Sunday, June 5, 2016

ಪುಟ್ಟಣ್ಣ ಕಣಗಾಲ್ - ಇಲ್ಲದ ೩೧ ಸಂವತ್ಸರಗಳು - 2016

ಮಾಂತ್ರಿಕತೆ ಎಂದರೆ ಏನು.. ಮೈದಾಸ ಟಚ್ ಅಂದರೆ ಏನು.. ಹೀಗೆಲ್ಲಾ ಶಾಲಾ ದಿನಗಳಲ್ಲಿ ಅದು ಬಾಲ್ಯದ ದಿನಗಳಲ್ಲಿ ಮನದಲ್ಲಿ ಏಳುತ್ತಿದ್ದ ಪ್ರಶ್ನೆಗಳು. 

ಉತ್ತರ ಅಸ್ಪಷ್ಟವಾಗಿ ಅಲ್ಲಿ ಇಲ್ಲಿ ಸಿಕ್ಕಿದ್ದರೂ, ಒಂದು ಪರಿಪೂರ್ಣ ಉತ್ತರ ಸಿಗುವುದಕ್ಕೆ ಕಷ್ಟವಾಗಿತ್ತು. ಕನ್ನಡ ಹಳೆಯ ಚಿತ್ರಗಳು ನೋಡಿದಾಗ, ಟಂಗ್ ಅಂತಾ ಮಾಯಾ ಆಗೋದು, ಮತ್ತೆ ದಿಡೀರ್ ಪ್ರತ್ಯಕ್ಷ ಆಗೋದು ಇವೆನ್ನೆಲ್ಲಾ ಮ್ಯಾಜಿಕ್ ಅಥವಾ ಮಾಂತ್ರಿಕತೆ ಎಂದು ತಿಳಿದಿದ್ದ ದಿನಗಳು. ಹಾಗೆಯೇ ಒಂದು ಮಂತ್ರ ದಂಡದಲ್ಲಿ ಮುಟ್ಟಿದ ತಕ್ಷಣ ಮನುಷ್ಯ ಪಾರಿವಾಳ, ಕಲ್ಲು ಇಲ್ಲವೇ ಬೂದಿಯಾಗೋದು ಅಥವಾ ಮುಟ್ಟಿದ್ದು ಚಿನ್ನವಾಗೋದು ಇವೆನ್ನೆಲ್ಲ ನೋಡಿ ನೋಡಿ ಇದೆ ಮೈದಾಸ್ ಟಚ್ ಇರಬಹುದು ಎಂದುಕೊಂಡಿದ್ದು ಉಂಟು. 

ಆದರೆ ಕಾಲವನ್ನು ತಡೆದೋರು ಯಾರೂ ಇಲ್ಲಾ ಹಾಗೆಯೇ ಬರುವಂಥಹ ಜ್ಞಾನವನ್ನು ಅಡ್ಡಗಟ್ಟಿದವರು ಯಾರೂ ಇಲ್ಲ ಅಲ್ಲವೇ.. 

ಚಲನ ಚಿತ್ರ ನೋಡಿ ನೋಡಿ, ಅದರೊಳಗಿನ ಸಂದೇಶಗಳನ್ನೂ ನೀತಿ ಪಾಠಗಳನ್ನೂ ಕಲಿಯುತ್ತಾ, ಪುಸ್ತಕ ಕೊಡುತ್ತಿದ್ದ ಜ್ಞಾನಕ್ಕೆ ಸೆಡ್ಡು ಹೊಡೆದು ಈ ದೃಶ್ಯ ಮಾಧ್ಯಮ ನೀಡುತ್ತಿದ್ದ ಜ್ಞಾನಕ್ಕೆ ಶರಣಾದ  ಆ ಪರ್ವಕಾಲದಲ್ಲಿ ಸಿಕ್ಕಿದ್ದು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮತ್ತು ಅನೇಕ ಉತ್ತಮ ಕನ್ನಡ ಚಿತ್ರಗಳು. 

ಇಂದು ನಾ ಯೋಚಿಸುವ ಪರಿ, ಜೀವನವನ್ನು ನೋಡುವ ಪರಿ ಏನಾದರೂ ಅರ್ಥ ಕೊಡಬೇಕೆಂದರೆ ಅಥವಾ ಅದನ್ನು ವಿವರಿಸಬೇಕೆಂದರೆ ಅದಕ್ಕೆ ಮೂಲ ಪ್ರೇರಕಗಳು ಚಲನಚಿತ್ರಗಳು. 

ಹಾಗಾಗಿಯೇ ಈ ಬ್ಲಾಗ್ ಮತ್ತು ಬ್ಲಾಗ್ ನಲ್ಲಿ ಮೂಡುವ ಲೇಖನಗಳು. 

ಪುಟ್ಟಣ್ಣ ಕಣಗಾಲ್ ಈ ಚಿತ್ರ ಜಗತ್ತನ್ನು ಅಗಲಿ ೩೧ ಸಂವತ್ಸರಗಳು ಕಳೆದವು.  ಆದರೆ ಇಂದಿಗೂ ನಿರ್ದೇಶಕ ಎನ್ನುವ ಮಾತು ಈ ಭಾರತೀಯ ಚಿತ್ರರಂಗದಲ್ಲಿ ಬಂದಾಗ, ಕರುನಾಡಿನ ಈ ನಿರ್ದೇಶಕನ ಹೆಸರು ಆ ಪಟ್ಟಿಯಲ್ಲಿ ಇದ್ದೆ ಇರುತ್ತದೆ. ಅಂಥಹ ಅದ್ಭುತ ನಿರ್ದೇಶಕ, ತಾಂತ್ರಿಕ ಹಾಗೂ ತನ್ನ ಮನದಲ್ಲಿ ಇದ್ದಂತೆ ಚಿತ್ರ ಬರಬೇಕು ಎಂದು ಯಾವ ಮುಲಾಜಿಗೂ ಜಗ್ಗದೆ, ಚಿತ್ರಗಳನ್ನು ಕೊಡುತ್ತಿದ್ದ ಪ್ರತಿಭಾವಂತ. 

ಅವರ ನಿರ್ದೇಶನದಲ್ಲಿ ಮೂಡಿ ಬಂದ ಅಷ್ಟೂ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ, ಒಂದು ಚಿತ್ರದ ವಿಷಯ ಇನ್ನೊಂದರಲ್ಲಿ ಬರುತ್ತಿರಲಿಲ್ಲ. ಹಾಗೆಯೇ ಕರುನಾಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಿ, ಒಂದು ರೀತಿಯಲ್ಲಿ ಪ್ರವಾಸ ಉದ್ಯಮಕ್ಕೂ ನೆರವಾಗಿದ್ದು ಅವರ ಚಿತ್ರಗಳು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. 

ಈ ಕೆಳಗಿನ ಎಲ್ಲಾ ಚಿತ್ರಗಳನ್ನು ನೋಡಿ, ನನಗೆ ಈ ಚಿತ್ರಗಳು ತಾಕಿದ ಬಗೆ ಒಂದಷ್ಟು ಅಕ್ಷರಗಳಲ್ಲಿ ನನ್ನ ಅಭಿಪ್ರಾಯ ಬರೆದಿದ್ದೇನೆ. ಇದು ಕಾಣದ ಗುರುಗಳ ಸ್ಥಾನದಲ್ಲಿ ಕೂತಿರುವ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾಂಜಲಿ ಮತ್ತು ಗೌರವ ಪೂರ್ವಕ ನುಡಿ ನಮನಗಳು. 
ಸಾವಿರ ಮೆಟ್ಟಿಲು (2006) 

ಪೂಜ್ಯ ಗುರುಗಳೇ ನಿಮ್ಮ ಚಿತ್ರಗಳು ಸದಾ ನಮ್ಮ ಮನದಲ್ಲಿ ಜೀವಂತ. ನೀವು ಕರುನಾಡಿಗೆ ಮತ್ತು ಚಿತ್ರ ಜಗತ್ತಿಗೆ ಇತ್ತ ಅಷ್ಟೂ ಚಿತ್ರಗಳು ಮಾಣಿಕ್ಯವೇ. ಪ್ರತಿ ಚಿತ್ರವೂ ಕಲಿಕೆ ಒಂದು ವಿಶ್ವವಿದ್ಯಾಲಯದ ಪಾಠಗಳಿದ್ದಂತೆ.  ನಿಮ್ಮ ಚಿತ್ರಗಳಿಂದ ಕಲಿತಿದ್ದು ಕಲಿಯಬೇಕಿದ್ದು ಬೇಕಾದಷ್ಟು ಇವೆ.

ನಿಮ್ಮದೇ ಚಿತ್ರಗಳಿಂದ ನಿಮಗೆ ನುಡಿ ನಮನಗಳು.. ಈ ಚಿತ್ರಗಳನ್ನು ನೀಡಿದ ನಿಮಗೆ ಮತ್ತು ನಿಮ್ಮ ಪ್ರತಿಭೆಗೆ ಒಂದು ಸಲಾಂ. 

1 comment:

  1. ಇಂದು ಕನ್ನಡ ಚಿತ್ರ ರಂಗ ಮರೆತೇ ಹೋಗಿರುವ ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಒಬ್ಬ ಅಭಿಮಾನಿ ಬರೆದ ಇಂತಹ ಬರೆದ ಮಾತುಗಳಿಗೆ ಹೆಚ್ಚು ಮೌಲ್ಯ ಬಂದಿದೆ. ನಿಮ್ಮ ನುಡಿ ನಮನಗಳು ಒಬ್ಬ ಶ್ರೇಷ್ಠ ನಿರ್ದೇಶಕನಿಗೆ ಗೌರವಯುತವಾಗಿ ಸಲ್ಲಿಕೆಯಾಗಿವೆ .

    ReplyDelete