Friday, August 15, 2025

ಕಾಣದ ಕಡಲಿನ ಮುತ್ತು ಮೋಹಿನಿ ಭಸ್ಮಾಸುರ 1966 (ಅಣ್ಣಾವ್ರ ಚಿತ್ರ ೭೭/೨೦೭)

ಕಡಲಲ್ಲಿ ಮುತ್ತನ್ನು ಆರಿಸುವಾಗ ಅನೇಕ ಬಾರಿ ಕೈಯಲ್ಲಿ ಸಿಕ್ಕ ಮುತ್ತನ್ನು ಕಪ್ಪೆ ಚಿಪ್ಪು ಅಂತಲೋ ಅಥವ ಕಲ್ಲು ಅಂತಾನೋ ಬಿಸಾಡಿ ನಂತರ ಅರೆ ಅದೇ ಮುತ್ತಾಗಿತ್ತು ಅನಿಸುವಂತೆ ಮಾಡುತ್ತದೆ.. ಪೇಚಾಡಿದರೂ ಮತ್ತೆ ಸಿಗುವುದು ಕಷ್ಟ ಸಾಧ್ಯ.. 

ಹಾಗೆಯೇ ಈ ಸಿನಿಮಾ ಕೂಡ ಅನೇಕ ಪ್ರಯತ್ನಗಳ ಬಳಿಕ ವಿಷಯ ಗೊತ್ತಾಗಿದ್ದು ಈ ಚಿತ್ರದ ತುಣುಕಾಗಲಿ ಚಿತ್ರವಾಗಲಿ ಎಲ್ಲೂ ಲಭ್ಯವಿಲ್ಲ ಎಂದು.. ಕಾರಣಗಳು ಹತ್ತಾರು ಆದರೆ ಈ ಚಿತ್ರವನ್ನು ನೋಡುವ ಭಾಗ್ಯ ನಮಗಿಲ್ಲ ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ.. 

ಇರಲಿ ಕೆಲವೊಮ್ಮೆ ಹಾಗಿತ್ತು ಹೀಗಿತ್ತು ಅನ್ನುವ ಕಲ್ಪನೆ ವಾಸ್ತವಕ್ಕಿಂತ ಖುಷಿ ಕೊಡುವುದು ಸಹಜ.. ಹಾಗೆ ಈ ಚಿತ್ರವೂ ಕೂಡ.. 

ಅನೇಕ ಸಂದರ್ಶಗಳನ್ನು ಈ ಚಿತ್ರ ಬಗ್ಗೆ ಕೇಳಿದಾಗ ನೋಡಿದಾಗ ತಿಳಿದದ್ದು ರಾಜಕುಮಾರ್ ಅವರ ಈ ಪೌರಾಣಿಕ ಚಿತ್ರದ ಅಭಿನಯ ಅಮೋಘವಾಗಿದೆ ಎಂದು.. ಹಿಂದಿನ ಎರಡು ತಲೆಮಾರಿನವರು ನೋಡಿದವರು ಹೇಳುವ ಮಾತಿದು.. 

ಇರಲಿ ಸಿಕ್ಕಷ್ಟೇ ಭಾಗ್ಯ. ಕೇಳಿದ್ದಷ್ಟೇ ಪುಣ್ಯ ಅನ್ನುವ ಮಾತಿನಂತೆ.. ರಾಜಕುಮಾರ್ ಅವರ ಈ ಚಿತ್ರ ಮರೀಚಿಕೆಯಾದರೂ ಅಂತಹ ಕಾಲಘಟ್ಟದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಪುಣ್ಯ ಅಲ್ಲವೇ.. 


 

ಎಸ್ ಎಸ್ ವರ್ಮಾ ನಿರ್ದೇಶನವಿದ್ದ ಈ ಚಿತ್ರವನ್ನು ಟಿ ಮಾದರ್ ಹಾಗೂ ವಿ ಎಂ ಕುಪ್ಪಯ್ಯ ಚೆಟ್ಟಿಯಾರ್ ನಿರ್ಮಿಸಿದ್ದರು.  .. 

ಟಿ ಛಲಪತಿ ರಾವ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ ಉದಯಕುಮಾರ್, ಬಾಲಕೃಷ್ಣ ಅಭಿನಯಿಸಿದ್ದರು.   

ರಾಜಕುಮಾರ್ ಅವರು ಭಸ್ಮಾಸುರನಾಗಿ ಅಮೋಘ ಅಭಿನಯ ನೀಡಿದ್ದಾರೆ ಅಂತ ಓದಿದ್ದೆ 

ಹಾಗೆಯೇ ಉದಯಕುಮಾರ್ ಅವರ ಶಿವನ ಪಾತ್ರಧಾರಿ ಕೂಡ.. ಉದಯಕುಮಾರ್ ಶಿವನ ಪಾತ್ರದಲ್ಲಿ ಪ್ರಾಯಶಃ ಮೊದಲ ಬಾರಿಗೆ ಅಂತ ನನ್ನ ಅನಿಸಿಕೆ 

ಹಾಗೆಯೇ ಬಾಲಕೃಷ್ಣ ನಾರದನ ಪಾತ್ರದಲ್ಲಿ. 

ಒಂದು ವಿಶೇಷ ಚಿತ್ರವಿದು .. ಆದರೆ ನೋಡುವ ಅವಕಾಶವಿಲ್ಲ.. ಅದೇ ಬೇಸರ ಇರಲಿ.. ಇರಲಿ .. ನೋಡೋಣ ನಮ್ಮ ಜೀವಿತ ಕಾಲದಲ್ಲಿ ಸಾಧ್ಯ ಸಾಧ್ಯತೆಯ ಬಗ್ಗೆ..   ಆಶಾವಾದಿಯಾಗಿರೋಣ.. 

No comments:

Post a Comment