ಕರುನಾಡು ಕನ್ನಡಮ್ಮನ ದೇವಾಲಯ
ಆ ದೇವಾಲಯದ ಅರ್ಚಕರು ಅನೇಕ
ಪ್ರತಿ ಅರ್ಚಕರು ತಮ್ಮ ತನು ಮನಗಳಿಂದ ಆ ದೇವಿಯನ್ನು ಅರ್ಚಿಸಿ
ಕೆಲವರು ನಟವರರಾದರು..!!!!!
ಕೆಲವರು ನಟಿಯರಿಗೆ ವರರಾದರು!!!
ಆದರೆ ನಮ್ಮ ಅಣ್ಣ ರಾಜಣ್ಣ ವರ ಪಡೆದ ನಟರಾಗಿ ವರನಟರಾದರು!!!
ಎಲ್ಲಕಡೆ ಕೂಗು..ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ ಅಂತ ಹೇಳುತ್ತಾರೆ..
ಆದ್ರೆ ನನ್ನ ಕೂಗು..ಅಣ್ಣ ಹೋಗಿದ್ದರಲ್ಲವೇ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುವುದು
ಅವರು ನಮ್ಮ ಹೃದಯ ಸಿಂಹಾಸನಧೀಶರಾಗಿ ಅಜರಾಮರ
ಆವರ ಪಾತ್ರಗಳು, ಸಂಭಾಷಣೆ, ಅಭಿನಯ, ಹಾಡುಗಾರಿಕೆ ಇವನ್ನು ನಾವು ನೂರು ಜನ್ಮ ಎತ್ತಿದರು ಮರೆಯಲು ಸಾಧ್ಯವಿಲ್ಲ..ಅಂಥಹ ಪಾತ್ರಗಳ ಪಿತಾಮಹ ನಮ್ಮ ರಾಜಣ್ಣ
ಕೆಲವರು ಇರುವಾಗಲೇ ಮರೆಯಾಗುತ್ತಾರೆ...ಕೆಲವರು ಮರೆಯಾದಮೇಲೆ ಇರುತ್ತಾರೆ ಆದರೆ ನಮ್ಮ ಅಣ್ಣ..ಸದಾ ಕಣ್ಣ ಮುಂದೆಯೇ ಇರುತ್ತಾರೆ ನಮ್ಮ ದಿನ ನಿತ್ಯದ ಜೀವನದ ಹಾದಿಯಲ್ಲಿ..
ನಿಮ್ಮ ಪಾತ್ರದ ಹರವು ನಮ್ಮ ಕಾವೇರಿ ನದಿಯ ಹರವಿಗಿಂತ ಮಿಗಿಲು..
ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು..
No comments:
Post a Comment