Saturday, April 27, 2024

ಹುತ್ತದ ಒಳಗೆ ಇರುವ ನಾಗರಾಜನಿಗೆ ಪೂಜೆ ..ಸಿಕ್ಕಾಗ 1965 (ಅಣ್ಣಾವ್ರ ಚಿತ್ರ ೫೩/೨೦೭)

 ಗೆದ್ದಲು ಹುತ್ತ ಕಟ್ಟುತ್ತವೆ ಆದರೆ ಆದರೆ ಅಲ್ಲಿ ಹಾವುಗಳು ವಾಸ ಮಾಡುತ್ತವೆ ,, ನಿರ್ಮಾಪಕರು, ನಿರ್ದೇಶಕರು,  ನಟ ನಟಿಯರು, ತಂತ್ರಜ್ಞರು, ಕಲಾವಿದರು, ಸಹಾಯಕರು ಹೀಗೆ ಹತ್ತಾರು ನೂರಾರು ಕೈಗಳ ಪರಿಶ್ರಮ ಒಂದು ಸಿನಿಮಾ ಸಿದ್ಧವಾಗುತ್ತದೆ.. ಆ 

ಆದರೆ ನೆಗೆಟಿವ್ ಸುಟ್ಟು ಹೋಗಿಯೋ, ಡಿಜಿಟಲೀಕರಣ ಮಾಡುವ ಮುಂಚೆಯೇ ನೆಗೆಟಿವ್ ಪ್ರತಿಗೆ ಬೂಸ್ಟು ಹಿಡಿದುಮ್ ಅಥವ ನೆಗೇಟಿವ್ಸ್ ಮತ್ತೆ ಸರಿ ಮಾಡಲಿಕ್ಕೆ ಆಗದಷ್ಟು ಹಾಳಾಗಿರುವುದು ಹೀಗೆ ಹತ್ತಾರು ಕಾರಣಗಳಿಂದ ಮತ್ತೆ ಆ ಸಿನೆಮಾವನ್ನು ವರ್ಷಗಳ ನಂತರ ನೋಡಲಿಕ್ಕೆ ಸಾಧ್ಯವಾಗದ ಪರಿಸ್ಥಿತಿ ಇರಬಹುದು.. ಅಂತಹ ಹತ್ತಾರು ಚಿತ್ರಗಳು ನಮ್ಮ ಕಣ್ಣಿಗೆ, ಮನಸ್ಸಿಗೆ ಇಳಿಯಲಿಕ್ಕೆ ನಕಾರ ಧೋರಣೆ ತೋರುತ್ತವೆ ಅಂತಹ ಒಂದು ಚಿತ್ರ ನಾಗಪೂಜಾ.. 

೧೯೬೫ರಲ್ಲಿ ತೆರೆಗೆ ಬಂದ ಚಿತ್ರ 


ಎ ಎಸ್ ಭಕ್ತವತ್ಸಲಂ ಮತ್ತು ಎನ್ ಗೀತಾದೇವಿ ನಿರ್ಮಾಪಕರಾಗಿ, ಡಿ ಎಸ್ ರಾಜಗೋಪಾಲ್ ಅವರು ಗೀತಪ್ರಿಯ ಅವರ ಚಿತ್ರಕಥೆಯನ್ನು ಆಧಾರವಾಗಿಟ್ಟುಕೊಂಡು ಜಾನಕಿರಾಮ್ ಅವರ ಛಾಯಾಗ್ರಹಣದಲ್ಲಿ ಟಿ ಜಿ ಲಿಂಗಪ್ಪನವರ ಸಂಗೀತ ನಿರ್ದೇಶನದಲ್ಲಿ ತೆರೆಗೆ ತಂದ ಚಿತ್ರವೇ ಈ ನಾಗ ಪೂಜ.. 

ರಾಜಕುಮಾರ್, ರಾಘವೇಂದ್ರ ರಾವ್, ಹನುಮಂತ ರಾವ್ ಲೀಲಾವತಿ, ಪಾಪಮ್ಮ, ರಾಜಶ್ರೀ ಮುಂತಾದವರು ಅಭಿನಯಿಸಿದ ಚಿತ್ರ.. 

ಎಲ್ಲೆಡೆ ಹುಡುಕಿದರೂ ಕಾಣದ ಚಿತ್ರವನ್ನು ಬಿಟ್ಟು ಮುಂದುವರೆಯಲು ಇಷ್ಟ ಪಡದೆ, ಸುಮಾರು ಒಂದು ತಿಂಗಳಿನ ಹುಡುಕಾಟದಲ್ಲಿ ಕೂಡ ಕಾಣದ ಚಿತ್ರವಾಯ್ತು ಈ ಸಿನಿಮಾ.. ಇರಲಿ ಹುಡುಕಾಟ ಮುಂದುವರೆಯುತ್ತದೆ. ಯು ಟ್ಯೂಬಿನಲ್ಲಿ ಬರಿ ಹಾಡುಗಳ ಲಿಂಕ್ ಇದೆ. ಹಾಗಾಗಿ ಅದನ್ನು ಮತ್ತೆ ಇಲ್ಲಿಗೆ ಹಾಕಲು ಇಷ್ಟ ಪಡದೆ.. ಬರಿ ಚಿತ್ರದ ಪೋಸ್ಟರ್ ಹಾಕಿದ್ದೀನಿ.. 

ಸಿನಿಮಾ ನೋಡಲು ಸಿಕ್ಕರೆ, ಖಂಡಿತ ಅದರ ಬಗ್ಗೆ ಒಂದಷ್ಟು ಬರೆಯುತ್ತ, ಆ ಚಿತ್ರದ ನೀತಿ ಪಾಠಗಳನ್ನು ಅಳವಡಿಸಿಕೊಳ್ಳಲು ಯತ್ನ ಮಾಡುವೆ.. 

ಮತ್ತೊಂದು ಚಿತ್ರದ ಮೂಲಕ ಮತ್ತೆ ಸಿಗೋಣ!






No comments:

Post a Comment