Sunday, April 20, 2025

ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ 1966 (ಅಣ್ಣಾವ್ರ ಚಿತ್ರ ೭೨/೨೦೭)

ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ.. ಬಂಗಾಳಿ ಭಾಷೆಯ ಪ್ರಸಿದ್ಧ ಲೇಖಕ ಬರಹಗಾರ ಶರತ್ ಚಂದ್ರ ಚಟರ್ಜೀ ಅವರ ಚಂದ್ರನಾಥ್ ಕಾದಂಬರಿ ಆಧಾರಿತ ಚಿತ್ರ.. 


ಕೆ ಎಸ್ ಎಲ್ ಸ್ವಾಮಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಉದಯಕುಮಾರ್, ಬಿ ವಿ ರಾಧಾ, ಬಾಲಕೃಷ್ಣ ಮುಂತಾದವರ ಜೊತೆ ಚಿತ್ರ ತಯಾರಿಕೆ ಮಾಡಿದ್ದಾರೆ. 


ಶ್ರೀನಿವಾಸ್ ಅನ್ನುವ ನಟ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಗೆ ಪರಿಚಯವಾಗಿ ಮುಂದೆ ತೂಗುದೀಪ ಶ್ರೀನಿವಾಸ್ ಅಂತಾನೆ ಪ್ರಸಿದ್ಧಿಯಾದರು. 

ಪಿ ಬಿ ಶ್ರೀನಿವಾಸ್ ಅವರು ಗಾಯಕರಾಗಿ ಪ್ರಸಿದ್ಧಿಯಾದವರು.. ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಹಾಡಿನ ಮೂಲಕ ಬಂದಿದ್ದಾರೆ.

ವಿಜಯಭಾಸ್ಕರ್ ಅವರ ಅದ್ಭುತ ಸಂಗೀತದಲ್ಲಿ ಎಂಟು ಸುಮಧರ ಸಂಗೀತ ನೀಡಿದ್ದಾರೆ.. 

ಆರ್ ಎನ್ ಜಯಗೋಪಾಲ್, ನಂಜರಾಜ್ ಅರಸ್, ಮತ್ತು ಕೆ ಎಸ್ ಎಲ್ ಸ್ವಾಮಿ ಅವರ ಸಾಹಿತ್ಯ ಸೊಗಸಾಗಿದೆ. 

ಈ ಸಾಹಿತ್ಯಕ್ಕೆ ದನಿಯಾಗಿ ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಮತ್ತು ಎಲ್ ಆರ್ ಈಶ್ವರಿ ಇದ್ದಾರೆ

ಇವರೆಲ್ಲರ ಶ್ರಮವನ್ನು ಆರ್ ಎನ್ ಕೃಷ್ಣಪ್ರಸಾದ್ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರಾಗಿ!

ಆರ್ ಜಿ ಕೇಶವ್ ಮೂರ್ತಿ ಅವರು ನಿರ್ಮಾಪಕರಾಗಿ ಈ ಅದ್ಭುತ ಚಿತ್ರವನ್ನು ತಂದಿದ್ದಾರೆ.. ಆದರೆ ದುರದೃಷ್ಟವಶಾತ್ ಈ ಚಿತ್ರದ ಎಲ್ಲೂ ಸಿಗದ ಕಾರಣ.. ಈ ಚಿತ್ರವನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗಿದ್ದೀವಿ.. ಹಾಡುಗಳು ಸಿಗ್ತಾ ಇಲ್ಲ ಆದರೆ ಧ್ವನಿ ಸುರಳಿ ಲಭ್ಯವಿರುವುದರಿಂದ ಅದನ್ನಾದರೂ ಕೇಳಿ ಕುಶಿ ಪಡೋಣ ಅಲ್ಲವೇ.. 


Audio songs of Thoogudeepa kannada movie


 

No comments:

Post a Comment