಸುವಷ್ಟು ಸಹಜವಾಗಿದೆ.. 

ಆಗಿನ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತಹ ಅಭಿನಯ ಮೂರು ಪಾತ್ರಗಳದ್ದು.. 

ಜಯಂತಿ ಮುಗ್ಧತೆ ಮೊದಲ ಹಂತದಲ್ಲಿದ್ದರೆ.. ನಂತರದ್ದು ಸಹಜವಾಗಿ ವಯೋಗುಣಕ್ಕೆ ಅನುಗುಣವಾಗಿ ನಿಲ್ಲುವಂತಹ ಪಾತ್ರಾಭಿನಯ.. 

 ಇವರ ಜೊತೆಯಲ್ಲಿ ನರಸಿಂಹರಾಜು, ಭಾರತಿ, ಬಾಲಕೃಷ್ಣ, ಮಹದೇವಪ್ಪ, ಜಯ, ಇಂದಿರಾ, ಎಂ ಏನ್ ಲಕ್ಷ್ಮೀದೇವಿ.. ಆರ್ ನಾಗೇಂದ್ರರಾವ್, ಸಂಪತ್  ಇದ್ದಾರೆ.

ಚಿತ್ರಕಥೆಯನ್ನು ಇನ್ನಷ್ಟು ಬಿಗಿ ಮಾಡಬಹುದಿತ್ತು.. ಈಗ ನೋಡಿದರೆ ಅನಿಸುತ್ತದೆ.. ಆದರೆ ಆ ಚಿತ್ರೀಕರಣ ಸಮಯದಲ್ಲಿ ಇದ್ದ ಮಿತವಕಾಶದಲ್ಲಿ  ಒಂದು ಉತ್ತಮ ಚಿತ್ರವನ್ನು ನಿರ್ಮಾಣ ಮಾಡುವ ಧೈರ್ಯ ಮಾಡಿದ್ದವರು ಶ್ರೀ ಈಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ಮೊದಲ ಬಾರಿಗೆ ನಿರ್ಮಾಪಕರಾದ ಎನ್ ವೀರಾಸ್ವಾಮಿ ಅವರು.. 

ರಾಜಕುಮಾರ್ ಅವರ ಅದ್ಭುತ ಅನಿಸುವಂಥಹ ಮೂರು ಪಾತ್ರಗಳು ಈ ಚಿತ್ರದ ವಿಶೇಷ.. 
















No comments:

Post a Comment